»   » 'ಪಿಕೆ'ಅಮೀರ್ ತುಟಿ ರಂಗಿನ ರಹಸ್ಯ ಬಹಿರಂಗ

'ಪಿಕೆ'ಅಮೀರ್ ತುಟಿ ರಂಗಿನ ರಹಸ್ಯ ಬಹಿರಂಗ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮಿ. ಪರ್ಫೆಕ್ಟ್ ಅಮೀರ್ ಖಾನ್ ಅವರ ಬಹುನಿರೀಕ್ಷಿತ 'ಪಿಕೆ' ಚಿತ್ರದ ಟ್ರೇಲರ್ ಕಳೆದ ಗುರುವಾರ ಬಿಡುಗಡೆಗೊಂಡು ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ದೀಪಾವಳಿ ರಜೆ ನಡುವೆಯೂ ಸಿನಿರಸಿಕರು ಯೂಟ್ಯೂಬ್ ನಲ್ಲಿ ಅಮೀರ್ ಖಾನ್ ಹೊಸ ಅವತಾರ ಕಂಡು ಬಹುಪರಾಕ್ ಹೇಳಿದ್ದಾರೆ.

ಈ ಚಿತ್ರದಲ್ಲಿ ಅಮೀರ್ ನಿಮ್ಮೆಲ್ಲರನ್ನು ರಂಜಿಸಲು ಅನ್ಯಗ್ರಹ ಜೀವಿಯಾಗಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ವಿಷಯ ಈಗಾಗಲೇ ನಿಮಗೆ ತಿಳಿದಿದೆ. ಚಿತ್ರದಲ್ಲಿ ಅಮೀರ್ ತೊಡುವ ಲಂಗ, ಖಾಕಿ ಬಟ್ಟೆ ಬಗ್ಗೆ ಕೂಡಾ ಟ್ರೇಲರ್ ನಲ್ಲೇ ಸುಳಿವು ಸಿಕ್ಕಿದೆ. ಟ್ರಾನ್ಸಿಸ್ಟರ್ ಹಿಡಿದುಕೊಂಡು ರೈಲ್ವೆ ಹಳಿ ಮೇಲೆ ನಡೆಯುವುದೇಕೆ? ಇನ್ನೂ ತಿಳಿದು ಬಂದಿಲ್ಲ. ಅಮೀರ್ ಪಾತ್ರದ ಬಗ್ಗೆ ತಿಳಿದು ಬಂದರೂ ಚಿತ್ರದ ಕಥೆ ಹಾಗೂ ಹಾಸ್ಯಮಯ ಸನ್ನಿವೇಶಗಳ ಬಗ್ಗೆ ಕುತೂಹಲ ಇದ್ದೇ ಇದೆ. [PK ಕಥೆ ಲೀಕ್ ಆಯ್ತಂತೆ!]

3 ಈಡಿಯಟ್ಸ್, ಮುನ್ನಾಭಾಯಿ ಸರಣಿ ಚಿತ್ರಗಳ ಯಶಸ್ಸಿನ ನಂತರ ವಿದು ವಿನೋದ್ ಚೋಪ್ರಾ ನಿರ್ಮಾಣದಲ್ಲಿ ಬರುತ್ತಿರುವ ಈ ಚಿತ್ರದ ಟ್ರೇಲರ್ ಮೂರೇ ದಿನಗಳಲ್ಲಿ 2,156,722 ಪೇಜ್ ವ್ಯೂಗಳನ್ನು(ಈಸಮಯಕ್ಕೆ) ತಂದುಕೊಟ್ಟಿದೆ. ಸುಮಾರು 16901 ಲೈಕ್ಸ್ 1703 ಡಿಸ್ ಲೈಕ್ ಪಡೆದುಕೊಂಡಿದೆ. ಇನ್ನು ನಿಮಗೆ ಪುರುಸೊತ್ತಿದ್ದರೆ 1568 ಕಾಮೆಂಟ್ಸ್ ಗಳನ್ನು ಓದಿ ಆನಂದಿಸಿ. ಲೈಫ್ ಇಸ್ ಬ್ಯೂಟಿಫುಲ್ ಚಿತ್ರದ ಪಾತ್ರಕ್ಕೂ ಅಮೀರ್ ಖಾನ್ 'ಪಿಕೆ' ಯನ್ನು ಹೋಲಿಸಲಾಗಿದೆ.

Aamir Khan Ate Over 10,000 Pans For PK

ಈ ಚಿತ್ರದ ಟ್ರೇಲರ್ ಗಮಿಸಿದರೆ ಪಿಕೆ ಚಿತ್ರದಲ್ಲಿ ಅಮೀರ್ ಖಾನ್ ಪಾತ್ರಧಾರಿ ಹೆಚ್ಚೆಚ್ಚು ಪಾನ್(ವಿಳೇಯದೆಲೆ) ತಿನ್ನುತ್ತಾನೆ. ಪಿಕೆ ಪಾತ್ರಧಾರಿ ಅಮೀರ್ ತುಟಿ ರಂಗು ಹೆಚ್ಚಲು ನಿರಂತರವಾಗಿ ಪಾನ್ ಜಗಿಯುತ್ತಿದ್ದರಂತೆ.

ಶೂಟಿಂಗ್ ಗೂ ಮುನ್ನ ತಯಾರಿಗೆಂದು 10-15 ಪಾನ್ ಹಾಕಿಕೊಳ್ಳುತ್ತಿದ್ದ ಅಮೀರ್ ಅವರು ಶೂಟಿಂಗ್ ಸಂದರ್ಭದಲ್ಲಿ ಬಾಯಿಗೆ ಹಾಕಿಕೊಂಡ ಪಾನ್ ಗಳ ಲೆಕ್ಕವೇ ಇಲ್ಲವಂತೆ. ಒಂದು ಅಂದಾಜಿನ ಪ್ರಕಾರ ಸರಿ ಸುಮಾರು 10,000 ಪಾನ್ ಗಳನ್ನು ಅಮೀರ್ ಅಗಿದಿದ್ದಾರೆ.[ದೀಪಾವಳಿ ಧಮಾಕ, ಪಿಕೆ ಟ್ರೇಲರ್ ಬೊಂಬಾಟ್]

ಅಮೀರ್ ತುಟಿಯ ರಂಗು ನೈಸರ್ಗಿಕವಾಗಿ ಕಾಣುವಂತಿರಬೇಕು ಎಂಬ ಕಾರಣಕ್ಕೆ ಕೃತಕ ಬಣ್ಣ ಮೇಕಪ್ ಬಳಸಿಲ್ಲವಂತೆ. ಹೀಗಾಗಿ ಅಮೀರ್ ಅವರು ಬಯಸಿದಾಗೆಲ್ಲ ಪಾನ್ ನೀಡಲು ನೆರವಾಗುವಂತೆ ಒಬ್ಬ ಪಾನ್ ವಾಲನನ್ನು ಚಿತ್ರತಂಡ ನೇಮಿಸಿತ್ತಂತೆ.

ಚಿತ್ರದ ಪಾತ್ರಕ್ಕೆ ತಕ್ಕ ವೇಷ ವೇಷಕ್ಕೆ ತಕ್ಕ ನಟನೆ ನೀಡಲು ಅಮೀರ್ ನಡೆಸುವ ತಯಾರಿ ಕಂಡು ನಿರ್ದೇಶಕ ರಾಜಕುಮಾರ್ ಹಿರಾನಿ ಕೂಡಾ ತಲೆದೂಗಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ ಕುತೂಹಲ ಕಾಯ್ದುಕೊಳ್ಳಲು ಚಿತ್ರ ತಂಡ ನಾನಾ ರೀತಿ ಯತ್ನಗಳನ್ನು ಮಾಡುತ್ತಲೇ ಬಂದಿದೆ. ಅವರ ಪ್ರಯತ್ನ ಸಫಲವಾಗುವುದೋ ಇಲ್ಲವೋ ಡಿ.19ರ ನಂತರ ತಿಳಿಯಲಿದೆ.

English summary
Actor Aamir Khan is believed to be entirely committed to the projects he works on. The actor is always willing to give his all to his films. Now, we hear that Aamir Khan, who will be next seen in Raj Kumar Hirani's PK ate over 10,000 paans while shooting for the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada