»   » ಜಯಾ-ಬಚ್ಚನ್ ಪ್ರೇಮ್ ಕಹಾನಿಗೆ 44ರ ಸಂಭ್ರಮ

ಜಯಾ-ಬಚ್ಚನ್ ಪ್ರೇಮ್ ಕಹಾನಿಗೆ 44ರ ಸಂಭ್ರಮ

Posted By:
Subscribe to Filmibeat Kannada

ಅಮಿತಾಬ್ ಬಚ್ಚನ್ ಮತ್ತು ಜಯಾ ಭಾದುರಿ ಮೊದಲು ಭೇಟಿಯಾಗಿದ್ದು ಪುಣೆಯ ಪ್ರಸಿದ್ಧ ಫಿಲ್ಮ್ ಇನ್‌ಸ್ಟಿಟ್ಯೂಟ್ FTII ನಲ್ಲಿ. ಜಯಾ ಭಾದುರಿ ರವರು ಜಯಾ ಭಾದುರಿ ಬಚ್ಚನ್ ಆಗಿ ಇಂದಿಗೆ 44 ವರ್ಷಗಳ ವಸಂತ ಪೂರ್ಣಗೊಂಡಿದೆ. ಅಂದರೇ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಜಯಾ ಭಾದುರಿ ಬಚ್ಚನ್ ದಾಂಪತ್ಯ ಜೀವನಕ್ಕೆ 44 ವರ್ಷಗಳು ತುಂಬಿವೆ.

44 ವಸಂತಗಳ ದಾಂಪತ್ಯ ಜೀವನನ್ನು ಸ್ಮರಿಸಿರುವ ಅಮಿತಾಬ್ ಬಚ್ಚನ್ ರವರು ಇಂದು ಟ್ಟಿಟ್ಟರ್ ನಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಶುಭಾಶಯ ತಿಳಿಸಿದ ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳನ್ನು ಹೇಳಿದ್ದಾರೆ.

'44 years since' Big-B, Jaya Bachchan's 'silsila' going strong

ಜಯಾ ಭಾದುರಿ ಮತ್ತು ಅಮಿತಾಬ್ ಬಚ್ಚನ್ ರದ್ದು ಪಕ್ಕಾ ಲವ್ ಮ್ಯಾರೇಜ್. ಬಿಗ್‌ಬಿಯನ್ನು ನೋಡಿದ್ದ ಮೊದಲ ನೋಟದಲ್ಲೇ 'ಲವ್ ಅಟ್ ಫಸ್ಟ್ ಸೈಟ್' ಅಂದಹಾಗೆ ಪ್ರೀತಿಯಲ್ಲಿ ಬಿದ್ದಿದ್ದರು ಜಯಾ ಬಚ್ಚನ್. ಇಬ್ಬರು ಸಹ ಮದುವೆ ಆದ 3 ವರ್ಷಗಳ ನಂತರದಲ್ಲಿ ಸಂಸಾರದಲ್ಲಿ ಬಿರುಕು ಉಂಟಾದರೂ ಸರಿಪಡಿಸಿಕೊಂಡ ದಂಪತಿಗಳು ಇಂದು 44 ವರ್ಷದ ದಾಂಪತ್ಯ ಜೀವನನ್ನು ಬಹಳ ಸಂತೋ‍ಷದಿಂದ ಆಚರಣೆ ಮಾಡಿಕೊಂಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳ ದಾಂಪತ್ಯ ಜೀವನದಲ್ಲಿ ಆಗಾಗ ಬಿರುಕು, ವಿವಾಹ ವಿಚ್ಛೇದನ ಸಾಮಾನ್ಯ. ಆದರೆ ಬಾಲಿವುಡ್ ನ ಬಿಗ್ ಸ್ಟಾರ್ ಬಿಗ್‌ ಬಿ ಮಾತ್ರ ಇದುವರೆಗೂ ಆ ಯಾವುದೇ ವಿವಾದದ ಸುಳಿಯಲ್ಲಿ ಸಿಗದೇ ಜಯಾ ಬಚ್ಚನ್ ರೊಂದಿಗೆ ಸುಖದ ಸಂಸಾರ ಜೀವನ ನಡೆಸಿದ್ದಾರೆ. ಅಲ್ಲದೇ ಈ ಜೋಡಿ 'ಸಿಲ್ಸಿಲಾ', 'ಅಭಿಮಾನ್', 'ಚುಪ್ಕೆ ಚುಪ್ಕೆ', 'ಮಿಲಿ' ಮತ್ತು ಇತರೆ ಹಲವು ಚಿತ್ರಗಳಲ್ಲಿ ತೆರೆಯ ಮೇಲು ಜೊತೆಯಾಗಿ ಮಿಂಚಿದ್ದಾರೆ.

English summary
Bollywood Actor Amitab Bachchan has took his twitter account On the occasion of their 44th marriage anniversary, to recollect the memory of the Big day and said that he is "filled with love."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada