For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಅಂದ್ರೆ ಸಿದ್ಧಾರ್ಥ್‌ಗೆ ಎಷ್ಟೊಂದು ಇಷ್ಟ ನೋಡಿ!

  |

  ಬಾಲಿವುಡ್ ಬೆಡಗಿ ವಿದ್ಯಾ ಬಾಲನ್, ಶಾಹಿದ್ ಕಪೂರ್ ಜೊತೆ ನಟಿಸುವ ಅವಕಾಶವನ್ನು ನಿರಾಕರಿಸಿದ್ದಾರೆ. ತಮಿಳು ನಿರ್ದೇಶಕ ಲಿಂಗುಸ್ವಾಮಿಯ ರೀಮೇಕ್ 'ವೆಟ್ಟೈ' ಚಿತ್ರದಲ್ಲಿ ವಿದ್ಯಾ ಬಾಲನ್ ನಟಿಸಬೇಕಾಗಿತ್ತು. ಆದರೆ ನಾಯಕ ತುಷಾರ್ ಕಪೂರ್ ಎಂಬುದು ಗೊತ್ತಾಗುತ್ತಿದ್ದಂತೆ, ವಿದ್ಯಾ 'ಒಲ್ಲೆ' ಎಂದಿದ್ದಾರೆ. ವಿದ್ಯಾ ಪ್ರತಿಭೆಗೆ ಆ ಪಾತ್ರ ಸೂಕ್ತವಲ್ಲ ಎಂಬ ಕಾರಣ ದೊರೆತಿದೆ. ವಿದ್ಯಾ 'ನೋ'ಗೆ ಕಾರಣ ಅವರ ಬಾಯ್ ಫ್ರಂಡ್ ಸಿದ್ಧಾರ್ಥ್ ಕಪೂರ್ ಎನ್ನಲಾಗುತ್ತಿದೆ.

  ಸುದ್ದಿ ಮೂಲಗಳ ಪ್ರಕಾರ, ಬಾಯ್ ಫ್ರಂಡ್ ಸಿದ್ಧಾರ್ಥ್ ರಾಯ್ ವಿದ್ಯಾ ಬಗ್ಗೆ ಅತಿಯಾದ ಪ್ರೀತಿ ಹೊಂದಿದ್ದಾರೆ. ವಿದ್ಯಾ ಮತ್ತು ಶಾಹಿದ್ ಕಪೂರ್ ಮಧ್ಯೆ ಇರುವ ಗೆಳೆತನ ಅವರಿಗೆ ಇಷ್ಟವಾಗುತ್ತಿಲ್ಲ. ಅದೇ ರೀತಿ ಜಾನ್ ಅಬ್ರಹಾಂ ಹಾಗೂ ವಿದ್ಯಾ ನಡುವೆಯೂ ಆತ್ಮೀಯತೆ ಇದೆ. ಅದನ್ನು ಸಹಿಸಲಾಗದ ಸಿದ್ಧಾರ್ಥ್, ತೆರೆಯ ಮೇಲೂ ಅವರಿಬ್ಬರ ಜೊತೆ ವಿದ್ಯಾ ನಟಿಸುವ ಅವಕಾಶ ಬಂದರೆ ಅದನ್ನು ತಪ್ಪಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ.

  ಇದೇ ರೀತಿ ಕೈಗೆ ಬಂದಿರುವ ಚಿತ್ರವನ್ನೆಲ್ಲಾ ವಿದ್ಯಾ ತಪ್ಪಿಸಿಕೊಂಡರೆ, ಮುಂದೊಮ್ಮೆ ಯಾವ ಚಿತ್ರವೂ ಸಿಗದೇ ಸಿದ್ಧಾರ್ಥ್ ಜೊತೆ ಮದುವೆಯೊಂದೇ ಆಯ್ಕೆ ಎಂಬಂತಾಗಬಹುದು. ಹಾಗಾಗದಿರಲಿ ಎಂಬುದು ವಿದ್ಯಾ ಅಭಿಮಾನಿಗಳ ಕೂಗು. ವಿದ್ಯಾ ಈಗಲೇ ಎಚ್ಚೆತ್ತುಕೊಂಡರೆ ಅವರಿಗೇ ಒಳ್ಳೆಯದು ಎಂದು ಅವರಭಿಮಾನಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಏನಂತೀರಾ ವಿದ್ಯಾ ಬಾಲನ್? (ಏಜೆನ್ಸೀಸ್)

  English summary
  Vidya Balan rejected the Hindi remake of the film Vettai because of Shahid Kapoor. She has also said no to a film which has John Abraham in a leading role.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X