For Quick Alerts
  ALLOW NOTIFICATIONS  
  For Daily Alerts

  'ಪ್ರಭಾಸ್ ಲೈಫ್‌ನಲ್ಲಿ ಒಬ್ಬ ಡಾರ್ಲಿಂಗ್ ಇದ್ದಾಳೆ, ಅವಳು ಇದಕ್ಕಿಂತ ಖುಷಿಯಾಗಿರಲು ಸಾಧ್ಯವಿಲ್ಲ': ವರುಣ್ ಧವನ್!

  |

  ಪ್ರಭಾಸ್ ಮದುವೆ ಯಾವಾಗ ಅನ್ನೋದು ಟಾಲಿವುಡ್ ಮಂದಿಗೆ ದೊಡ್ಡ ಕ್ಯೂರಿಯಾಸಿಟಿ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿದ್ದರೂ, ವಯಸ್ಸು ನಲವತ್ತು ದಾಟಿದ್ದರೂ, ಪ್ರಭಾಸ್ ಇನ್ನೂ ಮದುವೆ ಆಗೋ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಫ್ಯಾನ್ಸ್ ಪ್ರಭಾಸ್ ಮದುವೆ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

  ಇನ್ನೊಂದು ಕಡೆ ಪ್ರಭಾಸ್ ಒಂದರ ಹಿಂದೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಇಂತಹ ಬ್ಯುಸಿ ಸಮಯದಲ್ಲೂ ಡಾರ್ಲಿಂಗ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರಾ? ಅನ್ನೋ ಅನುಮಾನ ಕೂಡ ಇದೆ.

  400 ಕೋಟಿಯ 'ಆದಿಪುರುಷ್'ಗಿಂತ 17 ಕೋಟಿಯ 'ಹನು-ಮಾನ್‌' ಟೀಸರ್‌ ಎಷ್ಟೋ ಉತ್ತಮ ಎಂದ ನೆಟ್ಟಿಗರು!400 ಕೋಟಿಯ 'ಆದಿಪುರುಷ್'ಗಿಂತ 17 ಕೋಟಿಯ 'ಹನು-ಮಾನ್‌' ಟೀಸರ್‌ ಎಷ್ಟೋ ಉತ್ತಮ ಎಂದ ನೆಟ್ಟಿಗರು!

  ಕೆಲವು ದಿನಗಳ ಹಿಂದೆ ಪ್ರಭಾಸ್ ಲವ್‌ನಲ್ಲಿ ಬಿದ್ದಿರೋ ಬಗ್ಗೆ ಗಾಳಿಸುದ್ದಿ ಹರಿದಾಡುತ್ತಿತ್ತು. 'ಆದಿಪುರುಷ್' ಸಿನಿಮಾದ ಸೀತೆಯ ಮೇಲೆ ಪ್ರಭಾಸ್‌ಗೆ ಲೈಟ್ ಆಗಿ ಲವ್ ಆಗಿದೆ ಅನ್ನೋ ಗಾಳಿ ಸುದ್ದಿ ಓಡಾಡಿತ್ತು. ಇದೇ ವೇಳೆ ಬಾಲಿವುಡ್ ನಟ ವರುಣ್ ಧವನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಲವ್ ಲೈಫ್‌ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

  'ಪ್ರಭಾಸ್ ಲೈಫ್‌ನಲ್ಲಿ ಒಬ್ಬ ಡಾರ್ಲಿಂಗ್'

  'ಪ್ರಭಾಸ್ ಲೈಫ್‌ನಲ್ಲಿ ಒಬ್ಬ ಡಾರ್ಲಿಂಗ್'

  ಪ್ರಭಾಸ್ ಲವ್‌ ಲೈಫ್ ಮೇಲೆ ಎಲ್ಲರಿಗೂ ಕಣ್ಣು. ಪ್ರಭಾಸ್ ಯಾರನ್ನು ವಿವಾಹವಾಗುತ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗ್ಬಿಟ್ಟಿದೆ. ಈ ಮಧ್ಯೆ ಪ್ರಭಾಸ್ ಜೊತೆ ಬಾಲಿವುಡ್ ನಟಿಯ ಹೆಸರು ಕೂಡ ತಳುಕು ಹಾಕೊಂಡಿದೆ. ಅದುವೇ ಕೃತಿ ಸನನ್. ಈಗ ಬಾಲಿವುಡ್ ಸ್ಟಾರ್ ವರುಣ್ ಧವನ್ ಕೂಡ ಪ್ರಭಾಸ್ ಲವ್‌ ಲೈಫ್‌ ಬಗ್ಗೆ ಸುಳಿವು ನೀಡಿದ್ದಾರೆ. " ಪ್ರಭಾಸ್ ಲೈಫ್‌ನಲ್ಲಿ ಒಬ್ಬ ಡಾರ್ಲಿಂಗ್ ಇದ್ದಾಳೆ. ಅವಳು ಇದಕ್ಕಿಂತ ಖುಷಿಯಾಗಿರಲು ಸಾಧ್ಯವೇ ಇಲ್ಲ" ಎಂದು ಬಾಲಿವುಡ್ ನಟ ವರುಣ್ ಧವನ್ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

