»   » ರಾಣಿ ಮುಖರ್ಜಿ 'ಹಿಚ್ಕಿ' ಚಿತ್ರವನ್ನು ಮೆಚ್ಚಿದ ಶಿಕ್ಷಕಿಯರು

ರಾಣಿ ಮುಖರ್ಜಿ 'ಹಿಚ್ಕಿ' ಚಿತ್ರವನ್ನು ಮೆಚ್ಚಿದ ಶಿಕ್ಷಕಿಯರು

Posted By:
Subscribe to Filmibeat Kannada

ರಾಣಿ ಮುಖರ್ಜಿ ಮತ್ತೆ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. ನಾಲ್ಕು ವರ್ಷದ ಬಳಿಕ ಮತ್ತೆ ಸಿನಿಮಾ ಮಾಡಿರುವ ರಾಣಿ ಮುಖರ್ಜಿ ಒಂದು ಒಳ್ಳೆಯ ಸಿನಿಮಾ ಮೂಲಕ ವಾಪಸ್ ಆಗಿರುವ ಸಂತಸದಲ್ಲಿ ಇದ್ದಾರೆ. ಅವರ ನಟನೆಯ 'ಹಿಚ್ಕಿ' ಸಿನಿಮಾ ನಾಳೆ (ಶುಕ್ರವಾರ) ದೇಶದ್ಯಾಂತ ರಿಲೀಸ್ ಆಗಲಿದ್ದು, ಚಿತ್ರದ ವಿಶೇಷ ಪ್ರದರ್ಶನವನ್ನು ಶಿಕ್ಷಕಿಯರಿಗಾಗಿ ಏರ್ಪಡಿಸಲಾಗಿತ್ತು.

'ಹಿಚ್ಕಿ' ಸಿನಿಮಾ ತನ್ನ ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದಿದೆ. ರಾಣಿ ಮುಖರ್ಜಿ ಚಿತ್ರದಲ್ಲಿ ನೈನಾ ಮಥುರ್ ಎಂಬ ನರ ಮಂಡಲದ ನ್ಯೂನತೆ ಇರುವ ಒಬ್ಬ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಣಿ ಮುಖರ್ಜಿ ಮಾಡಿರುವ ಶಿಕ್ಷಕಿ ಪಾತ್ರವನ್ನು ರಿಯಲ್ ಶಿಕ್ಷಕಿಯರು ನೋಡಿ ಮೆಚ್ಚಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಬರುತ್ತಿರುವ ಸದಭಿರುಚಿಯ ಸಿನಿಮಾಗಳ ಸಾಲಿಗೆ 'ಹಿಚ್ಕಿ' ಕೂಡ ಸೇರಲಿದೆ.

 A special screening of Hichki was hosted for over 100 teachers

ಯಶ್ ಚೋಪ್ರಾ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಸಿದ್ಧಾರ್ಥ್ ಪಿ ಮಲ್ಹೋತ್ರ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಕಥೆ ಒಬ್ಬ ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ನಡುವೆ ಸಾಗುತ್ತದೆ. ನರ ಮಂಡಲದ ನ್ಯೂನತೆ ಇರುವ ಒಬ್ಬ ಹುಡುಗಿ ಟೀಚರ್ ಆಗಬೇಕು ಎಂಬ ತಮ್ಮ ಕನಸನ್ನು ಹೇಗೆ ನನಸು ಮಾಡಿ ತೋರಿಸುತ್ತಾಳೆ ಮತ್ತು ಹೇಗೆ ಆಕೆ ಎಲ್ಲರಿಗೆ ಮಾದರಿ ಆಗುವ ಶಿಕ್ಷಕಿ ಆಗುತ್ತಾಳೆ ಎನ್ನುವುದದನ್ನು ಚಿತ್ರದಲ್ಲಿ ತೋರಿಸಲಾಗಿದೆ.

English summary
A special screening of 'Hichki' was hosted for over 100 teachers in Dubai. Rani Mukerji's 'Hichki' movie will release tomorrow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X