For Quick Alerts
  ALLOW NOTIFICATIONS  
  For Daily Alerts

  ಅಮೀರ್ ಕೈಯಲ್ಲಿ ಚೋರ್ ಬಜಾರ್ ಮಾಲು!

  By Rajendra
  |
  ಬಾಲಿವುಡ್ ನಟ ಅಮೀರ್ ಖಾನ್ ಏನೇ ಮಾಡಿದರು ಒಂಚೂರು ಭಿನ್ನವಾಗಿಯೇ ಇರುತ್ತದೆ. ಈಗವರು 'ಪೀಕೆ' (Peekay)ಎಂಬ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಚಿತ್ರ ವಿಚಿತ್ರ ಗೆಟಪ್ ಗಳಲ್ಲಿ ಅಮೀರ್ ಕಾಣಿಸಿಕೊಳ್ಳುತ್ತಿದ್ದು ಎಲ್ಲರ ಕುತೂಹಲ ಕೆರಳಿಸಿದೆ.

  ಕೈಯಲ್ಲಿ ಹಳೆ ಕಾಲದ ರೇಡಿಯೋ ಹಿಡಿದುಕೊಂಡು, ಅರ್ಧ ಗಂಡಿನಂತೆ ಇನ್ನರ್ಧ ಹೆಣ್ಣಿನಂತೆ ಬಟ್ಟೆ ತೊಟ್ಟು ಚಿತ್ರ ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟಕ್ಕೂ ಅವರ ಕೈಯಲ್ಲಿರುವ ರೇಡಿಯೋ ಎಲ್ಲಿ ಸಿಕ್ತಪ್ಪಾ ಅಂತೀರಾ. ದಕ್ಷಿಣ ಮುಂಬೈನ ಅತಿದೊಡ್ಡ ಬಯಲು ಮಾರುಕಟ್ಟೆ ಚೋರ್ ಬಜಾರ್ ನಲ್ಲಿ ಇದನ್ನು ಖರೀದಿಸಿದರಂತೆ.

  ಈ ರೀತಿಯ ಹಳೆ ಕಾಲದ ರೇಡಿಯೋಗಳು ಬೇರೆಲ್ಲೂ ಸಿಗದ ಕಾರಣ ಸ್ವತಃ ಅಮೀರ್ ಅವರೇ ಚೋರ್ ಬಜಾರ್ ನಲ್ಲಿ ತೆಗೆದುಕೊಂಡು ಬರಲು ಹೇಳಿದ್ದಾರೆ. ಬಳಿಕ ಅದನ್ನೇ ಅವರ ಕೈಗೆ ಕೊಟ್ಟು ಚಿತ್ರದ ಸನ್ನಿವೇಶಗಳನ್ನು ಚಿತ್ರೀಕರಿಕೊಳ್ಳಲಾಯಿತು.

  ರಾಜ್ ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಅಮೀರ್ ಖಾನ್ ಗೆ ಅನುಷ್ಕಾ ಶರ್ಮಾ ಜೋಡಿ. ಸಂಜಯ್ ದತ್, ಸುಶಾಂತ್ ಸಿಂಗ್ ರಜಪುತ್ ಸಹ ಇದ್ದಾರೆ. ಅಮೀರ್ ಹಾಗೂ ಹಿರಾನಿ ಜಂಟಿ ನಿರ್ಮಾಣದ ಚಿತ್ರವಿದು.

  ಅಂದಹಾಗೆ ಮುಂಬೈನ ಚೋರ್ ಬಜಾರ್ ದೇಶದ ಅತಿದೊಡ್ಡ ಬಯಲು ಮಾರುಕಟ್ಟೆ. ಇಲ್ಲಿ ಕದ್ದ ಮಾಲುಗಳೇನು ಮಾರುವುದಿಲ್ಲ. ಅದನ್ನು ಮುಂಚೆ ಶೋರ್ ಬಜಾರ್ ಎಂದು ಕರೆಯುತ್ತಿದ್ದರು. ಆದರೆ ಬ್ರಿಟೀಷರ ನಾಲಿಗೆಗೆ ಆ ಪದ ಸಿಕ್ಕಿ 'ಶೋರ್' ಹೋಗಿ 'ಚೋರ್' ಆಯಿತು ಅಷ್ಟೇ. (ಏಜೆನ್ಸೀಸ್)

  English summary
  Aamir Khan, who is shooting for Rajkumar Hirani's Peekay in Rajasthan, has used a radio bought from Chor Bazaar here for one of the sequences in the film. The 47-year-old was spotted wearing a skirt and blazer during the film shoot and also carrying a radio in his hand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X