For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಪ್ರಕರಣದಲ್ಲಿ ಸುಳ್ಳು ಹರಡಲು 80,000 ನಕಲಿ ಸಾಮಾಜಿಕ ಜಾಲತಾಣ ಖಾತೆ ಸೃಷ್ಠಿ!

  |

  ಜನರ ಅಭಿಪ್ರಾಯ ರೂಪಿಸುವುದರಲ್ಲಿ ಸಾಮಾಜಿಕ ಜಾಲತಾಣ ಬಹುದೊಡ್ಡ ಪಾತ್ರ ವಹಿಸುತ್ತಿದೆ. ರಾಜಕೀಯ ವಿರಲಿ, ಯಾವುದೇ ನಿರ್ದಿಷ್ಟ ಘಟನೆ ಇರಲಿ ಆ ಬಗ್ಗೆ ಸಾಮಾನ್ಯರ ಅಭಿಪ್ರಾಯ ತಿದ್ದಲು ಸಾಮಾಜಿಕ ಜಾಲತಾಣ ಬಳಕೆ ಆಗುತ್ತಿದೆ.

  ಸುಶಾಂತ್ ಸಾವು ಪ್ರಕರಣದಲ್ಲಿ, ಸುಶಾಂತ್ ಅನ್ನು ಕೊಲೆ ಮಾಡಲಾಗಿದೆ ಎಂದು ಸುಳ್ಳು ಹರಡಲು, ಮುಂಬೈ ಪೊಲೀಸರು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಭಿಪ್ರಾಯ ಬರುವಂತೆ ಮಾಡಲು ಬರೋಬ್ಬರಿ 80,000 ನಕಲಿ ಸಾಮಾಜಿಕ ಜಾಲತಾಣ ಖಾತೆ ಬಳಸಿಕೊಳ್ಳಲಾಗಿತ್ತಂತೆ.

  ಕೊಲೆಯಾಗಿಲ್ಲ ಸುಶಾಂತ್ ಸಿಂಗ್, ರಿಯಾ ಮೇಲೂ ಅನುಮಾನವಿಲ್ಲ: ತನಿಖಾ ಕೋನ ಬದಲು

  ಹೌದು, ಸುಶಾಂತ್ ಸಿಂಗ್ ಪ್ರಕರಣದಲ್ಲಿ ಸುಳ್ಳನ್ನು ಸತ್ಯವೆಂದು ಜನರು ನಂಬುವಂತೆ ಮಾಡಲು ಈ 80,000 ನಕಲಿ ಖಾತೆಗಳನ್ನು ಬಳಸಿಕೊಳ್ಳಲಾಗಿದೆ. ಆ ಕಾರ್ಯದಲ್ಲಿ ಬಹುತೇಕ ಯಶಸ್ವಿಯೂ ಆದಂತಿದೆ.

  ಪೊಲೀಸರ ಬಗ್ಗೆ ಅಪನಂಬಿಕೆ ಉಂಟುಮಾಡುವ ಯತ್ನ

  ಪೊಲೀಸರ ಬಗ್ಗೆ ಅಪನಂಬಿಕೆ ಉಂಟುಮಾಡುವ ಯತ್ನ

  ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸರ ಬಗ್ಗೆ ಅಪನಂಬಿಕೆ ಉಂಟಾಗುವಂತೆ ಮಾಡುವುದು, ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಾಗಿ ಆತನನ್ನು ಕೊಲೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣ ಬಳಸುವವರನ್ನು ನಂಬಿಸುವ ಕಾರ್ಯವನ್ನು ಈ ನಕಲಿ ಖಾತೆ ಬಳಕೆದಾರರು ಮಾಡುತ್ತಿದ್ದರು.

  ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು

  ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು

  ಇದೀಗ ಈ ಪ್ರಕರಣದ ವಿರುದ್ಧ ಮುಂಬೈ ಪೊಲೀಸರು ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸೈಬರ್ ಪೊಲೀಸರ ನೆರವು ಸಹ ಪಡೆದುಕೊಂಡಿದ್ದು, ಮೂಲ ಸೂತ್ರಧಾರಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪೊಲೀಸರು.

  ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಿದ ಬಾಂಬೆ ಹೈ ಕೋರ್ಟ್

  ಅತ್ತಿಗೆಯನ್ನು ಧ್ರುವ ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ | Filmibeat Kannada
  ಉದ್ದೇಶಪೂರ್ವಕವಾಗಿ ಮುಂಬೈ ಪೊಲೀಸರ ಮೇಲೆ ದಾಳಿ

  ಉದ್ದೇಶಪೂರ್ವಕವಾಗಿ ಮುಂಬೈ ಪೊಲೀಸರ ಮೇಲೆ ದಾಳಿ

  ಕೊರೊನಾ ಕಾರಣಕ್ಕೆ 84 ಮುಂಬೈ ಪೊಲೀಸರು ಅಸುನೀಗಿದ್ದಾರೆ, 6000 ಮಂದಿ ಕೊರೊನಾಕ್ಕೆ ತುತ್ತಾಗಿದ್ದಾರೆ. ಇಂಥಹಾ ಹೊತ್ತಿನಲ್ಲಿ ನಿರ್ದಿಷ್ಟವಾಗಿ ಮುಂಬೈ ಪೊಲೀಸರನ್ನು ಗುರಿಯಾಗಿಸಿಕೊಂಡೇ ನಕಲಿ ಖಾತೆಗಳ ಮೂಲಕ ಸುಳ್ಳು ಹರಡಲಾಗಿದೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಕಾನೂನು ಅಡಿಗೆ ತರಲಾಗುವುದು ಎಂದಿದ್ದಾರೆ ಅವರು.

  English summary
  80,000 fake social media accounts created to spread fake news in Sushant Singh case and defame Mumbai police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X