twitter
    For Quick Alerts
    ALLOW NOTIFICATIONS  
    For Daily Alerts

    ರಾವಣನ ಕುರಿತು ಹೇಳಿಕೆ: ಸೈಫ್ ಅಲಿ ಖಾನ್ ವಿರುದ್ಧ ಕೇಸ್

    |

    ರಾವಣನ ಕುರಿತು ಬಾಲಿವುಡ್ ನಟ ಸೈಫ್ ಅಲಿ ಖಾನ್ ನೀಡಿದ್ದ ಹೇಳಿಕೆಗೆ ಭಾರಿ ಖಂಡನೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಟೀಕೆ ಎದುರಾದ ನಂತರ ನಟ ಸೈಫ್ ಅಲಿ ಖಾನ್ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಿದ್ದರು.

    ಇದೀಗ, ಸೈಫ್ ಅಲಿ ಖಾನ್ ಮತ್ತು ನಿರ್ದೇಶಕ ಓಂ ರಾವತ್ ವಿರುದ್ಧ ಉತ್ತರ ಪ್ರದೇಶದ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿದೆ. ರಾವಣನ ಬಗ್ಗೆ ಸೈಫ್ ಅಲಿ ಖಾನ್ ನೀಡಿದ ಹೇಳಿಕೆ ಬಗ್ಗೆ ಕ್ರಮ ಜರುಗಿಸಬೇಕೆಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ಧಾರ್ಮಿಕ ನಂಬಿಕೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಮುಂದೆ ಓದಿ...

    ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚಿಸಿ, ಹೇಳಿಕೆ ಹಿಂಪಡೆದ ನಟ ಸೈಫ್ ಅಲಿ ಖಾನ್ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚಿಸಿ, ಹೇಳಿಕೆ ಹಿಂಪಡೆದ ನಟ ಸೈಫ್ ಅಲಿ ಖಾನ್

    ಸೈಫ್ ವಿರುದ್ಧ ದೂರು

    ಸೈಫ್ ವಿರುದ್ಧ ದೂರು

    ಉತ್ತರ ಪ್ರದೇಶದ ಮೂಲದ ಹಿಮಾಂಶು ಶ್ರೀವಸ್ತವ್ ಎಂಬ ವಕೀಲರು ಸಿವಿಲ್ ನ್ಯಾಯಾಲಯದಲ್ಲಿ ಸೈಫ್ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಎಎನ್ಐ ವರದಿ ಮಾಡಿರುವ ಪ್ರಕಾರ, ಈ ಅರ್ಜಿ ಡಿಸೆಂಬರ್ 23 ರಂದು ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದೆ.

    ಸೈಫ್ ಹೇಳಿಕೆ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿದೆ

    ಸೈಫ್ ಹೇಳಿಕೆ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿದೆ

    ಭಗವಾನ್ ಶ್ರೀರಾಮನನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಿದರೆ, ರಾವಣನನ್ನು ದುಷ್ಟ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ವಿಜಯಶಾಮಿಯ ಹಬ್ಬವನ್ನು ಆಚರಿಸಲಾಗುತ್ತದೆ. 'ಸನಾತನ ಧರ್ಮ'ದ ಬಗ್ಗೆ ಆಳವಾದ ನಂಬಿಕೆ ಇದ್ದು, ಸೈಫ್ ಅವರ ಹೇಳಿಕೆಯೂ "ಸನಾತನ ಧರ್ಮದ ಮೇಲಿನ ನಂಬಿಕೆಯಗೆ ನಕಾರಾತ್ಮಕವಾಗಿದೆ'' ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

    ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚಿಸಿ, ಹೇಳಿಕೆ ಹಿಂಪಡೆದ ನಟ ಸೈಫ್ ಅಲಿ ಖಾನ್ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚಿಸಿ, ಹೇಳಿಕೆ ಹಿಂಪಡೆದ ನಟ ಸೈಫ್ ಅಲಿ ಖಾನ್

    ಸೈಫ್ ಅಲಿ ಖಾನ್ ಏನು ಹೇಳಿದ್ದರು?

    ಸೈಫ್ ಅಲಿ ಖಾನ್ ಏನು ಹೇಳಿದ್ದರು?

    'ರಾವಣನಾಗಿ ನಟಿಸಲು ಉತ್ಸುಕನಾಗಿದ್ದೇನೆ. ಆ ಪಾತ್ರ ನಿರ್ವಹಣೆಯಲ್ಲಿ ಯಾವುದೇ ನಿರ್ಬಂಧವಿಲ್ಲ. ಮನರಂಜನೆ ದೃಷ್ಟಿಯಿಂದ ಆ ಪಾತ್ರಕ್ಕೆ ನಾವು ಮಾನವೀಯ ಗುಣಗಳನ್ನು ಅಳವಡಿಸುತ್ತಿದ್ದೇವೆ. ಲಕ್ಷ್ಮಣನು ಶೂರ್ಪನಕಿಯ ಮೂಗು ಕತ್ತರಿಸಿದಕ್ಕಾಗಿ ಪ್ರತಿಕಾರ ತೀರಿಸಿಕೊಳ್ಳುವ ಕಾರಣಕ್ಕಾಗಿಯೇ ರಾವಣನು ಸೀತೆಯನ್ನು ಅಪರಿಸಿದ್ದ ಮತ್ತು ರಾಮನ ವಿರುದ್ಧ ಯುದ್ಧ ಮಾಡಿದ್ದ ಎಂಬುದನ್ನು ಈ ಸಿನಿಮಾ ಸಮರ್ಥಿಸುತ್ತಿದೆ' ಎಂದು ಸೈಫ್ ಅಲಿ ಖಾನ್ ಸಂದರ್ಶನದಲ್ಲಿ ಹೇಳಿದ್ದರು.

    ಕ್ಷಮೆಯಾಚಿಸಿದ ನಟ

    ಕ್ಷಮೆಯಾಚಿಸಿದ ನಟ

    ಸೈಫ್ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ ನಂತರ ಕ್ಷಮೆಯಾಚಿಸಿದರು. 'ಸಂದರ್ಶವೊಂದರಲ್ಲಿ ನನ್ನ ಒಂದು ಹೇಳಿಕೆಯು ವಿವಾದವನ್ನು ಉಂಟುಮಾಡಿದೆ. ಜನರು ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ನನಗೆ ತಿಳಿದಿದೆ. ಆದರೆ ಇದು ನನ್ನ ಉದ್ದೇಶವಾಗಿರಲಿಲ್ಲ. ಇದರಿಂದ ನೋವಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಮತ್ತು ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ. ರಾಮ ಯಾವಾಗಲು ವೀರತೆಯ ಸಂಕೇತ. ಆದಿಪುರುಷ್ ದುಷ್ಟರ ವಿರುದ್ಧ ಒಳ್ಳೆತನದ ಗೆಲುವಿನ ಬಗ್ಗೆ ಇದೆ. ಈ ಸಿನಿಮಾದಲ್ಲಿ ಯಾವುದೇ ವಿರೂಪಗಳಿಲ್ಲದೆ ಮಹಾಕಾವ್ಯವನ್ನು ಪ್ರಸ್ತುತಪಡಿಸಲು ಇಡೀ ತಂಡವು ಒಟ್ಟಾಗಿ ಕೆಲಸಮಾಡುತ್ತಿದೆ' ಎಂದು ಸಮರ್ಥನೆ ನೀಡಿದ್ದಾರೆ.

    Recommended Video

    ರಿಲೀಸ್ ಆಯ್ತು ಇಂದ್ರಜಿತ್ ಲಂಕೇಶ್ Shakeela ಟ್ರೈಲರ್ | Filmebeat Kannada
    ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ನಾಯಕ!

    ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ನಾಯಕ!

    ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸುತ್ತಿದ್ದಾರೆ, ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದ ಪಾತ್ರಗಳು ಸದ್ಯಕ್ಕೆ ಅಂತಿಮ ಆಗಿಲ್ಲ. ಮುಂದಿನ ವರ್ಷ ಚಿತ್ರೀಕರಣ ಆರಂಭಿಸಲಿರುವ ಚಿತ್ರತಂಡ 2022ರ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ.

    English summary
    A petition has been filed against Saif Ali Khan and Om Raut in Uttar Pradesh's Jaunpur district for the actor's Adipurush comment.
    Wednesday, December 16, 2020, 16:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X