Don't Miss!
- Sports
Ranji Trophy: ಮಯಾಂಕ್, ಸಮರ್ಥ್ ಅರ್ಧಶತಕ; ಕ್ವಾರ್ಟರ್ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಮೇಲುಗೈ
- News
ಸೋದರರಂತೆ ಇದ್ದವರ ನಡುವೆ ಹುಳಿ ಹಿಂಡಿದ ಲಕ್ಷ್ಮಿ ಹೆಬ್ಬಾಳ್ಕರ್ 'ವಿಷಕನ್ಯೆ': ಮಹಾಸಂಘರ್ಷಕ್ಕೆ ಮುನ್ನುಡಿ ಬರೆದ ರಮೇಶ ಜಾರಕಿಹೊಳಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಮಿರ್ ಖಾನ್ 'ಲಾಲ್ ಸಿಂಗ್' ಅವತಾರಕ್ಕೆ ಭಾರಿ ಮೆಚ್ಚುಗೆ!
ಬಾಲಿವುಡ್‌ನಲ್ಲಿ ಸದ್ಯ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗೋಕೆ ಸಿದ್ಧವಾಗಿವೆ. ಸದ್ಯ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ ಆಮಿರ್ ಖಾನ್ ಅಭಿನಯದ 'ಲಾಲ್‌ಸಿಂಗ್ ಚಡ್ಡ' ಸಿನಿಮಾ. 'ಲಾಲ್‌ಸಿಂಗ್ ಚಡ್ಡ' ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇನ್ನು ನಟ ಆಮಿರ್ ಖಾನ್ ಮತ್ತು ಚಿತ್ರದ ಕಥೆಯ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಟ್ರೈಲರ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಸಿನಿಮಾ ಸೆಟ್ಟೇರಿ ವರ್ಷಗಳೇ ಕಳೆದಿವೆ. ಕೊರೊನಾ ಕಾರಣದಿಂದಾಗಿ ಸಿನಿಮಾದ ಶೂಟಿಂಗ್ ತಡವಾಗಿದ್ದು ಚಿತ್ರದ ರಿಲೀಸ್ ಕೂಡ ತಡವಾಗಿದೆ. ಇದೀಗ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಟ್ರೈಲರ್ ಮೂಲಕ ಕಮಾಲ್ ಮಾಡುತ್ತಿದೆ.
ಡ್ರಗ್ಸ್
ಪ್ರಕರಣದಲ್ಲಿ
ಆರ್ಯನ್
ಖಾನ್‌ಗೆ
ಕ್ಲೀನ್
ಚಿಟ್:
ಎನ್ಸಿಬಿ
ವಿರುದ್ಧ
ಚಾಟಿ!
'ಲಾಲ್‌ಸಿಂಗ್ ಚಡ್ಡ' ಸಿನಿಮಾದಲ್ಲಿ ಆಮಿರ್ ಖಾನ್ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಕರೀನಾ ಕಪೂರ್, ಆಮಿರ್ ಖಾನ್‌ಗೆ ಜೊತೆಯಾಗಿ ನಟಿಸಿದ್ದಾರೆ. ಆಮಿರ್ ಖಾನ್ ಲಾಗ್ ಸಿಂಗ್ ಲುಕ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಟ್ರೈಲರ್ ಹಿಟ್ ಲಿಸ್ಟ್ ಸೇರಿಕೊಂಡಿದೆ.

ಹಾಲಿವುಡ್ ಚಿತ್ರದ ರಿಮೇಕ್ 'ಲಾಲ್‌ಸಿಂಗ್ ಚಡ್ಡ'!
'ಲಾಲ್‌ಸಿಂಗ್ ಚಡ್ಡ' ಹಾಲಿವುಡ್‌ನ 'ಫಾರೆಸ್ಟ್ ಗಂಪ್' ಸಿನಿಮಾದ ರಿಮೇಕ್. ಆಮಿರ್ ಖಾನ್‌ರ ಸಿನಿಮಾ ಎಂದರೆ ಅವರ ಪಾತ್ರಗಳ ಬಗ್ಗೆ ಹೆಚ್ಚಿನ ಕುತೂಹಲ ಇರುತ್ತೆ. ಯಾಕೆಂದರೆ ಪ್ರತಿ ಸಿನಿಮಾದಲ್ಲೂ ಆಮಿರ್ ಪಾತ್ರಕ್ಕೆ ವಿಭಿನ್ನ ಟಚ್ ಇದ್ದೆ ಇರುತ್ತೆ. ಹಾಗಾಗಿ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿವ ಆಮಿರ್ ಪಾತ್ರ ಕುತೂಹಲ ಮೂಡಿಸಿದ್ದಾರೆ.
ಪಂಜಾಬಿನ
ವಿವಾದಾತ್ಮಕ
ಗಾಯಕ,
ಕಾಂಗ್ರೆಸ್
ಮುಖಂಡ
ಸಿಧು
ಮೂಸೆ
ವಾಲಾಗೆ
ಗುಂಡಿಕ್ಕಿ
ಹತ್ಯೆ!

