»   » ಬಹಿರಂಗವಾಯ್ತು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಅಮೀರ್ ಹೊಸ ಲುಕ್?

ಬಹಿರಂಗವಾಯ್ತು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಅಮೀರ್ ಹೊಸ ಲುಕ್?

Posted By:
Subscribe to Filmibeat Kannada

ಬಾಲಿವುಡ್ ನಟ ಅಮೀರ್ ಖಾನ್ ಚಿತ್ರದ ಪ್ರಮೋಷನ್ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ.[16 ವರ್ಷಗಳ ನಂತರ ತಮ್ಮದೇ ರೆಕಾರ್ಡ್ ಬ್ರೇಕ್ ಮಾಡಿದ ಅಮೀರ್]

ಆದರೆ ಇತ್ತೀಚೆಗೆ ಅಮೀರ್ ಖಾನ್ ರವರು ನಟ ಸುಶಾಂತ್ ಸಿಂಗ್ ರಾಜ್ ಪುತ್ ಅವರರೊಂದಿಗೆ ಸಾಮಾಜಿಕ ಜಾಲತಾಣ ಇನ್ ಸ್ಟಗ್ರಾಂ ನಲ್ಲಿ ಕಾಣಿಸಿಕೊಂಡಿದ್ದು ತಮ್ಮ ಲುಕ್ ನಿಂದಲೇ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಿದ್ದಾರೆ. ಯಾಕಂದ್ರೆ ಅವರು ನೀಡಿರುವ ಕ್ಲೋಸ್ ಲುಕ್ ತೀರಾ ವಿಶೇಷವಾಗಿದೆ. ಅಲ್ಲದೇ ಅವರ ಲುಕ್ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರ ಹೊಸ ಲುಕ್ ಎಂತಲೂ ಹೇಳಲಾಗುತ್ತಿದೆ. ಮುಂದೆ
ಓದಿ..

'ಥಗ್ಸ್ ಆಫ್ ಹಿಂದೂಸ್ತಾನ್'ಗಾಗಿ ಅಮೀರ್ ಹೊಸ ಲುಕ್

ನಟ ಸುಶಾಂತ್ ಸಿಂಗ್ ರವರು ಅಮೀರ್ ಖಾನ್ ಜೊತೆಯಲ್ಲಿರುವ ಫೋಟೋವನ್ನು ಇನ್ ಸ್ಟಗ್ರಾಂ ನಲ್ಲಿ ಶೇರ್ ಮಾಡಿದ್ದು, 'ನನಗೆ ಸ್ಫೂರ್ತಿಯಾಗಿರುವ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ರನ್ನು ಭೇಟಿ ಮಾಡಿದಾಗ ಅವರು ಮೂಗೂತಿಯಲ್ಲಿ ಕಾಣಿಸಿಕೊಂಡರು. ಹಾಗಿದ್ರೆ ಅವರು ಮೂಗು ಚುಚ್ಚುಸಿಕೊಂಡಿರುವುದು 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕ್ಕಾಗಿಯೇ? ಗೆಸ್ ಮಾಡಿ.. ಆದರೆ ಈ ರಹಸ್ಯ ಬಯಲಾಗಲು ಕೆಲವು ಸಮಯ ಕಾಯಲೇಬೇಕು' ಎಂದು ಬರೆದುಕೊಂಡಿದ್ದಾರೆ. ಇದರಿಂದ ಅಮೀರ್ ಅಭಿಮಾನಿಗಳಿಗೆ ತಲೆಯೊಳಗೆ ಹುಳ ಬಿಟ್ಟಂತಾಗಿದೆ.['ಮಹಾಭಾರತ'ದಲ್ಲಿ ಅಮೀರ್ ಖಾನ್: ರಾಜಮೌಳಿ ಎಕ್ಸ್ ಕ್ಲೂಸಿವ್ ಮಾಹಿತಿ]

ಅಮೀರ್ 'ಪಿಕೆ'ಗಾಗಿ ಬಹುತೇಕವಾಗಿ ನಗ್ನರಾಗಿ ಬಂದಾಗ..

ಮಿಸ್ಟರ್ ಪರ್ಫೆಕ್ಷನಿಸ್ಟ್ ಸಿನಿಮಾಗಾಗಿ ತಾವು ಯಾವುದೇ ಪಾತ್ರವನ್ನು ನಿರ್ವಹಿಸಲು ರೆಡಿಯಾಗಿರುತ್ತಾರೆ. ಅವರದೇ ಕಂಫರ್ಟ್ ಜೋನ್ ನಿರ್ಮಾಣ ಮಾಡಿಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಅವರು ಪಿಕೆ ಚಿತ್ರಕ್ಕಾಗಿ ಬಹುತೇಕ ನಗ್ನರಾಗಿ ಕಾಣಿಸಿಕೊಂಡಿದ್ದೇ ಸಾಕ್ಷಿ. ಆದ್ದರಿಂದ ಅಮೀರ್ ಈಗ 'ಥಗ್ಸ್ ಆಫ್ ಹಿಂದೂಸ್ತಾನ್'ಗಾಗಿ ಮೂಗುತಿ ಧರಿಸಿ ಕಾಣಿಸಿಕೊಂಡರು ಅಚ್ಚರಿಯೇನಿಲ್ಲ. ಆದರೆ ತಮ್ಮ ಲುಕ್ ನಿಂದಲೇ ಆಕರ್ಷಿತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

'ಗಜಿನಿ' ಲುಕ್ ನೆನಪಿಸಿಕೊಳ್ಳಿ

2008 ರಲ್ಲಿ ತೆರೆಕಂಡ 'ಗಜಿನಿ' ಚಿತ್ರಕ್ಕಾಗಿ ಅಮೀರ್ ಖಾನ್ ತಲೆ ಕೂದಲನ್ನು ತೆಗೆಸಿ, ಮೈತುಂಬಾ ಟ್ಯಾಟೂಗಳನ್ನು ಹಾಕಿಸಿ ತಮ್ಮ ಲುಕ್ ನಿಂದಲೇ ಸಿನಿಮಾ ಪ್ರಿಯರಲ್ಲಿ ಅಚ್ಚರಿ ಮೂಡಿಸಿದ್ದರು. ಇಂದಿಗೂ ಅವರ 'ಗಜಿನಿ' ಲುಕ್ ಭಾರತೀಯ ಸಿನಿ ಪ್ರಿಯರಿಗೆ ಮರೆಯದ ದೃಶ್ಯವಾಗಿದೆ.

ಅಮೀರ್ 'ದಂಗಲ್' ಲುಕ್

2016 ರ ಡಿಸೆಂಬರ್ ನಲ್ಲಿ ತೆರೆಕಂಡ 'ದಂಗಲ್' ಚಿತ್ರಕ್ಕಾಗಿ ಅಮೀರ್ ಖಾನ್ ಯಾರು ಮಾಡಿರದ ಸಾಹಸ ಮಾಡಿದ್ದರು. ಚಿತ್ರದಲ್ಲಿ ಕುಸ್ತಿಪಟು ಮಹಾವೀರ್ ಸಿಂಗ್ ಪೊಗಟ್ ಅವರ ಪಾತ್ರ ನಿರ್ವಹಿಸಲು ಸುಮಾರ್ 22-25 ಕೆಜಿ ತೂಕ ಹೆಚ್ಚಿಸಿಕೊಂಡು ಅಶ್ಚರ್ಯ ಮೂಡಿಸಿದ್ದರು. 'ದಂಗಲ್' ಚಿತ್ರಕ್ಕಾಗಿ ಅವರ 'ಫ್ಯಾಟ್-ಟು-ಫಿಟ್' ಜರ್ನಿ ಒಂದು ರೀತಿಯ ಅಚ್ಚರಿದಾಯಕವಾಗಿತ್ತು.

English summary
Bollywood actor Aamir Khan Gets His Nose Pierced; Is That His New Look For Thugs Of Hindostan?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada