For Quick Alerts
  ALLOW NOTIFICATIONS  
  For Daily Alerts

  ಅಮಿತಾಭ್-ಅಜಯ್ ದೇವಗನ್ ಚಿತ್ರಕ್ಕೆ ಜೊತೆಯಾದ 'ಪೈಲ್ವಾನ್' ಸುಂದರಿ

  |

  ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್ ನಟಿಸುತ್ತಿರುವ ಮೇಡೇ ಚಿತ್ರವೂ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡ್ತಿದೆ. ಈಗಾಗಲೇ ಅಮಿತಾಭ್ ಬಚ್ಚನ್, ರಕುಲ್ ಪ್ರೀತ್ ಸಿಂಗ್, ಅಂಗೀರಾ ಧಾರ್ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ನಿರೀಕ್ಷೆ ಹೆಚ್ಚಿಸಿದೆ.

  ಇದೀಗ, ಮತ್ತೊಬ್ಬ ಸ್ಟಾರ್ ನಟಿಯ ಎಂಟ್ರಿಯಾಗಿದೆ. ನಟಿ ಆಕಾಂಕ್ಷ ಸಿಂಗ್ ಮೇಡೇ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್ ಅವರ ಪತ್ನಿ ಪಾತ್ರದಲ್ಲಿ ಆಕಾಂಕ್ಷ ಕಾಣಿಸಿಕೊಳ್ಳುತ್ತಿದ್ದು, ಶುಕ್ರವಾರದಿಂದ ಚಿತ್ರೀಕರಣದಲ್ಲಿ ಸಹ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ''ಇಂತಹ ದೊಡ್ಡ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿರುವುದು ತೀರಾ ಸಂತಸ ತಂದಿದೆ. ಅಜಯ್ ದೇವಗನ್, ಅಮಿತಾಭ್ ಬಚ್ಚನ್ ಅಂತಹ ದೊಡ್ಡ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ನನ್ನ ಕನಸು ನನಸಾದಂತೆ. ಚಿತ್ರದ ಮುಹೂರ್ತದಲ್ಲಿ ಮೊದಲ ದೃಶ್ಯ ನನ್ನದು ಎನ್ನುವುದು ನನಗೆ ಅದೃಷ್ಟ'' ಎಂದು ಖುಷಿ ಹಂಚಿಕೊಂಡಿದ್ದಾರೆ.

  ಅಂದ್ಹಾಗೆ, ಈ ಚಿತ್ರವನ್ನು ಅಜಯ್ ದೇವಗನ್ ನಿರ್ದೇಶನ ಮಾಡುತ್ತಿರುವುದು ಮತ್ತೊಂದು ವಿಶೇಷ. ಈ ಕುರಿತು ಅಜಯ್ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದು, ''ಮೇಡೇ ಚಿತ್ರೀಕರಣ ಆರಂಭವಾಗಿದೆ. ನನ್ನ ಪೋಷಕರಿಂದ ಆಶೀರ್ವಾದ ಪಡೆದು ಪ್ರಾರಂಭಿಸಿದ್ದೇನೆ. ಹಾಗೂ ನಿಮ್ಮ ಬೆಂಬಲವಿಲ್ಲದೇ ಯಾವುದೇ ಪೂರ್ಣವಾಗುವುದಿಲ್ಲ. 2022ರ ಏಪ್ರಿಲ್ 29ರಂದು ಸಿನಿಮಾ ತೆರೆಗೆ ಬರಲಿದೆ'' ಎಂದು ಟ್ವೀಟ್ ಮಾಡಿದ್ದಾರೆ.

  aakanksha-singh-joins-the-star-cast-of-the-thrilling-drama-mayday

  Recommended Video

  Lockdown ನಲ್ಲಿ ಕೆಲಸ ಕಳೆದುಕೊಂಡವರ ನೆರವಿಗೆ ಬಂದ Sonu Sood | Filmibeat Kannada

  ಇನ್ನು ಆಕಾಂಕ್ಷ ಬಗ್ಗೆ ಹೇಳುವುದಾರೇ ಬದ್ರಿನಾಥ್ ಕಿ ದುಲ್ಹಾನಿಯಾ ಚಿತ್ರದ ಮೂಲಕ ಜರ್ನಿ ಆರಂಭಿಸಿದ್ದ ನಟಿ, ಮಳ್ಳಿ ರಾವ ಎಂಬ ತೆಲುಗು ಸಿನಿಮಾ ಮಾಡಿದರು. ಇದಾದ ಬಳಿಕ ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆ ಪೈಲ್ವಾನ್ ಸಿನಿಮಾದಲ್ಲಿ ನಟಿಸಿದರು. ತಮಿಳಿನಲ್ಲಿ ಕ್ಲಾಪ್ ಎಂಬ ಸಿನಿಮಾ ಮಾಡ್ತಿದ್ದು, ಇದೀಗ, ಮೇಡೇ ಸಿನಿಮಾಗು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  English summary
  Aakanksha Singh joins the star cast of the thrilling Drama Mayday which includes Amitabh Bachchan, Ajay Devgn.
  Sunday, December 13, 2020, 9:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X