»   » ಅನುಷ್ಕಾ ಕೆಂದುಟಿಗೆ ಅಮೀರ್ ದಾಖಲೆ ಚುಂಬನ

ಅನುಷ್ಕಾ ಕೆಂದುಟಿಗೆ ಅಮೀರ್ ದಾಖಲೆ ಚುಂಬನ

Posted By: ರವಿಕಿಶೋರ್
Subscribe to Filmibeat Kannada

ಬೆಳ್ಳಿಪರದೆ ಮೇಲೆ ಮತ್ತೊಂದು ದಾಖಲೆ ಸೃಷ್ಟಿಸಲು ಅಮೀರ್ ಖಾನ್ ಸಜ್ಜಾಗಿದ್ದಾರೆ. ಬಾಲಿವುಡ್ ಇತಿಹಾಸದಲ್ಲೆ ಅತಿ ಸುದೀರ್ಘ ಚುಂಬನದ ಮೂಲಕ ಹೊಸ ದಾಖಲೆಗೆ ಅಮೀರ್ ಅಣಿಯಾಗಿದ್ದಾರೆ. ತಮ್ಮ ತುಟಿಯನ್ನು ಬಾಲಿವುಡ್ ಹಾಟ್ ಹೀರೋಯಿನ್ ಅನುಷ್ಕಾ ಶರ್ಮಾ ಅವರ ಕೆಂದುಟಿಗೆ ಒತ್ತಲಿದ್ದಾರೆ.

ಅಮೀರ್ ಖಾನ್ ಹಾಗೂ ಅನುಷ್ಕಾ ಶರ್ಮಾ ಜೊತೆಯಾಗಿ ಅಭಿನಯಿಸುತ್ತಿರುವ 'ಪೀಕೆ' (Peekay) ಎಂಬ ಚಿತ್ರದಲ್ಲಿ ಈ ಲಿಪ್ ಲಾಕ್ ಚುಂಬನ ದೃಶ್ಯವಿರುತ್ತದೆ. ಚಿತ್ರದಲ್ಲಿ ಇವರಿಬ್ಬರ ನಡುವಿನ ರೊಮ್ಯಾಂಟಿಕ್ ಸನ್ನಿವೇಶದಲ್ಲಿ ಈ ಚುಂಬನ ದೃಶ್ಯ ಬರುತ್ತದೆ.


ತನ್ನ ಅರ್ಧದಷ್ಟು ವಯಸ್ಸಿನ ತಾರೆ ಜೊತೆಗೆ ಅಮೀರ್ ಖಾನ್ ಚುಂಬನ ದಾಖಲೆ ಸೃಷ್ಟಿಸುತ್ತಿರುವುದು ಚರ್ಚೆಗೂ ಗ್ರಾಸವಾಗಿದೆ. ಇದುವರೆಗೂ ಅಮೀರ್ ಖಾನ್ ತನ್ನ ಜೊತೆ ಅಭಿನಯಿಸಿರುವ ಎಲ್ಲಾ ತಾರೆಗಳ ಚುಂಬನ ವಿನಿಮಯ ಮಾಡಿಕೊಂಡಿದ್ದಾರೆ.

ಕರಿಷ್ಮಾ ಕಪೂರ್, ಜೂಹಿ ಚಾವ್ಲಾ, ಕರೀನಾ ಕಪೂರ್, ಸೋನಾಲಿ ಬೇಂದ್ರೆ ಹೀಗೆ ಎಲ್ಲರೊಂದಿಗೆ ಚುಂಬನ ಹಂಚಿಕೊಂಡು ಸಾಕಷ್ಟು ಅನುಭವನ್ನೂ ಸಂಪಾದಿಸಿಕೊಂಡಿದ್ದಾರೆ. ಇನ್ನು ಅನುಷ್ಕಾ ಸಹ ಚುಂಬನ ದೃಶ್ಯಗಳಲ್ಲಿ ಎಲ್ ಬೋರ್ಡ್ ಅಲ್ಲ. ಬ್ಯಾಂಡ್ ಬಾಜಾ ಬರಾತ್, ಲೇಡೀಸ್ ವರ್ಸಸ್ ರಿಕಿ ಬಾಲ್ ಚಿತ್ರಗಳಲ್ಲಿ ರಣವೀರ್ ಸಿಂಗ್ ಜೊತೆ, ಮಾತೃ ಕಿ ಬಿಜ್ಲಿ ಕಾ ಮಂಡೋಲಾ ಚಿತ್ರದಲ್ಲಿ ಇಮ್ರಾನ್ ಖಾನ್ ಜೊತೆ ಚುಂಬನ ವಿನಿಮಯ ಮಾಡಿಕೊಂಡಿದ್ದಾರೆ.

ಈಗ ಅಮೀರ್ ಖಾನ್ ಜೊತೆ ಹೊಸ ದಾಖಲೆ ಸೃಷ್ಟಿಸಲು ಹೊರಟಿದ್ದಾರೆ. ಇನ್ನು 'ಪೀಕೆ' ಸಿನಿಮಾ ವಿಷಯಕ್ಕೆ ಬಂದರೆ ಇದೊಂದು ರಾಜಕೀಯ ವಿಡಂಬನಾತ್ಮಕ ಚಿತ್ರ. ರಾಜ್ ಕುಮಾರ್ ಹಿರಾನಿ ನಿರ್ದೇಶನವಿರುವ ಚಿತ್ರದಲ್ಲಿ ಸಂಜಯ್ ದತ್ ಸಹ ಪಾತ್ರ ಪೋಷಿಸುತ್ತಿದ್ದಾರೆ. 2014ಕ್ಕೆ ಈ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. (ಏಜೆನ್ಸೀಸ್)

English summary
Aamir Khan and Anushka Sharma will be seen romancing in their movie Peekay. Though Sharma is almost half the age of Aamir, the two is supposedly all set to break the previous Bollywood kissing records, by lip locking for the longest time in Peekay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada