For Quick Alerts
  ALLOW NOTIFICATIONS  
  For Daily Alerts

  ವಿದ್ಯಾಬಾಲನ್ ರನ್ನು ಗರ್ಭಿಣಿ ಮಾಡಿ ಪರಾರಿ, ಯಾರೀತ?

  |

  ವಿದ್ಯಾ ಬಾಲನ್ ಗರ್ಭಿಣಿಯಾಗಿದ್ದಾರೆ. ಆಕೆ ಗರ್ಭವತಿಯಾಗಲು ಕಾರಣರಾದ ಗಂಡು, ರಹಸ್ಯ ಸಂಬಂಧದ ಪತಿಮಹಾಶಯ ಆಕೆಯನ್ನು ಕೈಬಿಟ್ಟು ಪರಾರಿಯಾಗಿದ್ದಾನೆ. ಹಾಗೆ ಆಕೆಯಿಂದ ದೂರವಾದ ಗಂಡ ಯಾರು? ಆತ ದೂರವಾದ ಮೇಲೆ ಗರ್ಭಿಣಿ ವಿದ್ಯಾ ಹೊಟ್ಟೆಪಾಡಿಗೆ ಏನು ಮಾಡಬೇಕು? ಆಕೆ ಯಾವ ದಾರಿ ಹಿಡಿಯುತ್ತಾಳೆ? ಇದೆಲ್ಲಾ ಪ್ರಶ್ನೆಗಳು ಮೂಡಿರುವುದು ವಿದ್ಯಾ ಬಾಲನ್ ಅವರ ಇತ್ತೀಚಿನ ಚಿತ್ರ ಕಹಾನಿಯಲ್ಲಿ.

  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೂ ಈ ಚಿತ್ರದಲ್ಲಿದೆ. ಆದರೆ ಇಲ್ಲಿಯವರೆಗೆ ಗರ್ಭಿಣಿ ವಿದ್ಯಾ ಬಾಲನ್ ಗಂಡನ ಪಾತ್ರದಲ್ಲಿ ಯಾರು ನಟಿಸಿದ್ದರು ಎಂಬುದು ಗುಟ್ಟಿನ ವಿಷಯವಾಗಿತ್ತು. ಆದರೆ ಅದಕ್ಕೀಗ ಉತ್ತರ ದೊರೆತಿದೆ. ಮಾಡೆಲ್ ಮತ್ತು ಟಿವಿ ನಿರೂಪಕ, ನಟ ಇಂದ್ರನೀಲ್ ಗುಪ್ತಾ ಆ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದೀಗ ಜಗಜ್ಜಾಹೀರಾಗಿದೆ. ಆದರೆ ಆತ ಮಾತ್ರ ಈ ವಿಷಯವನ್ನು ದೃಢೀಕರಿಸಿಲ್ಲ.

  ಮಾಧ್ಯಮದವರು ಈ ವಿಷಯವಾಗಿ ಇಂದ್ರನೀಲ್ ರನ್ನು ವಿಚಾರಿಸಿದರೆ ಆತ "ನಾನು ಆ ಚಿತ್ರದಲ್ಲಿ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಹೌದು. ಆದರೆ ಆ ಪಾತ್ರದ ಬಗ್ಗೆಯಾಗಲೀ ಅಥವಾ ಚಿತ್ರದ ಕಥೆಯ ಬಗ್ಗೆಯಾಗಲೀ ನಾನು ಈಗಲೇ ಏನೂ ಹೇಳಲು ಸಾಧ್ಯವಿಲ್ಲ" ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾನೆ. ಆದರೂ ಗರ್ಭಿಣಿ ಮಾಡಿ ವಿದ್ಯಾಗೆ ಕೈಕೊಟ್ಟ ಗಂಡ ಈತನೇ ಎಂಬುದು ಸಿಕ್ಕ ಮಾಹಿತಿ. (ಏಜೆನ್ಸೀಸ್)

  English summary
  Indraneil Sengupta will be playing the role of pregnant Vidya Balan's husband in the film Kahaani.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X