For Quick Alerts
  ALLOW NOTIFICATIONS  
  For Daily Alerts

  ಸಚಿನ್ ದಾಖಲೆ ಲಟಕ್ಕನೆ ಮುರಿದ ಬಾಲಿವುಡ್ ತಾರೆ

  By Rajendra
  |

  ಶೇಕಡಾ ನೂರಕ್ಕೆ ನೂರರಷ್ಟು ಸತ್ಯವಾದ ಸುದ್ದಿಯಿದು. ಶತ ಶತಕಗಳ ರಾಜ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಬಾಲಿವುಡ್ ಹಾಟ್ ಬೆಡಗಿ ಪ್ರಿಯಾಂಕಾ ಚೋಪ್ರಾ ಕಡ್ಡಿ ಮುರಿದಷ್ಟೇ ಲಟಕ್ಕನೆ ಮುರಿದಿದ್ದಾರೆ. ಆದರೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಂತೂ ಖಂಡಿತ ಅಲ್ಲವೇ ಅಲ್ಲ.

  ಇಷ್ಟಕ್ಕೂ ಪ್ರಿಯಾಂಕಾ ಚೋಪ್ರಾ ಈ ದಾಖಲೆ ಮಾಡಿರುವುದು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ. ಈ ರೀತಿಯ ದಾಖಲೆ ಮುರಿಯಲು ಇನ್ನೆಲ್ಲಿ ಸಾಧ್ಯ ಬಿಡಿ ಅಂತೀರಾ? ತನ್ನ ಟ್ವಿಟ್ಟರ್ ಖಾತೆಯಲ್ಲಿ ಅತ್ಯಂತ ಹೆಚ್ಚು ಮಂದಿ ಫಾಲೋವರ್ಸ್ ಹೊಂದಿರುವ ಸೆಲಿಬ್ರಿಟಿಯಾಗಿ ಪ್ರಿಯಾಂಕಾ ಹೊಸ ದಾಖಲೆಗೆ ಕಾರಣರಾಗಿದ್ದಾರೆ.

  ಈ ಹಿಂದೆ ಸಚಿನ್‌ ಅವರನ್ನು 22,08,617 ಮಂದಿ ಫಾಲೋ ಮಾಡುತ್ತಿದ್ದರು (ಟ್ವಿಟ್ಟರ್‌ನಲ್ಲಿ ಎಂಬುದು ನಿಮ್ಮ ಗಮನಕ್ಕಿರಲಿ). ತಾಜಾ ಬೆಳವಣಿಗೆಯಲ್ಲಿ ಪ್ರಿಯಾಂಕಾ ಚೋಪ್ರಾ 22,28,363 ಮಂದಿ ಫಾಲೋವರ್ಸ್‌ನೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

  ಸಮೀಕ್ಷೆಯೊಂದರ ಪ್ರಕಾರ ಸೋಷಿಯಲ್ ಮೀಡಿಯಾದಲ್ಲೂ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲೇ ಅತ್ಯಂತ ಹೆಚ್ಚುಮಂದಿ ಅಭಿಮಾನಿಗಳುಳ್ಳ ತಾರೆಯಾಗಿ ಹೊರಹೊಮ್ಮಿರುವುದು. ಎರಡನೇ ಸ್ಥಾನದಲ್ಲಿ ಶಶಿ ತರೂರ್, ಮೂರನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್ ಇದ್ದಾರೆ. ಇನ್ನೂ ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರಂತೂ ಟಾಪ್ ಟೆನ್ ಲಿಸ್ಟಲ್ಲಿ ಇಲ್ಲವೇ ಇಲ್ಲ. (ಏಜೆನ್ಸೀಸ್)

  English summary
  Priyanka chopra has broken Sachin Tendulkar's record. No, we are not talking about cricket here. We are talking about Twitter. Priyanka has the highest numbers of followers on Twitter with 2,228,363, which is more than the followers of Sachin Tendulkar (2,208,617).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X