»   » ಕೊಚ್ಚಿ ಫ್ಯಾಶನ್ ಶೋ: ಕತ್ರಿನಾಗೆ ಭಾರೀ ಸಂಭಾವನೆ ಗುರೂ!

ಕೊಚ್ಚಿ ಫ್ಯಾಶನ್ ಶೋ: ಕತ್ರಿನಾಗೆ ಭಾರೀ ಸಂಭಾವನೆ ಗುರೂ!

Posted By:
Subscribe to Filmibeat Kannada

ಬಾಲಿವುಡ್ ಹಾಟ್ ಸೆನ್ಸೇಷನ್ ಕತ್ರಿನಾ ಕೈಫ್ ಫ್ಯಾಷನ್ ಜಗತ್ತಿನಲ್ಲಿ ಸಖತ್ ಮಿಂಚಿಂಗ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಮಾಡೆಲಿಂಗ್ ಬ್ಯಾಕ್ ಗ್ರೌಂಡ್ ಹೊಂದಿರುವ ಕತ್ರಿನಾ, ಭಾತರದ ಫ್ಯಾಶನ್ ಸೋ ಜಗತ್ತಿನ ಹಾಟ್ ಫೇವರೇಟ್ ಎಂಬುದರಲ್ಲಿ ಸಂಶಯವೇ ಇಲ್ಲ.

ಕೊಚ್ಚಿಯಲ್ಲಿ ಸದ್ಯವೇ ಪ್ರಾರಂಭವಾಗಲಿರುವ ಫ್ಯಾಶನ್ ಶೋದಲ್ಲಿ ಈಕೆ ಕ್ಯಾಟ್ ವಾಕ್ ಮಾಡಲಿದ್ದಾಳೆ. ಹತ್ತು ನಿಮಿಷದ ಈ ರಾಂಪ್ ವಾಕ್ ಗೆ ಈಕೆ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 10 ಕೋಟಿ ರುಪಾಯಿಗಳು. ನಟಿಯೊಬ್ಬಳು ಪಡೆಯುತ್ತಿರುವ ದುಬಾರೆ ಸಂಭಾವನೆಗಳಲ್ಲಿ ಇದೂ ಒಂದೆನ್ನಬಹುದು. ಆದರೆ ನಟ ಶಾರುಖ್ ತೀರಾ ಇತ್ತೀಚಿಗೆ ಇದೇ ಕೊಚ್ಚಿಯಲ್ಲಿ ನಡೆದ ಫ್ಯಾಶನ್ ಶೋದಲ್ಲಿ ಹೆಜ್ಜೆ ಹಾಕಿ ಎರಡು ಕೋಟಿ ರೂಪಾಯಿ ಜೇಬುಗಿಳಿಸಿದ್ದಾರೆ.

ಅದೇ ನಮ್ಮ ಸೌತ್ ಇಂಡಿಯಾದ ಸ್ಟಾರ್ ಗಳು ಈ ಮೊತ್ತದ ಅರ್ಧದಷ್ಟುನ್ನೂ ಕೂಡ ಪಡೆಯಲು ಸಾಧ್ಯವಾಗುತ್ತಿಲ್ಲ. ದುಬಾರಿ ಸಂಭಾವನೆಗಳೇನಿದ್ದರೂ ಬಾಲಿವುಡ್ ಸ್ಟಾರ್ ಗಳಿಗೆ ಎಂದು ದಕ್ಷಿಣ ಭಾರತದ ನಟ,ನಟಿಯರು ಮಖ ಸೊಟ್ಟಗೆ ಮಾಡಿಕೊಂಡಿದ್ದಾರಂತೆ. ಒಟ್ಟಿನಲ್ಲಿ ಬಾಲಿವುಡ್ ಎಂಬುದು ನಟ-ನಟಿಯರಿಗೆ ಚಿನ್ನ ಪಡೆಯುವ ಗಣಿಯಾಗಿದೆ. (ಏಜೆನ್ಸೀಸ್)

English summary
Katrina Kaif who will visit Kochi to walk the ramp at an upcoming fashion show, will be paid Rs 1 crore for ten minutes.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada