For Quick Alerts
  ALLOW NOTIFICATIONS  
  For Daily Alerts

  ಅಮೀರ್ ಜೋಡಿ ಕತ್ರಿನಾರನ್ನು ಕರೆದೊಯ್ದ ಶಾರುಖ್

  |

  ಅಮೀರ್ ಖಾನ್ ಜೊತೆ 'ಧೂಮ್- 3' ಚಿತ್ರದಲ್ಲಿ ನಟಿಸುತ್ತಿರುವ ಕತ್ರಿನಾ ಕೈಫ್ ಅವರನ್ನು ಶಾರುಖ್ ಖಾನ್ ಬೇರೆಡೆಗೆ ಕರೆದುಕೊಂಡು ಹೋಗಿದ್ದಾರೆ. 'ಧೂಮ್- 3' ಚಿತ್ರದ ಕೆಲವು ಸಾಹಸ ದೃಶ್ಯಗಳಿಗೆ ತರಬೇತಿ ಅಗತ್ಯವಿತ್ತಾದ್ದರಿಂದ ಕತ್ರಿನಾ ಹಾಗೂ ಅಮೀರ್ ಒಟ್ಟಿಗೆ ಶಿಕಾಗೋದಲ್ಲಿ ಸೇರಬೇಕಿತ್ತು. ಆದರೆ ಅದಕ್ಕೆ ಶಾರುಖ್ ಖಾನ್ ಕಲ್ಲು ಹಾಕಿದ್ದಾರೆ. ಒಟ್ಟಿಗಿರಬೇಕಾಗಿದ್ದ ಅಮೀರ್ ಹಾಗೂ ಕತ್ರಿನಾ ಈಗ ಬೇರೆಬೇರೆ ಆಗಿದ್ದಾರೆ.

  'ಧೂಮ್- 3' ಚಿತ್ರದ ನಿರ್ಮಾಪಕರಾದ ಯಶ್ ರಾಜ್ ತಂಡಕ್ಕೆ ಶಾರುಖ್ ಖಾನ್ ಸ್ಪೆಷಲ್ ಮನವಿ ಮಾಡಿಕೊಂಡು ತಮ್ಮ ಚಿತ್ರದ ಶೂಟಿಂಗ್ ಸಲುವಾಗಿ ಕತ್ರಿನಾರನ್ನು ಕಳಿಸಿಕೊಡಲು ಕೇಳಿಕೊಂಡಿದ್ದಾರೆ. ಶಾರುಖ್ ಮನವಿಯನ್ನು ಪುರಸ್ಕರಿಸಿರುವ ಯಶ್ ರಾಜ್, ಅಮೀರ್ ಜೊತೆ ಕತ್ರಿನಾ ಮಾಡಬೇಕಿದ್ದ ಪ್ರಾಕ್ಟಿಸ್ ಮುಂದೂಡಿದ್ದಾರೆ. ಹೀಗಾಗಿ ಕತ್ರಿನಾ ಅಮೀರ್ ಬಿಟ್ಟು ಶಾರುಖ್ ಜೊತೆ ರೊಮಾನ್ಸ್ ದೃಶ್ಯಕ್ಕೆ ಜೊತೆಯಾಗಲು ತೆರಳಿದ್ದಾರೆ.

  ಇಂದು ಲಡಕ್ ಗೆ ಹೊರಟಿರುವ ಕತ್ರಿನಾ, ಶಾರುಖ್ ಜೊತೆ ಎರಡು ವಾರಗಳಷ್ಟು ಕಾಲ ಚಿತ್ರೀಕರಣ ನಡೆಸಿ ಶಿಕಾಗೋಗೆ ಇಂದು ತೆರಳಬೇಕಿತ್ತು. ಆದರೆ ಈಗ ಶಾರುಖ್ ಮನವಿ ಮೇರೆಗೆ ಸೆಪ್ಟೆಂಬರ್ ಮೊದಲ ವಾರದವರೆಗೂ ಇಲ್ಲೇ ಶಾರುಖ್ ಜೊತೆ ಇರಬೇಕಾಗಿದೆ. ನಂತರವಷ್ಟೇ ಶಿಕಾಗೋ ಪ್ರಯಾಣ. ಆಶ್ಚರ್ಯವೆಂದರೆ, ಶಾರುಖ್ ಒಬ್ಬರೇ ಮಾಡಬೇಕಿರುವ ಶೂಟ್ ಗೆ ಕತ್ರಿನಾ ಬೇಕೆಂದು ಶಾರುಖ್ ಹಟ ಹಿಡಿದಿದ್ದಾರೆ.

  ಶಾರುಖ್ ಪ್ರಕಾರ, ಒಬ್ಬರೇ ಮಾಡುವುದಕ್ಕಿಂತ ಕತ್ರಿನಾ ಜೊತೆಗಿದ್ದರೆ ಆ ಪಾತ್ರದ ದೃಶ್ಯಗಳಲ್ಲಿ ಹೆಚ್ಚು ಇನ್ವಾಲ್ವ್ ಆಗುವುದು ಸಾಧ್ಯ. ಹೀಗಾಗಿ ಸೋಲೋ ದೃಶ್ಯಗಳ ಶೂಟಿಂಗ್ ಇದ್ದರೂ ಕತ್ರಿನಾರನ್ನು ಕರೆಸಿಕೊಂಡಿದ್ದಾರಂತೆ ಶಾರುಖ್. ಒಂದು ನೊಣವನ್ನು ಕಲ್ಪಸಿಕೊಂಡು 'ಈಗ' ತೆಲುಗು ಚಿತ್ರದಲ್ಲಿ ಸುದೀಪ್ ಮಾಡಿರುವ 'ಸೂಪರ್ ನಟನೆ' ನೋಡಿದ್ದರೆ ಬಹುಶಃ ಶಾರುಖ್ ಹೀಗೆ ಮಾಡುತ್ತಿರಲಿಲ್ಲವೇನೋ ಎನ್ನುತ್ತಿದೆ ಈಗ ಇಡೀ ದಕ್ಷಿಣ ಭಾರತ.

  ಯಶ್ ರಾಜ್ ನಿರ್ಮಾಣದ 'ಧೂಮ್- 3' ಚಿತ್ರದಲ್ಲಿ ಅಮೀರ್ ಖಾನ್, ಅಭಿಷೇಕ್ ಬಚ್ಚನ್ ಹಾಗು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಶಿಕಾಗೋದಲ್ಲಿ ನಡೆಯುತ್ತಿದೆ. ಆದರೀಗ ಕತ್ರಿನಾ ಬರುವುದು ಸೆಪ್ಟೆಂಬರ್ ತಿಂಗಳ ಮೊದಲ ವಾರದ ನಂತರವೇ ಆದ್ದರಿಂದ 'ಧೂಮ್- 3' ಚಿತ್ರತಂಡ ಅಲ್ಲಿದ್ದು ಅದೇನು ಮಾಡಲಿದೆಯೋ ತಿಳಿದವರಿಲ್ಲ!. ಒಟ್ಟಿನಲ್ಲಿ ಕತ್ರಿನಾಗೆ ಅಮೀರ್ ಬದಲು ಶಾರುಖ್ ಜೊತೆ ಸಿಕ್ಕಿದೆ. (ಏಜೆನ್ಸೀಸ್)

  English summary
  Shahrukh Khan kept Katrina Kaif away from Aamir Khan because he wanted an uninterrupted shoot for his movie. Kat was supposed to leave today for Dhoom 3.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X