'ಲಾಲ್‌ಸಿಂಗ್ ಚಡ್ಡ' ರಿಲೀಸ್ ದಿನಾಂಕ ಫಿಕ್ಸ್!
ಚಿತ್ರದ ಟ್ರೈಲರ್ ಜೊತೆಗೆ ಚಿತ್ರದ ರಿಲೀಸ್ ದಿನಾಂಕವನ್ನು ಕೂಡ ಸಿನಿಮಾ ತಂಡ ಪ್ರಕಟ ಮಾಡಿದೆ. ಕೊರೊನಾ ಬಳಿಕ ಸಾಲು, ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದೆ. ಚಿತ್ರ ರಿಲೀಸ್ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಈ ಹಿಂದೆ ಏಪ್ರಿಲ್ 14ಕ್ಕೆ ರಿಲೀಸ್ ಆಗ್ಬೇಕಿದ್ದ ಈ ಸಿನಿಮಾ ಕೂಡ ಮುಂದೆಕ್ಕೆ ಹೋಗಿದೆ. ಇದೀಗ ಆಗಸ್ಟ್ 11ಕ್ಕೆ 'ಲಾಲ್‌ಸಿಂಗ್ ಚಡ್ಡ' ಸಿನಿಮಾದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ.

100 ಸ್ಥಳಗಳಲ್ಲಿ ಚಿತ್ರದ ಶೂಟಿಂಗ್!
'ಲಾಲ್‌ಸಿಂಗ್ ಚಡ್ಡ' ಸಾಕಷ್ಟು ವಿಚಾರಗಳಲ್ಲಿ ದಾಖಲೆಯನ್ನು ಬರೆಯಲು ಸಜ್ಜಾಗಿದೆ. ಈ ಚಿತ್ರವನ್ನು 200 ದಿನಗಳ ದೀರ್ಘಾವಧಿ ಚಿತ್ರೀಕರಿಸಲಾಗಿದೆ. ನಟ ಆಮಿರ್ ಖಾನ್ 'ಲಗಾನ್' ಚಿತ್ರದ ಬಳಿಕ ಇಷ್ಟು ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿರುವು ಇದೊಂದೇ ಸಿನಿಮಾಕ್ಕಾಗಿ ಅಂತೆ. ಜೊತೆಗೆ ಭಾರತದಾದ್ಯಂತ ಸುಮಾರು 100ಕ್ಕೂ ಅಧಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ವರದಿ ಆಗಿದೆ.
ಅಕ್ಷಯ್
ಕುಮಾರ್
vs
ಕಮಲ್
ಹಾಸನ್:
ಗೆಲವು
ಯಾರಿಗೆ!

ಆಮಿರ್ ಖಾನ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ!
ಇನ್ನು ನಟ ಆಮಿರ್ ಖಾನ್ ಸಿನಿಮಾಗಳು, ಒಂದಲ್ಲ ಒಂದು ವಿಚಾರಕ್ಕೆ ಗಮನಸೆಳೆಯುತ್ತವೆ. ಹಾಗೆಯೇ ಆಮಿರ್ ಖಾನ್ ಪಾತ್ರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಸೃಷ್ಟಿಯಾಗಿದೆ. ಆಮಿರ್ ಖಾನ್ ವಿಭಿನ್ನ ಲುಕ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಿಂದೆ ತೆರೆಕಂಡ 'ದಂಗಲ್', 'ಪಿಕೆ' ಅಂತಹ ಸಿನಿಮಾಗಳಲ್ಲಿ ಆಮಿರ್ ಖಾನ್ ಹಲವು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಲಾಗ್ ಸಿಂಗ್ ಚಡ್ಡ ಸಿನಿಮಾದಲ್ಲೂ 3, 4 ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದು, ಆಮಿರ್ ಪ್ರಯತ್ನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.