»   » ಅಂತೂ ಈ ಬಾರಿ ಒಳ್ಳೆ ಕೆಲಸ ಮಾಡಿದ್ದಾರೆ ಆಮಿರ್ ಖಾನ್

ಅಂತೂ ಈ ಬಾರಿ ಒಳ್ಳೆ ಕೆಲಸ ಮಾಡಿದ್ದಾರೆ ಆಮಿರ್ ಖಾನ್

Posted By:
Subscribe to Filmibeat Kannada

ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ದೇಶ ತೊರೆಯುವ ಮಾತುಗಳನ್ನಾಡಿದ್ದ 'ಪಿ.ಕೆ' ಚಿತ್ರದ ಖ್ಯಾತಿಯ ಬಾಲಿವುಡ್ ನಟ ಅಮೀರ್ ಖಾನ್ ಅವರು ಇಡೀ ದೇಶದಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿ, ತದನಂತರ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿ ವಿವಾದದಿಂದ ಮುಕ್ತರಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ಅದೇ ಅಮೀರ್ ಖಾನ್ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುವಂತಹ ಕೆಲಸ ಮಾಡುತ್ತಿದ್ದಾರೆ. ಎಲ್ಲೆಡೆ ಬರ ಬಂದು ನೀರು ಕಾಣದೇ ತತ್ತರಿಸುತ್ತಿರುವ ಹಳ್ಳಿಗಳ ಕಡೆ ಅಮೀರ್ ಖಾನ್ ಅವರು ತಮ್ಮ ದೃಷ್ಟಿ ನೆಟ್ಟಿದ್ದಾರೆ.[ಅಮೀರ್ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಸ್ಯಾಂಡಲ್ ವುಡ್ ಸ್ಟಾರ್ಸ್]

Aamir Khan Adopts two Drought Hit Villages in Maharashtra

ಹೌದು ಖ್ಯಾತ ನಟ ಅಮೀರ್ ಖಾನ್ ಅವರು ಮಹಾರಾಷ್ಟ್ರದ 2 ಬರಪೀಡಿತ ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ 'ತಾಲ್' ಮತ್ತು 'ಕೋರೆಗಾಂವ್' ಎಂಬ ಎರಡು ಹಳ್ಳಿಗಳನ್ನು ಅಮೀರ್ ಖಾನ್ ಅವರು ದತ್ತು ತೆಗೆದುಕೊಂಡು ಅಲ್ಲಿನ ಜನರಿಗೆ ನೀರಿನ ಸಂರಕ್ಷಣೆ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ.[ಸನ್ನಿ ಜೊತೆ ನನಗೆ ಕೆಲಸ ಮಾಡಲು ಇಷ್ಟ ಎಂದವರಾರು?]

ಇತ್ತೀಚೆಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ನಟ ಅಮೀರ್ ಖಾನ್ ಅವರು ತಮ್ಮ 'ಪಾನಿ' ಎಂಬ ಫೌಂಡೇಶನ್ ವತಿಯಿಂದ ಜಲ ಸಂರಕ್ಷಣೆ ಹೇಗೆ ಮಾಡಬೇಕು, ಅದರಿಂದಾಗುವ ಉಪಯೋಗಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ.[ಚಿತ್ರಪುಟ; ನಿಮ್ಮನ್ನ ಬೆಕ್ಕಸ ಬೆರಗಾಗಿಸುವ ಆಮಿರ್ ಖಾನ್ ಹೊಸ ಲುಕ್!]

ಈ ಹಿಂದೆ 2001 ರಲ್ಲಿ ಅಮೀರ್ ಖಾನ್ ಅವರು ಭೂಕಂಪಕ್ಕೆ ತುತ್ತಾದ ಗುಜರಾತ್ ನ ಭುಜ್ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದರು. ಇನ್ನು ನಟ ಅಕ್ಷಯ್ ಕುಮಾರ್ ಮತ್ತು ನಾನಾ ಪಾಟೇಕರ್ ಅವರು ಕೂಡ ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ.

English summary
Hindi Actor Aamir Khan has adopted two villages in Marathwada named 'Tal' and 'Koregoan' in the Indian state of Maharashtra. Aamir Khan, runs a foundation called 'Paani', and it deals with problems at the grass root levels.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada