For Quick Alerts
  ALLOW NOTIFICATIONS  
  For Daily Alerts

  ಮನೆ ಖಾಲಿ ಮಾಡಲಿರುವ ಆಮಿರ್ ಖಾನ್! ಲಾಲ್ ಸಿಂಗ್ ಚಡ್ಡ ಕಾರಣವಲ್ಲ

  |

  ಖ್ಯಾತ ಬಾಲಿವುಡ್‌ ನಟ, ನಿರ್ಮಾಪಕ ಆಮಿರ್ ಖಾನ್ ತಾವು ಈಗಿದ್ದ ಮನೆಯನ್ನು ಖಾಲಿ ಮಾಡುತ್ತಿದ್ದಾರೆ! ಇದಕ್ಕೆ ಹಣಕಾಸು ಮುಗ್ಗಟ್ಟು ಕಾರಣವಲ್ಲ.

  ಆಮಿರ್ ಖಾನ್ ಮುಂಬೈನ ಮರೀನಾ ಅಪಾರ್ಟ್‌ಮೆಂಟ್ಸ್‌ನಲ್ಲಿ ವಾಸವಿದ್ದರು. ಆದರೆ ಈ ಮನೆಯಲ್ಲಿ ಆಮಿರ್ ಖಾನ್ ಖಾಲಿ ಮಾಡುತ್ತಿದ್ದಾರೆ. ಆಮಿರ್ ಖಾನ್ ನಟನೆಯ ಈ ಹಿಂದಿನ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿದೆ. ಆ ಕಾರಣಕ್ಕೆ ಆಮಿರ್ ಖಾನ್ ತಮ್ಮ ಮನೆ ಖಾಲಿ ಮಾಡುತ್ತಿಲ್ಲ ಅದಕ್ಕೆ ಕಾರಣ ಬೇರೆಯೇ ಇದೆ.

  ಹಲವು ವರ್ಷಗಳಿಂದಲೂ ಆಮಿರ್ ಖಾನ್ ಮರೀನಾ ಅಪಾರ್ಟ್‌ಮೆಂಟ್ಸ್‌ನ ಮನೆಯಲ್ಲಿ ವಾಸವಿದ್ದು, ಆ ಮನೆಯನ್ನು ರಿನೋವೇಶನ್ ಮಾಡಬೇಕೆಂದು ನಿರ್ಣಯಿಸಿರುವ ಕಾರಣ ಆಮಿರ್ ಖಾನ್ ಆ ಮನೆಯನ್ನು ಖಾಲಿ ಮಾಡಿ ಬೇರೆ ನಿವಾಸಕ್ಕೆ ತಾತ್ಕಾಲಿಕವಾಗಿ ವಾಸ್ತವ್ಯ ಬದಲಿಸಲಿದ್ದಾರೆ.

  ಮನೆಯನ್ನು ರಿನೋವೇಶನ್ ಮಾಡಿಸುವ ಹಿಂದೆ ವಾಸ್ತು ಕಾರಣ ಏನೂ ಇಲ್ಲ. ಆಮಿರ್ ಖಾನ್‌ ಈಗಿದ್ದ ಮನೆ ಹಳೆಯದ್ದಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಆಮಿರ್ ಖಾನ್‌ರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಮನೆಯನ್ನು ನವೀಕರಣ ಮಾಡಲಾಗುತ್ತಿದೆ.

  ಆಮಿರ್ ಖಾನ್‌ಗೆ ಮುಂಬೈನಲ್ಲಿ ಇನ್ನು ಎರಡು ಮನೆಗಳಿವೆಯಂತೆ, ಬಾಂದ್ರಾದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಐಶಾರಾಮಿ ಮನೆ ಆಮಿರ್ ಖಾನ್ ಹೆಸರಿನಲ್ಲಿದೆ. ಆಮಿರ್ ಖಾನ್ ಕೆಲ ಸಮಯದ ವರೆಗೆ ಅಲ್ಲಿಗೆ ವಾಸ್ತವ್ಯ ಬದಲಿಸಿದ್ದಾರೆ ಎನ್ನಲಾಗುತ್ತಿದೆ.

  ಆಮಿರ್ ಖಾನ್‌ರ ಈ ಹಿಂದಿನ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದೆ. ಹಾಲಿವುಡ್‌ನ 'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾವನ್ನು ಜನ ಹೆಚ್ಚು ಇಷ್ಟಪಡಲಿಲ್ಲ. ಸಿನಿಮಾದ ಸಹ ನಿರ್ಮಾಪಕರೂ ಆಗಿದ್ದ ಆಮಿರ್ ಖಾನ್ ಈ ಸಿನಿಮಾದಿಂದ ಕೋಟ್ಯಂತರ ನಷ್ಟ ಅನುಭವಿಸುವಂತಾಯಿತು.

  ಆಮಿರ್ ಖಾನ್‌ರ 'ಲಾಲ್ ಸಿಂಗ್ ಚಡ್ಡ' ಸಿನಿಮಾದ ವಿರುದ್ಧ ನೆಟ್ಟಿಗರು ಅಭಿಯಾನವನ್ನು ನಡೆಸಿ, ಆಮಿರ್ ಖಾನ್ ಹಿಂದೂ ವಿರೋಧಿ ಅವರ ಸಿನಿಮಾಗಳನ್ನು ನೋಡಬೇಡಿರೆಂದರು. 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಸೋಲಿಗೆ ಇದೂ ಒಂದು ಕಾರಣವಾಯಿತು.

  English summary
  Actor Aamir Khan changing his house for short period. He renovating his house. so he moving into another house.
  Tuesday, September 27, 2022, 0:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X