For Quick Alerts
  ALLOW NOTIFICATIONS  
  For Daily Alerts

  ಗೋವಾ ಸಿನಿಮೋತ್ಸವ: ವಿಶ್ವ ಪೊನೊರಮಾ ವಿಭಾಗದ ಸಿನಿಮಾಗಳ ಪಟ್ಟಿ ಬಿಡುಗಡೆ

  |

  ಗೋವಾದಲ್ಲಿ ನಡೆಯಲಿರುವ 51 ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ವಿಶ್ವ ಪನೊರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುವ ಸಿನಿಮಾಗಳ ಪಟ್ಟಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿದೆ.

  ವಿಶ್ವ ಪನೊರಮಾ ವಿಭಾಗದಲ್ಲಿ 50 ಸಿನಿಮಾಗಳಯನ್ನು ಪ್ರದರ್ಶಿಸಲಾಗುತ್ತಿದೆ. ವಿಶ್ವದ ವಿವಿಧ ದೇಶಗಳ ಸಿನಿಮಾಗಳು ಈ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.

  ಅಮೆರಿಕ, ಬ್ರಿಟನ್, ಕೆನಡಾ, ಇರಾನ್, ಫ್ರಾನ್ಸ್‌, ಜರ್ಮನಿ, ಸ್ಪೇನ್, ಇಟಲಿ ಇನ್ನೂ ಅನೇಕ ಪ್ರಮುಖ ಸಿನಿಮಾ ನಿರ್ಮಾಣ ದೇಶಗಳ ಜೊತೆಗೆ ಬಾಂಗ್ಲಾದೇಶ, ಕಜಕಿಸ್ತಾನ, ಸ್ಲೊವೋಕಿಯಾ, ಲಿತೂನಿಯಾ, ರೊಮಾನಿಯಾ, ಅಂಡೊರ್ರಾ, ಮೆಸಿಡೋನಿಯಾ ಇನ್ನೂ ಹಲವು ದೇಶಗಳ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.

  51 ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವು ಜನವರಿ 16 ರಿಂದ ಪ್ರಾರಂಭವಾಗಲಿದೆ. 12 ದಿನ ನಡೆಯಲಿರುವ ಈ ಉತ್ಸವವು ಜನವರಿ 24 ರಂದು ಸಮಾರೋಪಗೊಳ್ಳಲಿದೆ. ಗೋವಾ ಸಿನಿಮಾಉತ್ಸವ ಎಂದು ಕರೆಯಲಾಗುವ ಈ ಉತ್ಸವವು ಏಷ್ಯಾದ ಹಳೆಯ ಮತ್ತು ಭಾರತದ ದೊಡ್ಡ ಸಿನಿಮಾ ಉತ್ಸವ ಆಗಿದೆ.

  ಈ ಬಾರಿಯ ಗೋವಾ ಸಿನಿಮೋತ್ಸವವನ್ನು ಒಟಿಟಿಯಲ್ಲಿ ಸಹ ನೋಡಬಹುದಾಗಿದೆ. ನೊಂದಾವಣಿ ಮಾಹಿತಿ ಮಾಹಿತಿ ಹಾಗೂ ಪ್ರಸಾರ ಇಲಾಖೆ (ಪಿಐಬಿ) ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

  English summary
  World Panorama movie list released for 51st International Film Fest Of India which is going to start from Januaty 16.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X