»   »  ಐಟಂ ಗರ್ಲ್ ರಾಖಿ ಸಾವಂತ್ ವಿರುದ್ಧ ಎಫ್ ಐಆರ್

ಐಟಂ ಗರ್ಲ್ ರಾಖಿ ಸಾವಂತ್ ವಿರುದ್ಧ ಎಫ್ ಐಆರ್

Subscribe to Filmibeat Kannada

ಕಾಪಿರೈಟ್ ಕಾಯಿದೆ ಉಲ್ಲಂಘಿಸಿರುವ ಆರೋಪಕ್ಕೆ ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ಗುರಿಯಾಗಿದ್ದಾರೆ. ಈ ಸಂಬಂಧ ಜೈಪುರದ ಸ್ಥಳೀಯ ನ್ಯಾಯಾಲಯ ರಾಖಿ ಸೇರಿದಂತೆ ಇತರೆ ಆರು ಮಂದಿ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿದೆ.

'ಸ್ವಯಂವರ' ಎಂಬ ಸ್ಕ್ರಿಪ್ಟ್ ಮತ್ತು ಪದವನ್ನು ಜನಪ್ರಿಯ ಟಿವಿ ರಿಯಾಲಿಟಿ ಶೋನಲ್ಲಿ ಅನಧಿಕೃತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಗೌರವ್ ತಿವಾರಿ ಎಂಬುವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಸಂಬಂಧ ರಾಖಿ ಸಾವಂತ್ ವಿರುದ್ಧ ಜೈಪುರದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಫ್ ಐಆರ್ ದಾಖಲಿಸಲು ಆದೇಶಿಸಿದ್ದಾರೆ.

'ಸ್ವಯಂವರ' ಎಂಬ ಪದ ಮತ್ತು ಸ್ಕ್ರಿಪ್ಟನ್ನು 2008ರಲ್ಲಿ ಕಾಪಿರೈಟ್ ಮಾಡಿಸಿಕೊಳ್ಳಲಾಗಿತ್ತು. ಖಾಸಗಿ ದೂರದರ್ಶನ ವಾಹಿನಿ ಸ್ವಯಂವರ ಹೆಸರಿನಲ್ಲಿ ರಿಯಾಲಿಟಿ ಶೋ ಪ್ರಸಾರ ಮಾಡಿ ಕಾಪಿರೈಟ್ ಕಾಯಿದೆಯನ್ನು ಉಲ್ಲಂಘಿಸಿದೆ. ಸ್ವಯಂವರ ಎಂಬ ಸ್ಕ್ರಿಪ್ಟ್ ಮತ್ತು ಪದವನ್ನು ಕೊಂಚ ಬದಲಾಯಿಸಿ 'ರಾಖಿ ಕಾ ಸ್ವಯಂವರ್' ಎಂದು ಅನಧಿಕೃತವಾಗಿ ಪ್ರಸಾರ ಮಾಡಲಾಗುತ್ತಿದೆ ಎಂದು ದೂರಿದನಲ್ಲಿ ಆರೋಪಿಸಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...