»   » ಕತ್ರೀನಾಳ ದೇಹಸಿರಿ ಹಾಟೆಸ್ಟ್ : ಸಮೀಕ್ಷೆ

ಕತ್ರೀನಾಳ ದೇಹಸಿರಿ ಹಾಟೆಸ್ಟ್ : ಸಮೀಕ್ಷೆ

Posted By:
Subscribe to Filmibeat Kannada

ಈ ದಶಕದ ಅತ್ಯಂತ ಹಾಟ್ ದೇಹಸಿರಿ ಉಳ್ಳವರನ್ನು ಆಯ್ಕೆ ಮಾಡಲು ಇತ್ತೀಚೆಗೆ ನಡೆಸಲಾದ ಆನ್ ಲೈನ್ ಸಮೀಕ್ಷೆಯಲ್ಲಿ ಬೆಡಗಿ ಕತ್ರೀನಾ ಕೈಫ್ ಅಗ್ರಸ್ಥಾನ ಪಡೆದಿದ್ದಾರೆ. ಶೇ. 33 ರಷ್ಟು ಜನ ಕತ್ರೀನಾಳನ್ನು ಆಯ್ಕೆ ಮಾಡಿದ್ದಾರೆ. ಏನಿಲ್ಲಾ ಅಂದರೂ ಸುಮಾರು 35 ಸಾವಿರ ಜನ ಈ ಆನ್ ಲೈನ್ ಸಮೀಕ್ಷೆಯಲ್ಲಿ ಮತ ಹಾಕಿದ್ದರು.

ಭುವನ ಸುಂದರಿಯರ ಈ ನಾಡಿನಲ್ಲಿ ಆಮದು ಬೆಡಗಿ ಕತ್ರೀನಾ, ದೇಹ ಸೌಂದರ್ಯದ ವಿಷಯದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಬೆಂಗಾಳಿ ಬೆಡಗಿ ಬಿಪಾಶ ಬಸುಗೆ ಶೇ.13, ಐಶ್ವರ್ಯಾ ರೈ ಬಚ್ಚನ್ ಗೆ ಶೇ.10 ರಷ್ಟು ಮಾತ್ರ ಮತಗಳು ಬಿದ್ದಿವೆ. ವಿಶ್ವಸುಂದರಿ ಪ್ರಿಯಾಂಕಾ ಛೋಪ್ರಾಗೆ ಇನ್ನು ಕಡಿಮೆ ಶೇ.9 ಜನ ಮಾತ್ರ ಮೆಚ್ಚುಗೆ ಸೂಚಿಸಿದ್ದಾರೆ.

ನೀಳಕಾಯದ ಕತ್ರೀನಾ, ಇತ್ತೀಚಿಗೆ ಇನ್ನಷ್ಟು ದೈಹಿಕ ಕಸರತ್ತು ಮಾಡಿ, ದೇಹದ ತೂಕ ಇಳಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯಂತೆ ಲಂಗ ದಾವಣಿ ಧರಿಸಿ, ಸೊಂಟ ಬಳುಕಿಸುವ ಉತ್ಸಾಹದಲ್ಲಿರುವ ಕತ್ರೀನಾ, ಸಹಜ ಸುಂದರಿ. ಕತ್ರೀನಾ ಸಲ್ಮಾನ್ ಖಾನ್ ಜೋಡಿಗೆ 'ದಶಕದ ಹಾಟೆಸ್ಟ್ ಜೋಡಿ' ಎಂಬ ಬಿರುದು ಸಿಕ್ಕಿದೆ. ಕರೀನಾ ,ಸೈಫ್ ಹಾಗೂ ಅಭಿಷೇಕ್ ಐಶ್ವರ್ಯಾ ಮತ್ತು ಜಾನ್ ಅಬ್ರಹಾ ಬಿಪಾಶ ಜೋಡಿಯನ್ನು ಹಿಂದಕ್ಕೆ ತಳ್ಳುವಲ್ಲಿ ಸಲ್ಲು ಕೈಫ್ ಯಶಸ್ವಿಯಾಗಿದ್ದಾರೆ.

ಇಷ್ಟೇ ಅಲ್ಲ, ಬಾಲಿವುಡ್ ನ ಟಾಪ್ 10 ಆಕರ್ಷಣೀಯ ನಟಿಯರನ್ನು ರಿಡೀಫ್ ಅಯ್ಕೆ ಮಾಡಿದ್ದು ಅದರಲ್ಲೂ ಕತ್ರೀನಾ ಅಗ್ರಪಟ್ಟ ಕಾಯ್ದುಕೊಂಡಿದ್ದಾರೆ. ಐಶ್ವರ್ಯಾ ಎರಡನೇ ಸ್ಥಾನ , ಪ್ರಿಯಾಂಕಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಅಚ್ಚರಿ ಎಂಬಂತೆ ಏಳನೇ ಸ್ಥಾನದಲ್ಲಿದ್ದಾರೆ. ಪುರುಷರ ಪಟ್ಟಿಯಲ್ಲಿ ಹೃತಿಕ್ ರೋಷನ್ ಮೊದಲಿಗರಾಗಿದ್ದರೆ, ಅಮಿತಾಬ್ ಎರಡು, ಸಲ್ಮಾನ್ ಮೂರನೇ ಸ್ಥಾನದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada