»   » ಸಲ್ಮಾನ್ ಕ್ರೇಜ್: ಮುಂಬೈಗೆ ಓಡಿಹೋದ ಹುಡುಗಿ

ಸಲ್ಮಾನ್ ಕ್ರೇಜ್: ಮುಂಬೈಗೆ ಓಡಿಹೋದ ಹುಡುಗಿ

Posted By:
Subscribe to Filmibeat Kannada
Salman Khan
ಬಾಲಿವುಡ್ ನಟ ಸಲ್ಮಾನ್ ಖಾನ್ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು. ಹದಿಹರೆಯದ ಹುಡುಗಿಯರಿಗಂತೂ ಹುಚ್ಚು. ಈಗಾಗಲೇ ಸಾಕಷ್ಟು ಮಂದಿ ಹುಡುಗಿಯರು ಅವರನ್ನು ಭೇಟಿಯಾಗಿದ್ದಾರೆ. ಕೆಲವು ಮುಗ್ಧ ಹುಡುಗಿಯರು ಭೇಟಿಯಾಗುವ ದಾರಿ ಗೊತ್ತಿಲ್ಲದೇ ಮುಂಬೈಗೆ ಬಂದು ಅಲೆದಾಡಿ ಸುಸ್ತಾಗಿ ಭೇಟಿಯಾಗದೇ ಮತ್ತೆ ಮನೆಗೆ ಮರಳಿದ್ದಾರೆ. ಅಂತಹುದೇ ಇನ್ನೊಂದು ಘಟನೆ ಈ ಮಧ್ಯಪ್ರದೇಶದ ಹುಡುಗಿ ಕಥೆ.

ತನ್ನ ಮೆಚ್ಚಿನ ನಟ ಸಲ್ಮಾನ್ ಖಾನ್ ನೋಡಲು, ಮಧ್ಯಪ್ರದೇಶದ ಶಾಲೆಯೊಂದರಲ್ಲಿ 9 ನೇ ತರಗತಿ ಓದುತ್ತಿದ್ದ 14 ವರ್ಷದ ಹದಿಹರೆಯದ ಹುಡುಗಿಯೊಬ್ಬಳು ರು. 3,000 ಹಣವನ್ನು ಮನೆಯಿಂದ ಕದ್ದು ಮುಂಬೈಗೆ ಓಡಿಹೋಗಿದ್ದಾಳೆ. ಅಲ್ಲಿ ತನ್ನಲಿದ್ದ ಎಲ್ಲಾ ಹಣವನ್ನು ಸಲ್ಮಾನ್ ನನ್ನು ತೋರಿಸುತ್ತೇನೆಂದ ಅಪರಿಚಿತನ ಕೈಗೆ ಕೊಟ್ಟು ಮೋಸಹೋಗಿದ್ದಾಳೆ ಹುಡುಗಿ.

ಹಣವನ್ನು ಕಳೆದಕೊಂಡ ಹುಡುಗಿ ಊಟಕ್ಕೂ ಗತಿಯಿಲ್ಲದೇ ರೇಲ್ವೆ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಆಶ್ರಯ ಪಡೆದಿದ್ದಳು. ಆಕೆಯ ಅಪ್ಪ ಕೊಟ್ಟ ಪೊಲೀಸ್ ಕಂಪ್ಲೇಟ್ ಆಧರಿಸಿ ಅವಳನ್ನು ಕಂಡುಹಿಡಿದು ಆಕೆಯ ಪೋಷಕರಿಗೊಪ್ಪಿಸಲಾಗಿದೆ. ಈ ಮೂಲಕ ಆಶ್ಚರ್ಯಕರ ರೀತಿಯಲ್ಲಿ ಹುಡುಗಿ ಆಗಬಹುದಾಗಿದ್ದ ಹೆಚ್ಚಿನ ಅನಾಹುತದಿಂದ ಪಾರಾಗಿದ್ದಾಳೆ. ಈ ಹುಡುಗಿಯ ಘಟನೆ ಸಲ್ಲೂ ಹುಚ್ಚಿಗೆ ಬಿದ್ದು ಓಡಿಹೋಗುವ ಹುಡುಗಿಯರಿಗೆ ಪಾಠವಾಗಬಹುದೇ? (ಏಜೆನ್ಸೀಸ್)

English summary
A teenager girl who ran away from her home in MP and went to meet Salman Khan in Mumbai was duped of Rs 3,000, which is all that she 
 had.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X