For Quick Alerts
  ALLOW NOTIFICATIONS  
  For Daily Alerts

  ಮದ್ಯದ ನಶೆಯಲ್ಲಿ ನಟಿಯೊಂದಿಗೆ ಅಸಭ್ಯ ವರ್ತನೆ: ವ್ಯಕ್ತಿ ಬಂಧನ

  |

  ಮರಾಠಿ ಸಿನಿಮಾ ಹಾಗೂ ಟಿವಿ ನಟಿಯೊಂದಿಗೆ ಕುಡುಕ ಡ್ರೈವರ್ ಒಬ್ಬ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  ಶುಕ್ರವಾರ ರಾತ್ರಿ 38 ವರ್ಷ ವಯಸ್ಸಿನ ನಟಿಯು ತಮ್ಮ ಮಕ್ಕಳೊಂದಿಗೆ ಗುರುಗ್ರಾಮದ ಕಿರಿದಾದ ಹೋಗುತ್ತಿದ್ದಾಗ ಅದೇ ರಸ್ತೆಯ ವಿರುದ್ಧ ದಿಕ್ಕಿನಿಂದ ಕಾರೊಂದು ಬಂದಿದೆ. ಕಾರಿನ ಚಾಲಕ, ನಟಿಯನ್ನು ಗಾಡಿ ಹಿಂದೆ ತೆಗೆಯುವಂತೆ ಜಗಳ ಮಾಡಿದ್ದಾನೆ.

  ಗಾಡಿ ಹಿಂದೆ ತೆಗೆಯಲು ನಟಿಯು ಇದಕ್ಕೆ ನಿರಾಕರಿಸಿದ್ದಕ್ಕೆ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಲೈಂಗಿಕ ಹಿಂಸೆ ಸಹ ನೀಡಿದ್ದಾನೆ ಎಂದು ನಟಿಯೇ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ತನಿಖೆ ನಡೆಸಿದ ಗುರುಗ್ರಾಮ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  ಆರೋಪಿಯು, ನಟಿಗೆ ಕಾರು ಹಿಂದಕ್ಕೆ ತೆಗೆಯುವಂತೆ ಬಲವಂತ ಮಾಡಿದ್ದಾನೆ. ಆದರೆ ನಟಿ ಆತನ ಮಾತು ಕೇಳದೆ ವಾಗ್ವಾದ ಮಾಡಿದ್ದಾರೆ. ಕಾರಿನಿಂದ ಕೆಳಗೆ ಇಳಿದು ಬಂದ ಆ ವ್ಯಕ್ತಿ ನಟಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ನಟಿಯ ಕೈ ಹಿಡಿದು ಎಳೆದಾಡಿದ್ದಾನೆ, ಹಲ್ಲೆಗೆ ಸಹ ಯತ್ನಿಸಿದ್ದಾನೆ.

  ನಟಿಯು ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕಾರಿನ ನೊಂದಣಿ ಸಂಖ್ಯೆ ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಸ್ತುತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

  ಹೀರೋ ಸಂಪ್ರದಾಯವನ್ನು ಹೊಡೆದುಹಾಕಿದ ದರ್ಶನ್ | Roberrt Audio Launch in Hubli | Darshan

  ಚಾಲಕನ ವಿರುದ್ಧ ಕುಡಿದು ವಾಹನ ಚಾಲನೆ, ರಸ್ತೆ ನಿಯಮ ಉಲ್ಲಂಘನೆ, ಹಲ್ಲೆ ಯತ್ನ, ಲೈಂಗಿಕ ದೌರ್ಜನ್ಯ ಆರೋಪಗಳನ್ನು ಹೊರಿಸಿ ದೂರು ದಾಖಲಿಸಿಕೊಳ್ಳಲಾಗಿದೆ.

  English summary
  A drunken driver misbehaved with a Marathi Tv and movie actress in Goregaon. Actress lodged complaint driver arrested.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X