  'ಕೃತಿ- ಪ್ರಭಾಸ್ ಒಳ್ಳೆ ಜೋಡಿ'

  'ಕೃತಿ- ಪ್ರಭಾಸ್ ಒಳ್ಳೆ ಜೋಡಿ'

  ವರುಣ್ ಧವನ್ ಇಲ್ಲಿಗೆ ಸುಮ್ಮನಾಗಿಲ್ಲ. ಕೃತಿ ಸನನ್ ಹಾಗೂ ಪ್ರಭಾಸ್ ಇಬ್ಬರೂ ಒಳ್ಳೆ ಜೋಡಿ ಎಂದು ವರುಣ್ ಧವನ್ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಕೆಲವು ದಿನಗಳ ಹಿಂದಷ್ಟೇ ಪ್ರಭಾಸ್ ಹಾಗೂ ಕೃತಿ ಸನನ್ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿ ಹರಿದಾಡುತ್ತಿತ್ತು. ಅದಕ್ಕೆ ಪೂರಕ ಎನ್ನುವಂತೆ 'ಆದಿಪುರುಷ್' ಟ್ರೈಲರ್ ಲಾಂಚ್‌ ವೇಳೆನೂ ಈ ಜೋಡಿ ಕೈ ಕೈ ಹಿಡಿದು ಪ್ರಮೋಷನ್ ಮಾಡಿತ್ತು.

  ಅನುಷ್ಕಾ ಜೊತೆ ಪ್ರಭಾಸ್ ಹೆಸರು

  ಅನುಷ್ಕಾ ಜೊತೆ ಪ್ರಭಾಸ್ ಹೆಸರು

  'ಬಾಹುಬಲಿ' ಸಿನಿಮಾ ರಿಲೀಸ್ ಆದಲ್ಲಿಂದ ಅನುಷ್ಕಾ ಶೆಟ್ಟಿ ಹಾಗೂ ಡಾರ್ಲಿಂಗ್ ಪ್ರಭಾಸ್ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಏನೋ ನಡೀತಿದೆ. ಇಬ್ಬರೂ ಇನ್ನೇನು ಕೆಲವು ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಅನ್ನೋ ಮಾತು ಹರಿದಾಡಿತ್ತು. ಆದರೆ, ಇಬ್ಬರೂ ಈ ಗಾಳಿ ಸುದ್ದಿಯನ್ನು ಅಲ್ಲಗೆಳೆಯುತ್ತಲೇ ಇದ್ದರು. ಪ್ರಭಾಸ್ ಕೂಡ ಹಲವು ಸಂದರ್ಶನಗಳಲ್ಲಿ ನಾವಿಬ್ಬರೂ ಸ್ನೇಹಿತರು ಎಂದೇ ಹೇಳುತ್ತಿದ್ದರು.

  ಕೃತಿ-ಪ್ರಭಾಸ್ ಫೋನ್ ಕಥೆಯೇನು?

  ಕೃತಿ-ಪ್ರಭಾಸ್ ಫೋನ್ ಕಥೆಯೇನು?

  ಕೆಲವು ದಿನಗಳ ಹಿಂದೆ ಕೃತಿ ಸನನ್ 'ಕಾಫಿ ವಿತ್ ಕರಣ್ 7' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಆಪ್ತರಿಗೆ ಫೋನ್ ಮಾಡುವ ಟಾಸ್ಕ್‌ ನೀಡಿದ್ದರು. ಆ ವೇಳೆ ಕೃತಿ ಮೊದಲು ಪ್ರಭಾಸ್‌ಗೆ ಕರೆ ಮಾಡಿದ್ದರು. ಪ್ರಭಾಸ್ ಒಂದು ರಿಂಗ್ ಆಗುತ್ತಿದ್ದಂತೆ ಕೃತಿ ಸನನ್ ಕರೆಯನ್ನು ಸ್ವೀಕರಿಸಿದ್ದರು. ಈ ಘಟನೆ ಇಬ್ಬರ ಲವ್‌ ಸ್ಟೋರಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಆದರೆ, ಪ್ರಭಾಸ್ ಆಗಲಿ, ಕೃತಿ ಸನನ್ ಆಗಲಿ ಇಬ್ಬರೂ ಈ ಬಗ್ಗೆ ಎಲ್ಲೂ ಚಿಕ್ಕದೊಂದು ಸುಳಿವು ಕೂಡ ನೀಡಲಿಲ್ಲ.

  English summary
  A New Darling In Prabhas Life She Couldn't Have Been Happier Says Varun Dhawan Goes Viral, Know More.
  Friday, November 25, 2022, 16:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X