Don't Miss!
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮದುವೆಗೆ ಮುನ್ನ ಗರ್ಭಿಣಿಯಾದ್ರೆ? ತಂದೆಯ ಅಭಿಪ್ರಾಯ ಕೇಳಿದ ಪುತ್ರಿ
ಸಹಜವಾಗಿ ಹೆಣ್ಣು ಮಕ್ಕಳು ಕೆಲವು ಖಾಸಗಿ ವಿಚಾರಗಳನ್ನು ತಂದೆಯ ಬಳಿ ಚರ್ಚಿಸಲು ಹಿಂಜರಿಯುತ್ತಾರೆ. ಮುಜುಗರ ಉಂಟು ಮಾಡುವ ಮಾತುಗಳನ್ನು ಮಾತನಾಡಲು ಇಷ್ಟಪಡುವುದಿಲ್ಲ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಪುತ್ರಿ, ತಮ್ಮ ತಂದೆ ಬಳಿಕ ಬಹಳ ಮುಕ್ತವಾಗಿ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ.
'ವಿಶ್ವ ಅಪ್ಪಂದಿರ ದಿನ'ದ ವಿಶೇಷವಾಗಿ ಅನುರಾಗ್ ಕಶ್ಯಪ್ ಸಂದರ್ಶನ ಮಾಡಿರುವ ಆಲಿಯಾ ಕಶ್ಯಪ್, ವಿವಾಹ ಪೂರ್ವ ಲೈಂಗಿಕತೆ ಕುರಿತು, ಹದಿಹರೆಯದ ಗರ್ಭಧಾರಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಇದಕ್ಕೆ ಅನುರಾಗ್ ಕಶ್ಯಪ್ ಸಹ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಶನದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

ಮಗಳು ಸಲಿಂಗಕಾಮಿಯಾಗಿದ್ದರೆ?
ಒಂದು ವೇಳೆ ನಿಮ್ಮ ಮಗಳು ಸಲಿಂಗಕಾಮಿ ಎಂದು ತಿಳಿದರೆ ಏನು ನಿರ್ಧರಿಸುತ್ತೀರಾ ಎಂದು ಆಲಿಯಾ ತಂದೆಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅನುರಾಗ್ ಕಶ್ಯಪ್ ''ತಲೆಯನ್ನಾಡಿಸಿ ಓಕೆ'' ಎಂದಷ್ಟೇ ಹೇಳಿದರು. ಪೋಷಕರಿಗೆ ಈ ಬಗ್ಗೆ ಏನ್ ಹೇಳ್ತೀರಾ ಎಂದು ಮರುಪ್ರಶ್ನೆ ಕೇಳಲಾಯಿತು. ''ಈ ಬಗ್ಗೆ ಪೋಷಕರಿಗೆ ಅರ್ಥವಾಗದಿದ್ದಾಗ ಹೆಚ್ಚು ಪ್ರತಿಕ್ರಿಯಿಸುತ್ತಾರೆ, ಹೆಚ್ಚು ಭಯ ಪಡ್ತಾರೆ. ಅಂತಹ ಸಮಯದಲ್ಲಿ ಮಕ್ಕಳ ವಯಸ್ಸಿನ ಬಗ್ಗೆ ಯೋಚಿಸಬೇಕು. ಪೋಷಕರು ಅರ್ಥ ಮಾಡಿಕೊಳ್ಳದಿದ್ದರೆ ಮಕ್ಕಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಯೋಚಿಸಬೇಕು'' ಎಂದು ತಿಳಿಸಿದರು.
ಖ್ಯಾತ
ನಿರ್ದೇಶಕ
ಅನುರಾಗ್
ಕಶ್ಯಪ್
ಪುತ್ರಿಗೆ
ಬಂದಿತ್ತು
ರೇಪ್,
ಕೊಲೆ
ಬೆದರಿಕೆ:
ಆಲಿಯಾ
ಹೇಳಿದ್ದೇನು?

ನನ್ನ ಬಾಯ್‌ಫ್ರೆಂಡ್ ಇಷ್ಟನಾ?
ಆಲಿಯಾ ತನ್ನ ಗೆಳೆಯ ಶೇನ್ ಗ್ರೆಗೊಯಿರ್‌ರನ್ನು ಇಷ್ಟಪಡುತ್ತೀರಾ ಎಂದು ಕೇಳಿದ್ದಕ್ಕೆ, "ನಾನು ಅವನನ್ನು ಇಷ್ಟಪಡುತ್ತೇನೆ. ಬಾಯ್‌ಫ್ರೆಂಡ್ ವಿಚಾರದಲ್ಲಿ ನಿನ್ನ ಆಯ್ಕೆ ಸಾಮಾನ್ಯವಾಗಿ ಇಷ್ಟವಾಗುತ್ತದೆ. ಶೇನ್ ಗ್ರೆಗೊಯಿರ್ ತುಂಬಾ ಆಧ್ಯಾತ್ಮಿಕ ವ್ಯಕ್ತಿ, ತುಂಬಾ ಶಾಂತ ಸ್ವಭಾವದವರು. 40ರ ವಯಸ್ಸಿನ ಪುರುಷರಂತೆ ಆಲೋಚಿಸುವಷ್ಟು ಗುಣ ಹೊಂದಿದ್ದಾನೆ'' ಎಂದರು.

ಮದುವೆ ಮುನ್ನ ಗರ್ಭಿಣಿಯಾದ್ರೆ?
ಒಂದು ವೇಳೆ ಮದುವೆ ಮುನ್ನ ಮಗಳು ಗರ್ಭಿಣಿಯಾದ್ರೆ ಎಂದು ಆಲಿಯಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅನುರಾಗ್ ''ಮಗಳಿಗೆ ಮಗು ಬೇಕಾ ಅಥವಾ ಬೇಡವಾ ಎಂದು ತಿಳಿದುಕೊಳ್ಳುವೆ. ಆ ನಂತರ ಅವಳ ನಿರ್ಧಾರದ ಜೊತೆ ನಾನು ನಿಲ್ಲುವೆ'' ಎಂದರು. ಮಾತು ಮುಂದುವರಿಸಿ ''ಲೈಂಗಿಕತೆ ಅಥವಾ ಲೈಂಗಿಕತೆಯ ನಿರ್ಧಾರ ವಿಷಯ ಬಂದಾಗ ತಿಳುವಳಿಕೆಯಿಂದ ಆಯ್ಕೆ ಮಾಡಬೇಕು. ಇನ್ನೊಬ್ಬರಿಂದ ಪ್ರಭಾವಿತರಾಗಬಾರದು'' ಎಂದರು.
ನಿರ್ದೇಶಕ
ಅನುರಾಗ್
ಕಶ್ಯಪ್
ವಿರುದ್ಧ
ಅತ್ಯಾಚಾರ
ದೂರು
ದಾಖಲಿಸಿದ
ನಟಿ
ಪಾಯಲ್
Recommended Video

ಮದುವೆ ಮುನ್ನ ಸೆಕ್ಸ್ ಮಾಡಿದ್ರೆ?
ಮದುವೆ ಮುನ್ನ ಸೆಕ್ಸ್ ಮಾಡಿದ್ರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ದೇಶಕ ''ಜೀವನದಲ್ಲಿ ಇಂತಹ ಪ್ರಶ್ನೆಗಳಿಂದ ಮುಂದೆ ಹೋಗೋಣ'' ಎಂದರು. ''ನಾವು ಕಾಲೇಜಿನಲ್ಲಿದ್ದಾಗ ಇಂತಹ ಪ್ರಶ್ನೆ ಕೇಳುತ್ತಿದ್ದೇವು. ಆದರೆ ಈಗ ಸಮಯ ಸಾಕಷ್ಟು ಬದಲಾಗಿದೆ'' ಎಂದು ಉತ್ತರಿಸಿದರು.