»   » 62ನೇ ಫಿಲ್ಮ್‌ ಫೇರ್ ಪ್ರಶಸ್ತಿ: ಖಾನ್‌ ಗಳ ನಡುವೆ ಪೈಪೋಟಿ

62ನೇ ಫಿಲ್ಮ್‌ ಫೇರ್ ಪ್ರಶಸ್ತಿ: ಖಾನ್‌ ಗಳ ನಡುವೆ ಪೈಪೋಟಿ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಾಲಿವುಡ್ ನ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಒಂದೇ ಸೂರಿನಡಿ ಕಾಣಿಸಿಕೊಳ್ಳೋದು ತುಂಬಾ ಅಪರೂಪ. ಎಲ್ಲರೂ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದ್ರೆ ಅದೂ ಅವಾರ್ಡ್ ನೀಡುವ ಕಾರ್ಯಕ್ರಮವೇ ಆಗಿರಬೇಕು. ಈಗ ಅಂತಹ ಸಮಯವೊಂದು ಕೂಡಿ ಬಂದಿದೆ.[ಬೆಂಗಳೂರಿನ ಘಟನೆಗೆ ಬಾಲಿವುಡ್‌ ನವರು ಹೀಗೆಲ್ಲಾ ಹೇಳಿದರು..]

  ಹೌದು, ಹಿಂದಿ ಚಿತ್ರರಂಗದ ಎಲ್ಲಾ ದಿಗ್ಗಜರು ಇದೇ ಜನವರಿ 14 ರಂದು ನಡೆಯುವ 'ಜಿಯೋ 62 ನೇ ಫಿಲ್ಮ್‌ ಫೇರ್ ಅವಾರ್ಡ್' ಸಮಾರಂಭದಲ್ಲಿ ಒಂದೇ ಸೂರಿನಡಿ ಕಾಣಿಸಿಕೊಳ್ಳುತ್ತಿದ್ದಾರೆ. ಫಿಲ್ಮ್ ಫೇರ್ ಮ್ಯಾಗಜೀನ್ ಪ್ರದಾನ ಮಾಡುತ್ತಿರುವ 'ಫಿಲ್ಮ್‌ ಫೇರ್ ಪ್ರಶಸ್ತಿ ಕಾರ್ಯಕ್ರಮವನ್ನು, ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್‌ ಮತ್ತು ಕರಣ್ ಜೋಹರ್ ಆಯೋಜಿಸುತ್ತಿದ್ದಾರೆ.[ಫೋಟೋಗಳು: 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ]

  2016 ನೇ ಸಾಲಿನ ಅತ್ಯುತ್ತಮ ಡೈರೆಕ್ಟರ್, ಅತ್ಯುತ್ತಮ ಹಾಡುಗಾರರು, ಅತ್ಯುತ್ತಮ ನಟ-ನಟಿ ಹೀಗೆ ಹಲವರು 62ನೇ ಜಿಯೋ ಫಿಲ್ಮ್‌ ಫೇರ್ ಪ್ರಶಸ್ತಿಯನ್ನು ಪಡೆಯುತ್ತಾರೆ. ಈ ಪ್ರಶಸ್ತಿ ಯಾರು ಪಡೆಯುತ್ತಾರೆ ಎಂಬುದು ಜನವರಿ 14 ಕ್ಕೆ ತಿಳಿಯುತ್ತೆ. ಅದಕ್ಕೂ ಮುನ್ನ ಅತ್ಯುತ್ತಮ ನಟ, ನಟಿ, ಸಿನಿಮಾ, ಹಾಡುಗಾರರು, ನಿರ್ದೇಶಕರು ಎಂಬ ಪ್ರಶಸ್ತಿ ಪಡೆಯಲು ನಾಮಿನಿ ಪಡೆದವರು ಯಾರು, ಯಾವ ಸಿನಿಮಾಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ನಾಮಿನಿ ಪಡೆದಿವೆ ಎಂಬ ಲೀಸ್ಟ್ ಇಲ್ಲಿದೆ ನೋಡಿ..

  ಸೂಪರ್ ಸ್ಟಾರ್‌ ಗಳ ನಡುವೆ ಫೈಟ್

  ಈ ಬಾರಿ ಬಾಲಿವುಡ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಸೂಪರ್ ಸ್ಟಾರ್‌ ಗಳ ನಡುವೆಯೇ ಬಿಗ್ ಫೈಟ್ ಇದೆ. ಅದು ದೊಡ್ಡ ದೊಡ್ಡ ಖಾನ್‌ ಗಳ ನಡುವೆ. ಮೂರು ಖಾನ್‌ ಗಳಾದ ಶಾರುಖ್ ಖಾನ್, ಸಲ್ಮಾನ್‌ ಖಾನ್ ಮತ್ತು ಅಮೀರ್ ಖಾನ್‌ ರಲ್ಲಿ ಯಾರು 62 ನೇ ಜಿಯೋ ಫಿಲ್ಮ್ ಫೇರ್ ಅವಾರ್ಡ್‌ ಅನ್ನು ಅತ್ಯುತ್ತಮ ನಟ ಎಂಬುದಾಗಿ ಪಡೆಯುತ್ತಾರೆ ಕಾದು ನೋಡಬೇಕಿದೆ.['ದಂಗಲ್‌' ಸಿನಿಮಾಗೆ ಅಮೀರ್ ಖಾನ್ ಪಡೆದ ಅತಿದೊಡ್ಡ ಪ್ರಶಂಸೆ ಇದು..]

  ಅತ್ಯುತ್ತಮ ನಟಿ ಟ್ರೋಫಿ ಯಾರಿಗೆ?

  ಅತ್ಯುತ್ತಮ ನಟಿ ಟ್ರೋಫಿಗೂ 5 ನಟಿಯರ ನಡುವೆ ಪೈಪೋಟಿ ಎದುರಾಗಿದೆ. ಆಲಿಯಾ ಭಟ್ 'ಉಡ್ತಾ ಪಂಜಾಬ್' ಮತ್ತು 'ಡಿಯರ್ ಜಿಂದಿಗಿ' ಚಿತ್ರಗಳಲ್ಲಿ ಲೀಡಿಂಗ್ ರೋಲ್‌ ಮಾಡುವ ಮೂಲಕ ಉತ್ತಮ ನಟಿ ಪ್ರಶಸ್ತಿಗೆ ಅವರು ಸಾಲಿನಲ್ಲಿದ್ದಾರೆ. ಆಲಿಯಾ ಭಟ್‌ ಗೆ ತೀವ್ರ ಸ್ಪರ್ಧೆಯನ್ನು ಸೋನಮ್ ಕಪೂರ್ (ನೀರಜ್), ಐಶ್ವರ್ಯ ರೈ ಬಚ್ಚನ್ (ಸರ್ಬ್ಜಿತ್), ವಿದ್ಯಾ ಬಾಲನ್ (ಕಹಾನಿ-2) ಮತ್ತು ಅನುಷ್ಕಾ ಶರ್ಮ (ಎ ದಿಲ್‌ ಹೈ ಮುಶ್ಕಿಲ್) ನೀಡುತ್ತಿದ್ದಾರೆ.['ಪ್ರೀತಿ-ಪ್ರೇಮ'ಕ್ಕೆ ಎಳ್ಳುನೀರು ಬಿಟ್ಟ ಬಾಲಿವುಡ್ ನ ಮತ್ತೊಂದು ಜೋಡಿ]

  ಅತ್ಯುತ್ತಮ ಸಿನಿಮಾಗೆ ನಾಮಿನಿ ಅದ ಚಿತ್ರಗಳು

  ದಂಗಲ್
  ಕಪೂರ್ ಅಂಡ್ ಸನ್ಸ್
  ನೀರಜ್
  ಪಿಂಕ್
  ಸುಲ್ತಾನ್
  ಉಡ್ತಾ ಪಂಜಾಬ್

  ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ನಾಮಿನಿ ಆದ ಹೆಸರುಗಳು

  ಅಭಿಷೇಕ್ ಛೌಬೇ - ಉಡ್ತಾ ಪಂಜಾಬ್

  ಅಲಿ ಅಬ್ಬಾಸ್ ಜಾಫರ್ - ಸುಲ್ತಾನ್

  ಕರಣ್ ಜೋಹರ್ - ಏ ದಿಲ್ ಹೈ ಮುಶ್ಕಿಲ್

  ನಿತೇಶ್ ತಿವಾರಿ - ದಂಗಲ್

  ರಾಮ್ ಮಧ್ವಾನಿ - ನೀರಜ್

  ಶಕುನ್ ಬಾತ್ರಾ - ಕಪೂರ್ ಅಂಡ್ ಸನ್ಸ್

  ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನಿ ಆದವರು..

  ಅಮೀರ್ ಖಾನ್ - ದಂಗಲ್

  ಅಮಿತಾಬ್ ಬಚ್ಚನ್ - ಪಿಂಕ್

  ರಣಬೀರ್ ಕಪೂರ್ - ಏ ದಿಲ್ ಹೈ ಮುಶ್ಕಿಲ್

  ಸಲ್ಮಾನ್ ಖಾನ್ - ಸುಲ್ತಾನ್

  ಶಾರುಖ್ ಖಾನ್ - ಫ್ಯಾನ್

  ಶಾಹಿದ್ ಕಪೂರ್ - ಉಡ್ತಾ ಪಂಜಾಬ್

  ಸುಶಾಂತ್ ಸಿಂಗ್ ರಜಪೂತ್ - ಎಂಎಸ್ ಧೋನಿ: ದ ಅನ್ಟೋಲ್ಡ್ ಸ್ಟೋರಿ

  ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಿನಿ ಆದ ಹೆಸರುಗಳು

  ದಿಲ್ಜಿತ್ ದೋಸಂಜ್ಹ್ - ಉಡ್ತಾ ಪಂಜಾಬ್
  ಫವಾಡ್ ಖಾನ್ - ಕಪೂರ್ ಅಂಡ್ ಸನ್ಸ್
  ಜಿಮ್ ಸರ್ಭ್ - ನೀರಜ್
  ರಜತ್ ಕಪೂರ್ - ಕಪೂರ್ ಮತ್ತು ಸನ್ಸ್
  ರಾಜ್‌ಕುಮ್ಮಾರ್ ರಾವ್ - ಆಲಿಗಢ
  ರಿಷಿ ಕಪೂರ್ - ಕಪೂರ್ ಮತ್ತು ಸನ್ಸ್

  ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ನಾಮಿನಿ ಆದ ನಟಿಯರು

  ಕರೀನಾ ಕಪೂರ್ ಖಾನ್ - ಉಡ್ತಾ ಪಂಜಾಬ್
  ಕೀರ್ತಿ ಕುಲ್ಹರಿ - ಪಿಂಕ್
  ರತ್ನ ಪಾಠಕ್ ಷಾ - ಕಪೂರ್ ಮತ್ತು ಸನ್ಸ್
  ರಿಚಾ ಚಡ್ಡಾ - ಸರ್ಬ್ಜಿತ್
  ಶಬಾನಾ ಆಜ್ಮಿ - ನೀರಜ್

  ಅತ್ಯುತ್ತಮ ಮ್ಯೂಸಿಕ್ ಆಲ್ಬಂ ಪ್ರಶಸ್ತಿಗೆ ನಾಮಿನಿ ಆದವರು..

  ಅಮಾಲ್ ಮಲ್ಲಿಕ್ - ಕಪೂರ್ ಅಂಡ್ ಸನ್ಸ್
  ಅಮಿತ್ ತ್ರಿವೇದಿ - ಉಡ್ತಾ ಪಂಜಾಬ್
  ಮೀಟ್ ಬ್ರೊಸ್, ಅಮಾಲ್ ಮಲ್ಲಿಕ್, ಅಂಕಿತ್ ತಿವಾರಿ - ಬಾಘಿ
  ಪ್ರೀತಮ್ - ಏ ದಿಲ್ ಹೈ ಮುಶ್ಕಿಲ್
  ಶಂಕರ್-ಎಹಸಾನ್-ಲಾಯ್ - ಮಿರ್ಜ್ಯಾ
  ವಿಶಾಲ್-ಶೇಖರ್ - ಸುಲ್ತಾನ್

  ಅತ್ಯುತ್ತಮ ಲಿರಿಕ್ಸ್

  ಅಮಿತಾಭ್ ಭಟ್ಟಾಚಾರ್ಯ - ಏ ದಿಲ್ ಹೈ ಮುಶ್ಕಿಲ್
  ಗುಲ್ಜಾರ್ - ಮಿರ್ಜ್ಯಾ
  ಗುಲ್ಜಾರ್ - ಮಿರ್ಜ್ಯಾ
  ಇರ್ಷಾದ್ ಕಾಮಿಲ್ - ಸುಲ್ತಾನ್
  Kausar ಮುನೀರ್ - ಡಿಯರ್ ಜಿಂದಗಿ
  ಲೇಟ್ ಶಿವಕುಮಾರ್ ಬತಲ್ವಿ - ಉಡ್ತಾ ಪಂಜಾಬ್

  ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ನಾಮಿನಿ ಆದ ಹಾಡುಗಾರರು

  ಅಮಿತ್ ಮಿಶ್ರಾ - ಏ ದಿಲ್ ಹೈ ಮುಶ್ಕಿಲ್
  ಅರಿಜಿತ್ ಸಿಂಗ್ - ಏ ದಿಲ್ ಹೈ ಮುಶ್ಕಿಲ್
  ಅರಿಜಿತ್ ಸಿಂಗ್ - ಏ ದಿಲ್ ಹೈ ಮುಶ್ಕಿಲ್
  ಅತಿಫ್ ಅಸ್ಲಾಂ - ರುಸ್ತುಮ್
  ರಾಹತ್ ಫತೇ ಅಲಿ ಖಾನ್ - ಸುಲ್ತಾನ್

  English summary
  The list of nominees for the 62nd Jio Filmfare Awards is here! The award show which recognises and honours the best talent in Indian cinema will be back for its 62nd edition, on January 14, 2017 in Mumbai. The event that will bring together the biggest names and brightest stars in the business under one roof, will be hosted by Bollywood's badshah Shah Rukh Khan.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more