»   » ಬೆಂಗಳೂರಿನ ಘಟನೆಗೆ ಬಾಲಿವುಡ್‌ ನವರು ಹೀಗೆಲ್ಲಾ ಹೇಳಿದರು..

ಬೆಂಗಳೂರಿನ ಘಟನೆಗೆ ಬಾಲಿವುಡ್‌ ನವರು ಹೀಗೆಲ್ಲಾ ಹೇಳಿದರು..

Posted By:
Subscribe to Filmibeat Kannada

ಹೊಸ ವರ್ಷದ ಮೊದಲ ದಿನದಂದು ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದ ದೌರ್ಜನ್ಯದ ಕುರಿತು ಬಾಲಿವುಡ್‌ ನ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿ.31 ರ ರಾತ್ರಿ ಯುವತಿಯರ ಜೊತೆ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ್ದರ ಬಗ್ಗೆ ಬಾಲಿವುಡ್‌ ನ ಸಲೀಮ್ ಖಾನ್, ವರುಣ್‌ ಧವನ್, ನಟ ಫರ್ಹಾನ್‌ ಖಾನ್,ಅಕ್ಷಯ್ ಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಟ್ವೀಟ್ ಮಾಡಿದ್ದಾರೆ. ಯಾರ್ಯಾರು ಏನು ಹೇಳಿದರು ಮಾಹಿತಿ ಇಲ್ಲಿದೆ ನೋಡಿ..[ಬಾಲಿವುಡ್‌ ನಲ್ಲಿ ಮೂವರು ದಿಗ್ಗಜರ ಸಂಗಮದ ಚಿತ್ರ ತೆರೆಗೆ]

ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್. 'ಬೆಂಗಳೂರು ಘಟನೆ ನನಗೆ ಮಾನವರು ಮತ್ತೊಮ್ಮೆ ಮೃಗಗಳಾಗಿ ವಿಕಾಸ ಹೊಂದುತ್ತಿರುವ ರೀತಿ ಫೀಲ್ ನೀಡುತ್ತಿದೆ. ಪ್ರಾಣಿಗಳೇ ಮಾನವರಿಗಿಂತ ಉತ್ತಮ! ಇದು ನಿಜವಾದ ಅವಮಾನಕರ!" ಎಂದು ವಿಡಿಯೋ ಮಾಡಿ ಟ್ವೀಟ್ ಮಾಡಿದ್ದಾರೆ. ಫೇಸ್‌ಬುಕ್‌ ನಲ್ಲಿ ಅಕ್ಷಯ್‌ ರವರ ಇದೆ ಪೋಸ್ಟ್ ಗೆ 6.1 ಸಾವಿರ ಕಮೆಂಟ್‌ ಬಂದಿದ್ದು, ಇವರ ಈ ಪೋಸ್ಟ್‌ ಅನ್ನು 52,665 ಜನರು ಶೇರ್ ಮಾಡಿದ್ದಾರೆ.['2.0' ಚಿತ್ರದಲ್ಲಿ ರಜನಿ ಹೀರೋ ಅಲ್ಲ, ಅಕ್ಷಯ್ ಹೀರೋ ಅಂತೆ]

ಸಲೀಮ್‌ ಖಾನ್‌

"ನರೇಂದ್ರ ಬೈ ಈ ವಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಯುವ ಜನಾಂದ ಎತ್ತ ಸಾಗುತ್ತಿದೆ ಎಂಬುದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಕೃತ್ಯಗಳು ಹೆಚ್ಚಾಗುತ್ತಿದ್ದು ನಿಜಕ್ಕೂ ತಲೆ ತಗ್ಗಿಸುವಂತಹದ್ದು. ನಾವು ಸಹ ಒಂದು ಕಾಲದಲ್ಲಿ ಯುವಕರಾಗಿದ್ದವರೇ. ನಮ್ಮ ಕಾಲದಲ್ಲಿ ಇಂತಹ ಘಟನೆಗಳು ಎಂದಿಗೂ ನಡೆಯುತ್ತಿರಲಿಲ್ಲ", ಎಂದು ಸಲ್ಮಾನ್‌ ಖಾನ್ ತಂದೆ ಸಲೀಮ್ ಖಾನ್ ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದ ದೌರ್ಜನ್ಯ ಕುರಿತು ಬೇಸರದಿಂದ ಟ್ವೀಟ್ ಮಾಡಿದ್ದಾರೆ.

ವರುಣ್ ಧವನ್

ಯುವ ನಟ ವರುಣ್ ಧವನ್ ಸಹ ಬೆಂಗಳೂರಿನಲ್ಲಿ ನಡೆದ ಘಟನೆಗೆ ಕೋಪಗೊಂಡಿದ್ದು " ತಪ್ಪಿತಸ್ಥರನ್ನು ಶಿಕ್ಷಿಸಿ. ಸಂತ್ರಸ್ತರನ್ನಲ್ಲ. ಮಹಿಳೆಯರು ತಮಗಿಷ್ಟ ಬಂದ ಉಡುಗೆ ತೊಡುತ್ತಾರೆ ಅದು ಅವರ ಆಯ್ಕೆ" ಎಂದು ಟ್ವೀಟ್ ಮಾಡಿದ್ದಾರೆ.

ಫರ್ಹಾನ್ ಅಖ್ತರ್

" ಇದು ಜೆಂಡರ್ ಭಯೋತ್ಪಾದನೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಿಡಬಾರದು" ಎಂದು ಮಹಿಳೆಯರು ವೆಸ್ಟರ್ನ್ ಉಡುಪು ಧರಿಸಿದ್ದರು ಎಂದು ಹೇಳಿರುವುದನ್ನು ಖಂಡಿಸಿ ನಟ ಫರ್ಹಾನ್ ಅಖ್ತರ್ ಟ್ವೀಟ್ ಮಾಡಿದ್ದಾರೆ. ಹಾಗೆ ಅಕ್ಷಯ್ ಕುಮಾರ್ ಬೆಂಗಳೂರಿನ ಘಟನೆ ಕುರಿತು ಹೇಳಿರುವುದನ್ನು ರೀಟ್ವೀಟ್ ಮಾಡಿದ್ದಾರೆ.

English summary
Akshay kumar, Salim Khan, Varun Dhavan, Farhan Akhtar and other bollywood stars Slams on Bengaluru molesters of a young woman and new year party incident. Here you can know what they said.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada