For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಷನ್ ರಿಜೆಕ್ಟ್ ಮಾಡಿದ ಈ 6 ಸಿನಿಮಾಗಳು ಸೂಪರ್ ಹಿಟ್ ಆಗಿವೆ

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ಹ್ಯಾಂಡ್ ಸಮ್ ಹಂಕ್ ಹೃತಿಕ್ ರೋಷನ್ ಅನ್ನು ತೆರೆ ಮೇಲೆ ನೋಡೋದೆ ಅಭಿಮಾನಿಗಳಿಗೆ ಸಂಭ್ರಮ. ವಿಭಿನ್ನ ಸಿನಿಮಾಗಳ ಮೂಲಕ ಸುಮಾರು 20 ವರ್ಷಗಳಿಂದ ಸಿನಿ ಪ್ರಿಯರನ್ನು ರಂಜಿಸುತ್ತಿರುವ ಹೃತಿಕ್ ಕೊನೆಯದಾಗಿ ವಾರ್ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಾರ್ ಸಿನಿಮಾ ನಂತರ ಹೃತಿಕ್ ಯಾವ ಸಿನಿಮಾವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

  ನಾನು ಶಿವಣ್ಣನ ಫಾರೆವರ್ ಫ್ಯಾನ್ ಎಂದ ಮಾನ್ವಿತಾ | Manvitha Kamath | Shiva Rajkumar | Filmibeat Kannada

  2000ರಲ್ಲಿ ಕಹೋನಾ ಪ್ಯಾರ್ ಹೈ ಸಿನಿಮಾ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಿದ ಹೃತಿಕ್ ಇದುವರೆಗೂ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದ್ಭುತ ಕಥೆಯನ್ನು ಆಯ್ದುಕೊಳ್ಳುವ ಹೃತಿಕ್ ಹಲವು ಬಾರಿ ಕಥೆ ಆಯ್ಕೆಯಲ್ಲಿ ಸೋತಿದ್ದಾರೆ. ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹೃತಿಕ್ ಅನೇಕ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಅಂದ್ಹಾಗೆ ಹೃತಿಕ್ ತಿರಸ್ಕರಿಸಿದ 6 ಸಿನಿಮಾಗಳು ಬಾಲಿವುಡ್ ನಲ್ಲಿ ಹಿಟ್ ಸಿನಿಮಾಗಳ ಲಿಸ್ಟ್ ನಲ್ಲಿ ಸೇರಿಕೊಂಡಿವೆ. ಹಾಗಾದರೆ ಯಾವುದು 6 ಸಿನಿಮಾಗಳು. ಮುಂದೆ ಓದಿ..

  ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಹೃತಿಕ್ ರೋಷನ್ ಮತ್ತು ಪ್ರಭಾಸ್?ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಹೃತಿಕ್ ರೋಷನ್ ಮತ್ತು ಪ್ರಭಾಸ್?

  'ದಿಲ್ ಚಾಹ್ತಾ ಹೈ'

  'ದಿಲ್ ಚಾಹ್ತಾ ಹೈ'

  ದಿಲ್ ಚಾಹ್ತಾ ಹೈ ಸಿನಿಮಾ ಸೆಟ್ಟೇರುವ ಸಮಯದಲ್ಲಿ ಹೃತಿಕ್ ಗೆ ಚಿತ್ರರಂಗದ ಆರಂಭದ ದಿನಗಳಷ್ಟೆ. ಫರಾನ್ ಅಖ್ತಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಆ ಕಾಲಕ್ಕೆ ಸೂಪರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿತ್ತು. ಈ ಸಿನಿಮಾದ ಸಿದ್ಧಾರ್ಥ್ ಪಾತ್ರ ಹೃತಿಕ್ ರೋಷನ್ ಬಳಿ ಹೋಗಿತ್ತಂತೆ. ಆದರೆ ಹೃತಿಕ್ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ. ಆ ನಂತರ ಈ ಪಾತ್ರ ಅಭಿಷೇಕ್ ಬಚ್ಚನ್ ಬಳಿ ಹೋಗಿದೆ. ಆದರೆ ಅಭಿಷೇಕ್ ಕೂಡ ರಿಜೆಕ್ಟ್ ಮಾಡಿದ್ದಾರೆ. ಬಳಿಕ ಆಮೀರ್ ಬಳಿ ಈ ಸಿನಿಮಾ ಹೋಗಿದೆ. ಆಮೀರ್ ಖಾನ್ ಸಿನಿಮಾವನ್ನು ಒಪ್ಪಿಕೊಂಡು ಸಿದ್ಧಾರ್ಥ್ ಪಾತ್ರದ ಬದಲಿಗೆ ಆಕಾಶ್ ಪಾತ್ರವನ್ನು ನಿರ್ವಹಿಸಿದ್ದಾರೆ. ಹೃತಿಕ್ ಗಾಗಿ ತಯಾರಾದ ಸಿದ್ಧಾರ್ಥ ಪಾತ್ರದಲ್ಲಿ ಅಕ್ಷಯ್ ಖನ್ಹಾ ಕಾಣಿಸಿಕೊಂಡಿದ್ದಾರೆ.

  'ಬಂಟಿ ಔರ್ ಬಬ್ಲಿ'

  'ಬಂಟಿ ಔರ್ ಬಬ್ಲಿ'

  ಬಂಟಿ ಔರ್ ಬಬ್ಲಿ ಸಿನಿಮಾದ ಆಫರ್ ಕೂಡ ಮೊದಲು ಹೃತಿಕ್ ರೋಷನ್ ಬಳಿ ಹೋಗಿದೆ. ಆದರೆ ಹೃತಿಕ್ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ. ನಂತರ ಬಂಟಿಯಾಗಿ ಅಭಿಷೇಕ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಗಳಿಸಿತು. ಅಭಿಷೇಕ್ ಫಿಲ್ಮ್ ಫೇರ್ ಪ್ರಶಸ್ತಿಗೆ ಉತ್ತಮ ನಟನಾಗಿ ನಾಮನಿರ್ದೇಶನಗೊಂಡಿದ್ದರು.

  ಪ್ರತಿಷ್ಠಿತ ಆಸ್ಕರ್ ಅಕಾಡೆಮಿಯಿಂದ ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಆಹ್ವಾನ

  'ರಂಗ್ ದೇ ಬಸಂತಿ'

  'ರಂಗ್ ದೇ ಬಸಂತಿ'

  ಹೃತಿಕ್ ನಿರಾಕರಿಸಿದ ಮತ್ತೊಂದು ದೊಡ್ಡ ಸಿನಿಮಾವಂದರೆ ರಂಗ್ ದೇ ಬಸಂತಿ. ರಾಕೇಶ್ ಓಂ ಪ್ರಕಾಶ್ ಮೆಹ್ರಾ ನಿರ್ದೇಶನದಲ್ಲಿ ಬಂದ ರಂಗ್ ದೇ ಬಸಂತಿ ಸಿನಿಮಾದಲ್ಲಿ ಆಮೀರ್ ಖಾನ್ ನಾಯಕನಾಗಿ ಮಿಂಚಿದ್ದಾರೆ. ಈ ಚಿತ್ರವನ್ನು ಹೃತಿಕ್ ರಿಜೆಕ್ಟ್ ಮಾಡಲು ಕಾರಣ ಬಹಿರಂಗವಾಗಿಲ್ಲ. ಆದರೆ ವರದಿಗಳ ಪ್ರಕಾರ ಆಮೀರ್ ಖಾನ್ ನಿರ್ವಹಿಸಿದ್ದ ಡಿಜೆ ಪಾತ್ರ ಮಾಡಲು ಉತ್ಸಕರಾಗಿದ್ದರಂತೆ. ಆದರೆ ಆದರೆ ಹೃತಿಕ್ ಆ ಪಾತ್ರದ ಆಫರ್ ಬಂದಿಲ್ಲ ಎಂದು ಹೇಳಲಾಗುತ್ತಿದೆ.

  'ಸ್ವದೇಶ್' ಒಪ್ಪಿಕೊಳ್ಳದ ಹೃತಿಕ್

  'ಸ್ವದೇಶ್' ಒಪ್ಪಿಕೊಳ್ಳದ ಹೃತಿಕ್

  ಹೃತಿಕ್ ರೋಷನ್ ತಿರಸ್ಕರಿಸಿದ ಮತ್ತೊಂದು ದೊಡ್ಡ ಸಿನಿಮಾವಿದು. ಆಶುತೋಷ್ ಗೌರಿಕರ್ ನಿರ್ದೇಶನದಲ್ಲಿ ಬಂದ ಸ್ವದೇಶ್ ಚಿತ್ರದ ಮೋಹನ್ ಭಾರ್ಗವ ಪಾತ್ರಕ್ಕೆ ಮೊದಲು ಹೃತಿಕ್ ರೋಷನ್ ಆಯ್ಕೆಯಾಗಿದ್ದರಂತೆ. ಆದರೆ ಹೃತಿಕ್ ಈ ಸಿನಿಮಾವನ್ನು ಮಾಡಲು ಒಪ್ಪಿಕೊಳ್ಳದೆ ರಿಜೆಕ್ಟ್ ಮಾಡಿದ್ದಾರೆ. ನಂತರ ಈ ಸಿನಿಮಾ ಶಾರಖ್ ಖಾನ್ ಪಾಲಾಗಿದೆ. ಈ ಸಿನಿಮಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ. ಅಲ್ಲದೆ ಶಾರುಖ್ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

  'ಮೈ ಹೂ ನಾ' ರಿಜೆಕ್ಟ್ ಮಾಡಿದ ಹೃತಿಕ್

  'ಮೈ ಹೂ ನಾ' ರಿಜೆಕ್ಟ್ ಮಾಡಿದ ಹೃತಿಕ್

  ಫರಾ ಖಾನ್ ಅವರ ಸಾರಥ್ಯದಲ್ಲಿ ಬಂದ ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಕಿರಿಯ ಸಹೋದರನಾಗಿ ನಟಿಸಲು ಹೃತಿಕ್ ಗೆ ಆಫರ್ ಮಾಡಲಾಗಿತ್ತು. ಆದರೆ ಹೃತಿಕ್ ಈ ಪಾತ್ರ ಮಾಡಲು ಒಪ್ಪಿಕೊಂಡಿಲ್ಲ. ಕೊನೆಗೆ ಆ ಪಾತ್ರವನ್ನು ಜಾಯೆದ್ ಖಾನ್ ನಿರ್ವಹಿಸಿದ್ದಾರೆ. ಈ ಸಿನಿಮಾ ಸಹ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದೆ.

  ಐಶ್ವರ್ಯ ರೈ ಅವರನ್ನು ತಪ್ಪಾಗಿ ತಿಳಿದುಕೊಂಡಿದ್ದೆ: ನಟ ಹೃತಿಕ್ ರೋಷನ್

  'ಶುದ್ಧಿ' ಸಿನಿಮಾ

  'ಶುದ್ಧಿ' ಸಿನಿಮಾ

  ಶುದ್ಧಿ ಸಿನಿಮಾ ಸಹ ಮೊದಲು ಹೃತಿಕ್ ರೋಷನ್ ಬಳಿ ಬಂದಿತ್ತು. ಆದರೆ ಈ ಸಿನಿಮಾ ಮಾಡಲು ಹೃತಿಕ್ ರಿಜೆಕ್ಟ್ ಮಾಡಿದ್ದಾರೆ. ಮೊದಲು ಈ ಸಿನಿಮಾ ಒಪ್ಪಿಕಂಡಿದ್ದ ಹೃತಿಕ್ ಸಿನಿಮಾ ವಿಳಂಬವಾಗುತ್ತಿದ್ದಂತೆ ಸಿನಿಮಾದಿಂದ ಹೊರಬಂದಿದ್ದಾರೆ. ಆ ನಂತರ ಈ ಸಿನಿಮಾ ಸಲ್ಮಾನ್ ಖಾನ್ ಬಳಿ ಹೋಗಿದೆ. ಸಲ್ಮಾನ್ ಸಹ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲ. ಕೊನೆಗೆ ವರುಣ್ ಧವನ್ ಆಯ್ಕೆಯಾಗಿದ್ದರು. ಆದರೀಗ ಈ ಸಿನಿಮಾ ನಿಂತೆಹೋಗಿದೆ.

  English summary
  6 movies rejected by Hrithik Roshan is a super hit in Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X