»   »  ಹುಸೇನ್ ಅಜ್ಜನಿಗೆ ಸ್ಫೂರ್ತಿಯಾದ ಮಾಧುರಿ

ಹುಸೇನ್ ಅಜ್ಜನಿಗೆ ಸ್ಫೂರ್ತಿಯಾದ ಮಾಧುರಿ

Subscribe to Filmibeat Kannada

ಬಿಡಿಬಿಡಿಯಾಗಿ ತಮ್ಮ ನೆಚ್ಚಿನ ನಟಿಯರ ಚಿತ್ರಗಳನ್ನು ಬಿಡಿಸಿದ ಎಂ ಎಫ್ ಹುಸೇನ್ ಕುಂಚಕ್ಕೆ ಇದೀಗ ಹೊಸ ಬಲ ಬಂದಿದೆ. ಮಾಧುರಿ ದೀಕ್ಷಿತ್ ಮತ್ತು ಅಮೃತಾ ರಾವ್ ಅರನ್ನು ಒಟ್ಟೊಟ್ಟಿಗೆ ಒಂದೇ ಕ್ಯಾನ್ವಾಸ್ ಮೇಲೆ ಬಿಡಿಸಲು ಹುಸೇನ್ ಅಜ್ಜ ಕುಂಚವನ್ನು ಕೈಗೆತ್ತಿಕೊಂಡಿದ್ದಾರೆ.

ಅಮೃತಾ ಮತ್ತು ಮಾಧುರಿ ಅವರುಒಟ್ಟಿಗೆ ಹುಸೇನ್ ಅವರ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವೇ ಅವರಿಬ್ಬರ ಕುಂಚ ಬಿಡಿಸಲು ಸ್ಫೂರ್ತಿಯಾಯಿತು ಎನ್ನುತ್ತಾರೆ ಹುಸೇನ್ ಅಜ್ಜ. ''ಈ ರೀತಿಯ ಸಂಯೋಜನೆಯ ಚಿತ್ರಗಳನ್ನು ಈಗಾಗಲೇ ರಚಿಸಿದ್ದೇನೆ. ಇದೀಗ ಮಾಧುರಿ ಮತ್ತು ಅಮೃತಾ ಚಿತ್ರ ರಚಿಸಲು ಹೊರಟಿದ್ದೇನೆ. ಒಂದು ತಿಂಗಳ ಕಾಲವಧಿಯಲ್ಲಿ ಈ ಚಿತ್ರ ಸಿದ್ಧವಾಗಲಿದೆ'' ಎನ್ನುತ್ತಾರೆ ಹುಸೇನ್.

ಚಿತ್ರ ಬಿಡುಸುವ ಜೊತೆಜೊತೆಗೇ ಚಿತ್ರೀಕರಣವೂ ನಡೆಯಲಿದೆಯಂತೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಂತೆ. ಗಜಗಾಮಿನಿ (2000) ಹಾಗೂ ಮೀನಾಕ್ಷಿ: ಎ ಟೇಲ್ ಆಫ್ ತ್ರೀ ಸಿಟೀಸ್(2004) ಎಂಬ ಎರಡು ಕಲಾತ್ಮಕ ಚಿತ್ರಗಳನ್ನು ಹುಸೇನ್ ಈಗಾಗಲೇ ನಿರ್ದೇಶಿಸಿದ್ದಾರೆ. ನಾನು ಏನೇ ಮಾಡಲಿ ಯಾರಿಗೂ ಅರ್ಪಣೆ ಮಾಡುವುದಿಲ್ಲ ಎನ್ನುತ್ತಾರೆ ಬೊಚ್ಚು ಬಾಯಿಯ ಹುಸೇನ್.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada