For Quick Alerts
  ALLOW NOTIFICATIONS  
  For Daily Alerts

  ಅಮೀರ್ 'ಗಿಫ್ಟ್' ಕಂಡು ಕಣ್ಣೀರು ಹಾಕಿದ ಸಹೋದರಿ

  |
  ಮಿ ಪರ್ಫೆಕ್ಟ್ ಎಂದೇ ಬಾಲಿವುಡ್ ನಲ್ಲಿ ಕರೆಸಿಕೊಳ್ಳುವ ಅಮೀರ್ ಖಾನ್, ಯಾವತ್ತೂ ತಮ್ಮ ವಿಭಿನ್ನತೆಯಿಂದಲೇ ಗುರುತಿಸಿಕೊಂಡವರು. ಅದು ಅವರ ನಟನೆಯೇ ಇರಲಿ ಅಥವಾ ನಡವಳಿಕೆಯೇ ಇರಲಿ, ಅಮೀರ್ ಯೋಚನಾ ಶೈಲಿ ಬೇರೆಯವರಿಗಿಂತ ಭಿನ್ನವೇ ಎಂಬುದು ಎಲ್ಲೆಲ್ಲೂ ಜನಜನಿತ. ಅದಕ್ಕೇ ಅಮೀರ್ ಖಾನ್ ಬಾಲಿವುಡ್ ಸೂಪರ್ ಸ್ಟಾರ್.

  ಇಂಥ ಅಮೀರ್ ಖಾನ್, ಇತ್ತೀಚಿಗೆ ನಡೆದ ಅವರ ಸಹೋದರಿಯ 50ನೇ ಹುಟ್ಟುಹಬ್ಬ ಸಮಾರಂಭದಲ್ಲಿ ವಿಭಿನ್ನತೆ ಮೆರೆದು ಅಲ್ಲಿರುವ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ತಮ್ಮ ಸಹೋದರಿಗೆ ಮಾಮೂಲಿ ಗಿಫ್ಟ್ ಕೊಡಲು ಅಮೀರ್ ಅವರಿಗೆ ಮನಸ್ಸಿರಲಿಲ್ಲವಂತೆ. ಅದಕ್ಕಾಗಿ, ಸಾಕಷ್ಟು ಯೋಚಸಿ ಕೊನೆಗೆ ಅಮೀರ್ ಕೊಟ್ಟ ಗಿಫ್ಟ್ ಗಿಫ್ಟ್ ಭಾರೀ ಮೌಲ್ಯಯುತವಾಗಿದೆ.

  ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತೀಯ ಮೇಧಾವಿ 'ಮೌಲಾನಾ ಅಬ್ದುಲ್ ಕಲಾಮ್ ಆಜಾದ್' ಅವರ ಸಂದೇಶಗಳ 2 ಪ್ರತಿಗಳನ್ನು ತಮ್ಮ ಸಹೋದರಿಗೆ ನೀಡಿದ ಅಮೀರ್, ಎಲ್ಲರ ಪ್ರಶಂಸೆಗೆ ಪಾತ್ರರಾದರು. ಅಷ್ಟೇ ಅಲ್ಲ, ಪುಣೆಯಲ್ಲಿ ಸೇರಿದ್ದ ಕುಟುಂಬದ ಸದಸ್ಯ ಮುಂದೆ ಅಮೀರ್ ಆ ಸಂದೇಶಗಳ ಧ್ವನಿಮುದ್ರಿಕೆ ಪ್ರಸಾರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.

  ಅಲ್ಲಿದ್ದವರೆಲ್ಲರೂ ಸಂದೇಶದ ಸಾರ ಕೇಳಿ ಕಣ್ಣೀರಾದರು. ಅದಕ್ಕೇ ಹೇಳವುದು ಅಮೀರ್ ಏನೇ ಮಾಡಿದರೂ ಅದನ್ನು ವಿಭಿನ್ನವಾಗಿಯೇ ಮಾಡುತ್ತಾರೆ. ಅಷ್ಟೇ ಅಲ್ಲ, ಎಲ್ಲರೂ ಮೆಚ್ಚುವಂತೆ ಮಾಡುತ್ತಾರೆ ಅಥವಾ ಮೆಚ್ಚುವುದನ್ನೇ ಮಾಡುತ್ತಾರೆ. ಅಷ್ಟಿಲ್ಲದೇ ಅವರಿಗೆ 'ಮಿ ಪರ್ಫೆಕ್ಟ್' ಪಟ್ಟ ಒಲಿದು ಬಂದಿದೆಯೇ?

  ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಅವರಂತ ಮಹಾ ಪುರುಷರನ್ನೇ ಮಾದರಿಯಾಗಿಟ್ಟುಕೊಂಡಿರುವ ಅಮೀರ್ ಇನ್ನೂ ಅದೆಷ್ಟು ಎತ್ತರಕ್ಕೆ ಏರಲಿದ್ದಾರೆಂಬುದು ಯಾರ ಊಹೆಗೂ ನಿಲುಕದ್ದು! ಯಾವಾಗಲೂ ಅಮೀರ್ ಹೊಸ ಹೊಸ ರೀತಿಯಲ್ಲಿ ಯೋಚಿಸುವಂತವರು. ಹೊಸದನ್ನೇ ಮಾಡಿ ಆಶ್ಚರ್ಯ ಹುಟ್ಟಿಸುವಂತವರು. (ಏಜೆನ್ಸೀಸ್)

  English summary
  Aamir Khan gifts the unique copy of five speeches of Maulana Abul Kalam Azad to his sister Nikhat on her birthday.
 
  Wednesday, August 8, 2012, 16:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X