»   » 'ಪ್ರೀತಿ-ಪ್ರೇಮ'ಕ್ಕೆ ಎಳ್ಳುನೀರು ಬಿಟ್ಟ ಬಾಲಿವುಡ್ ನ ಮತ್ತೊಂದು ಜೋಡಿ

'ಪ್ರೀತಿ-ಪ್ರೇಮ'ಕ್ಕೆ ಎಳ್ಳುನೀರು ಬಿಟ್ಟ ಬಾಲಿವುಡ್ ನ ಮತ್ತೊಂದು ಜೋಡಿ

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಲ್ಲಿ ಬ್ರೇಕ್ ಅಪ್ ಸುದ್ದಿಗಳು ಹೊಸತೇನಲ್ಲ, ಅವಾಗವಾಗ ಬಾಲಿವುಡ್ ನಟ-ನಟಿಯರು ಒಂದಾಗುತ್ತಾರೆ, ಅಷ್ಟೇ ಶೀಘ್ರವಾಗಿ ಬೇರೆ-ಬೇರೆ ಕೂಡ ಆಗುತ್ತಾರೆ. ರಣಬೀರ್ ಕಪೂರ್ ಕತ್ರಿನಾ ಕೈಫ್ ಬ್ರೇಕ್ ಅಪ್ ಆಯ್ತು, ಇದೀಗ ಇನ್ನೊಂದು ಜೋಡಿ ಸದ್ದಿಲ್ಲದೆ ಬೇರೆ-ಬೇರೆ ಆಗಿದ್ದಾರಂತೆ.

'ಸ್ಟೂಡೆಂಟ್ ಆಫ್ ದ ಇಯರ್' ಚಿತ್ರದಲ್ಲಿ ಒಂದಾಗಿದ್ದ ನಟ ಸಿದ್ಧಾರ್ಥ್ ಮಲ್ಹೋತ್ರಾ, ನಟಿ ಆಲಿಯಾ ಭಟ್ ಮತ್ತು ನಟ ವರುಣ್ ಧವನ್ ಅವರು ಒಂದು ಕಾಲದಲ್ಲಿ, ಬಾಲಿವುಡ್ ಅಂಗಳದಲ್ಲಿ ಭಯಂಕರ ಸೌಂಡ್ ಮಾಡಿದ್ದರು.[ವೋಗ್ ನಲ್ಲಿ ಗರಿಗೆದರಿದ ಆಲಿಯಾ ಶೃಂಗಾರ ವಿಲಾಸ]

ಅಂದಹಾಗೆ ಸಿನಿಮಾದಲ್ಲಿ ನಡೆದ ಹಾಗೆ ನಟಿ ಆಲಿಯಾ ಭಟ್ ನಿಜ ಜೀವನದಲ್ಲೂ ನಡೆದಿತ್ತು. ಮೊದಲು ಆಲಿಯಾ ಭಟ್-ವರುಣ್ ಧವನ್ ಮಧ್ಯೆ ಕುಛ್-ಕುಛ್ ಇತ್ತು. ತದನಂತರ ಅದು ಮುರಿದು ಬಿದ್ದ ಮೇಲೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಆಲಿಯಾ ಭಟ್ ಡೇಟಿಂಗ್ ಶುರು ಹಚ್ಚಿಕೊಂಡರು.

ಇದೀಗ ಅದಕ್ಕೆ ಕೂಡ ಎಳ್ಳು-ನೀರು ಬಿಟ್ಟಿದ್ದಾರೆ ಅಂತ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗಿದೆ. ಇನ್ನು ಇವರಿಬ್ಬರು ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಅಂತ ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಇದೀಗ ಬೇರೆ-ಬೇರೆ ಆಗಿರೋ ವಿಚಾರ ಖುದ್ದು ಆಲಿಯಾ ಭಟ್ ಅವರಿಂದ ಜಗಜ್ಜಾಹೀರಾಗಿದೆ. ಮುಂದೆ ಓದಿ...

ಶೂಟಿಂಗ್ ಸೆಟ್ ನಲ್ಲಿ ಬಾಯಿಬಿಟ್ಟ ಆಲಿಯಾ

ಇತ್ತೀಚೆಗೆ ವರುಣ್ ಧವನ್ ಮತ್ತು ಆಲಿಯಾ ಭಟ್ ಅವರು 'ಬದ್ರಿನಾಥ್ ಕೀ ದುಲ್ಹನಿಯಾ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಇದು 'ಹಮ್ಟಿ ಶರ್ಮ ಕೀ ದುಲ್ಹನಿಯಾ' ಚಿತ್ರದ ಸೀಕ್ವೆಲ್. ಈ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ವರುಣ್ ಜೊತೆ ಆಲಿಯಾ ಭಟ್ ತಮ್ಮ ಬ್ರೇಕ್ ಅಪ್ ಗುಟ್ಟು ಬಿಟ್ಟುಕೊಟ್ಟಿದ್ದಾರೆ.[ಅಲಿಯಾ,ಅನುಷ್ಕಾ, ಕಾಜಲ್, ಸನ್ನಿ ಬಿಕಿನಿ ಭಾವಭಂಗಿ]

ಕೀಟಲೆ ಮಾಡುತ್ತಿದ್ದ ವರುಣ್ ಧವನ್

'ಬದ್ರಿನಾಥ್ ಕೀ ದುಲ್ಹನಿಯಾ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನಟಿ ಆಲಿಯಾ ಭಟ್ ಅವರಿಗೆ ನಟ ವರುಣ್ ಅವರು ಯಾವಾಗಲೂ ಸಿದ್ಧಾರ್ಥ್ ಹೆಸರಿನ ಜೊತೆ ಟೀಸ್ ಮಾಡುತ್ತಿದ್ದರಂತೆ. ಅದಕ್ಕೆ ನಟಿ ಆಲಿಯಾ ಅವರು ನನಗೆ ತಮಾಷೆ ಮಾಡಬೇಡ, ಈಗ ನಮ್ಮಿಬ್ಬರ ನಡುವೆ ಅಂತಹ ವಿಶೇಷ ಸಂಬಂಧ ಏನೂ ಇಲ್ಲ, ನಾವಿಬ್ಬರೂ ಬೇರೆಯಾಗಿದ್ದೇವೆ' ಎಂದರಂತೆ.' ಇದನ್ನು ಕೇಳಿದ್ದೇ ತಡ ವರುಣ್ ಅವರು ಗಪ್ ಚುಪ್ ಅಂತೆ.

ಬ್ರೇಕ್ ಅಪ್ ಗೆ ಕಾರಣ?

ಸದ್ಯಕ್ಕೆ ಇಬ್ಬರು ಕೂಡ ತಮ್ಮ ವೃತ್ತಿ ಜೀವನದ ಕಡೆ ಹೆಚ್ಚಿನ ಗಮನ ಹರಿಸುವ ಹಿನ್ನಲೆಯಲ್ಲಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರಂತೆ. ಅಷ್ಟಕ್ಕೂ ಇವರಿಗೆ ಬೇಕು ಅಂದಾಗ ಹಿಡಿಯಲು, ಬೇಡ ಅಂದಾಗ ಎತ್ತಿ ಬಿಸಾಕಲು 'ಪ್ರೀತಿ' ಅನ್ನೋದು ಆಟದ ಸಾಮಾನಾಗಿದೆ ಅನ್ನೋದು ವಿಪರ್ಯಾಸವೇ ಸರಿ.[ಅಬ್ಬಾ! ಲವ್ ಬ್ರೇಕ್ ಅಪ್ ಆದ್ರೂ ಕ್ಯಾಟ್ ಹ್ಯಾಪಿ, ಹೇಗೆ]

ಲವ್ ಆಗಿದ್ಹೇಗೆ?

ಕರಣ್ ಜೋಹರ್ ನಿರ್ದೇಶನದ 'ಕಪೂರ್ ಅಂಡ್ ಸನ್ಸ್' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಟ ಸಿದ್ದಾರ್ಥ್ ಮತ್ತು ಆಲಿಯಾ ಭಟ್ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಆದರೆ ಇದೀಗ ಕೆಲವು ಮನಸ್ತಾಪಗಳಿಂದ ಇಬ್ಬರೂ ದೂರ-ದೂರ ಆಗಿದ್ದರು.

'ವೋಗ್' ಫೋಟೋ ಶೂಟ್ ನಲ್ಲಿ ಬಿಚ್ಚಿ ತೋರಿಸಿದ್ದ ಜೋಡಿ

ಕಳೆದ ಬಾರಿ 'ವೋಗ್' ಫೋಟೋ ಶೂಟ್ ನಲ್ಲಿ ಭಾಗವಹಿಸಿದ್ದ ಜೋಡಿ ಹಕ್ಕಿ, ಆಲಿಯಾ ಭಟ್ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಬೀಚ್ ನಲ್ಲಿ ಭಯಂಕರ ಫೋಟೋ ಶೂಟ್ ಮಾಡಿಸಿದ್ದರು. ಇವರಿಬ್ಬರ ಹಾಟ್ ಪೋಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿತ್ತು.

English summary
Bollywood Actress Alia Bhatt is working with rumoured ex-boyfreind Actor Varun Dhawan again in 'Badrinath Ki Dulhania'. During the shooting of their movie Alia revealed to Varun that she and Sidharth Malhotra are no longer together.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada