For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ಗೆ 'ಜಂಜೀರ್' ಆಗಿ ರಾಮ್ ಚರಣ್ ತೇಜ

  By Rajendra
  |

  ಈಗಾಗಲೆ ದಕ್ಷಿಣ ಭಾರತದಲ್ಲಿ ಮುಂಚೂಣಿಯಲ್ಲಿರುವ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಶೀಘ್ರದಲ್ಲೆ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. 'ಜಂಜೀರ್' ರೀಮೇಕ್ ಚಿತ್ರದಲ್ಲಿ ರಾಮ್ ಚರಣ್ ಅಭಿನಯಿಸಲಿರುವುದು ಗ್ಯಾರಂಟಿಯಾಗಿದೆ.

  'ಜಂಜೀರ್' ಚಿತ್ರ ಬಿಗ್ ಬಿ ಅಮಿತಾಬ್ ಬಚ್ಚನ್‌ಗೆ ತಾರಾ ಮೌಲ್ಯವನ್ನು ತಂದುಕೊಟ್ಟಂತಹ ಚಿತ್ರ. ಈಗ ಅದೇ ಚಿತ್ರವನ್ನು ಪುನರ್ ನಿರ್ಮಿಸಲಾಗುತ್ತಿದೆ. ಈ ಚಿತ್ರದ ಮೂಲಕ ರಾಮ್ ಚರಣ್ ಹಿಂದಿ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ.

  1973ರಲ್ಲಿ ಬಿಡುಗಡೆಯಾಗಿದ್ದ 'ಜಂಜೀರ್' ಚಿತ್ರವನ್ನು ಪ್ರಕಾಶ್ ಮೊಹ್ರ ನಿರ್ದೇಶಿಸಿದ್ದರು. ಈಗ ಹೊಸ 'ಜಂಜೀರ್‌' ಚಿತ್ರವನ್ನು ಪ್ರಕಾಶ್ ಮೊಹ್ರ ಪುತ್ರ ಹಾಗೂ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲಿದ್ದಾರೆ.

  ಏಕ್ ಅಜ್‌ನಬಿ, ಶೂಟ್‍ಔಟ್, ಲೋಕಾಂಡ್‌ವಾಲಾ ಚಿತ್ರಗಳನ್ನು ನಿರ್ದೇಶಿಸಿದ್ದ ಅಪೂರ್ವ ಲಕಿಯಾ ನಿರ್ದೇಶನ 'ಜಂಜೀರ್' ಚಿತ್ರಕ್ಕಿರುತ್ತದೆ. 2012ರ ಏಪ್ರಿಲ್ ವೇಳೆಗೆ ಈ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ. (ಏಜೆನ್ಸೀಸ್)

  English summary
  It seems time has come for Ram Charan Teja to expand his territory. The son of Megastar Chiranjeevi, who has been thinking to enter the Bollywood, the actor is all set to storm the B-town with the remake of Amitabh Bachchan starrer yesteryear blockbuster Zanjeer. ಬಾಲಿವುಡ್‌ಗೆ 'ಜಂಜೀರ್' ಆಗಿ ರಾಮ್ ಚರಣ್ ತೇಜ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X