»   » ಪ್ರಿಯಾಂಕಾ ಗಾಂಧಿ ಪಾತ್ರ ಮಾಡಲಿರುವ ಈ ನಟಿ ಯಾರು.?

ಪ್ರಿಯಾಂಕಾ ಗಾಂಧಿ ಪಾತ್ರ ಮಾಡಲಿರುವ ಈ ನಟಿ ಯಾರು.?

By Bharath Kumar
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಾಲಿವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾದ 'ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ಪ್ರಿಯಾಂಕಾ ಗಾಂಧಿ ಅವರ ಪಾತ್ರವನ್ನ ಯಾರು ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

  'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ' ಚಿತ್ರದಲ್ಲಿ ಮೋಡಿ ಮಾಡಿದ್ದ ಅಹನಾ ಕುಮ್ರ ಈಗ ಮನ್ ಮೋಹನ್ ಸಿಂಗ್ ಬಯೋಪಿಕ್ ಚಿತ್ರದಲ್ಲಿ ಪ್ರಿಯಾಂಕಾ ಗಾಂಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಬಿ-ಟೌನ್ ಹಿರಿಯ ನಟ ಅನುಪಮ್ ಖೇರ್ ಈ ಚಿತ್ರದಲ್ಲಿ ಮಾಜಿ ಪ್ರಧಾನಮಂತ್ರಿ ಮನ್ ಮೋಹನ್ ಸಿಂಗ್ ಅವರ ಪಾತ್ರ ನಿರ್ವಹಿಸುತ್ತಿದ್ದು, ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಗಳು ಸದ್ದು ಮಾಡುತ್ತಿದೆ.

  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವತಾರದಲ್ಲಿರುವ ಈ ನಟ ಯಾರು.?

  ಇನ್ನು ಪ್ರಿಯಾಂಕಾ ಗಾಂಧಿ ಪಾತ್ರಕ್ಕೆ ಆಯ್ಕೆಯಾದ ಬಗೆ ವಿವರಿಸಿದ ಅಹನಾ ಕುಮ್ರ ''ಆಡಿಷನ್ ನಲ್ಲಿ ನನಗೆ ಪ್ರಿಯಾಂಕ ಗಾಂಧಿಯವರ ಡ್ರೆಸ್ ಸ್ಟೈಲ್ ಮಾಡುವಂತೆ ಹೇಳಲಾಗಿತ್ತು. ಆ ಲುಕ್‌ನಲ್ಲಿ ನಾನು ಪ್ರಿಯಾಂಕ ಗಾಂಧಿಯವರನ್ನೇ ಹೋಲುತ್ತಿದ್ದೆ. ಈ ಆಯ್ಕೆ ಖುಷಿ ತಂದಿದೆ. ಈ ಪಾತ್ರಕ್ಕಾಗಿ ನಾನು ಪ್ರಿಯಾಂಕರವರ ಬಾಡಿ ಲಾಂಗ್ವೇಜ್ ರೂಢಿಸಿಕೊಳ್ಳಬೇಕಿದೆ'' ಎಂದು ಅಹನಾ ಸಂತಸ ವ್ಯಕ್ತಪಡಿಸಿದ್ದಾರೆ.

  ಸೋನಿಯಾ ಗಾಂಧಿ ಪಾತ್ರಕ್ಕಾಗಿ ಜರ್ಮನಿಯಿಂದ ಬಂದ ನಟಿ.!

  ಕೇವಲ ಸೋನಿಯಾ ಗಾಂಧಿ ಮಗಳು ಪ್ರಿಯಾಂಕಾ ಗಾಂಧಿ ಮಾತ್ರವಲ್ಲ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖ ಪಾತ್ರಗಳು ಈ ಚಿತ್ರದಲ್ಲಿ ಮೂಡಿಬರಲಿದೆ.

  ಅಂದ್ಹಾಗೆ, ಮನಮೋಹನ್ ಸಿಂಗ್ ಅವರ ಆಡಳಿತಾವಧಿ 2004-2008ರ ವರೆಗೂ ಮಾಧ್ಯಮ ಸಲಹಗಾರರಾಗಿದ್ದ ಸಂಜಯ್ ಬರು ಅವರು ಬರೆದಿರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಪುಸ್ತಕದ ಪ್ರತಿರೂಪವಾಗಿ ಈ ಸಿನಿಮಾ ಸಿದ್ಧವಾಗುತ್ತಿದೆ.

  ರಾಷ್ಟ್ರ ಪ್ರಶಸ್ತಿ ವಿಜೇತ ಹನ್ಸಲ್ ಮೆಹ್ತಾ ಚಿತ್ರಕಥೆ ಬರೆಯುತ್ತಿದ್ದು, ವಿಜಯ ರತ್ನಾಕರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಗೂ ಮುಂಚೆ ಈ ಚಿತ್ರವನ್ನ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗಿದೆ.

  English summary
  After featuring in Alankrita Shrivastava’s Lipstick Under My Burkha, Aahana Kumra will be seen in Vijay Ratnakar Gutte’s The Accidental Prime Minister, which features Anupam Kher as the former Prime Minister of India, Manmohan Singh. Aahana plays Priyanka Gandhi in the film.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more