Don't Miss!
- News
ಪಂಜಾಬ್ನಲ್ಲಿ 400 ಮೊಹಲ್ಲಾ ಕ್ಲಿನಿಕ್ಗಳ ಲೋಕಾರ್ಪಣೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Finance
LIC plan: ದಿನಕ್ಕೆ 83 ರೂ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 10 ಲಕ್ಷ ರೂ ಪಡೆಯಿರಿ!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸನ್ನಿ ಲಿಯೋನ್ ಅಳುವಂತೆ ಮಾಡಿದ ಅಮೀರ್ ಖಾನ್
ಮಾದಕ ತಾರೆ ಸನ್ನಿ ಲಿಯೋನ್ ಹೊಸ ಗುಟ್ಟೊಂದು ರಟ್ಟಾಗಿದೆ. ಅವರ ಫೇವರೆಟ್ ಸ್ಟಾರ್ ಅಮೀರ್ ಖಾನೆ ಅಂತೆ. ಇತ್ತೀಚಿಗಷ್ಟೇ ತಾವು ನಟಿಸಲು ಇಷ್ಟಪಡುವ ನಟರಲ್ಲಿ ಮೊದಲ ಸ್ಥಾನದಲ್ಲಿ ಇರುವವರು ಸಲ್ಮಾನ್ ಖಾನ್ ಎಂದಿದ್ದರು. ಆದರೆ ಅವರು ಫೇವರೆಟ್ ಸ್ಟಾರ್ ಅಮೀರ್ ಎಂಬುದೀಗ ಜಗಜ್ಜಾಹೀರಾಗಿದೆ. ಸಲ್ಮಾನ್ ಜೊತೆ ಡೇಟಿಂಗ್ ಇಷ್ಟವೇನೋ!
ಸನ್ನಿ ಲಿಯೋನ್ ಅಭಿನಯದ ಬಾಲಿವುಡ್ ಚಿತ್ರ ಜಿಸ್ಮ್ 2', ಬಾಕ್ಸ್ಆಫೀಸ್ ನಲ್ಲಿ ಯಶಸ್ಸಿನ ಹಾದಿಯಲ್ಲಿದೆ. ಈಗ ಸನ್ನಿ ಲಿಯೋನ್ ಬಾಲಿವುಡ್ ನಟಿಯರ ಲಿಸ್ಟ್ ಸೇರಿದ್ದಾರೆ. ಹೀಗಿರುವಾಗ ಸನ್ನಿ ಬಾಲಿವುಡ್ ಮೇರು ನಟರತ್ತ ತಮ್ಮ ಕಣ್ಣು ನೆಟ್ಟಿದ್ದಾರೆ. ಸಲ್ಮಾನ್ ಖಾನ್, ಅಮೀರ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಸದ್ಯದಲ್ಲೇ ಶಾರುಖ್ ಬಗ್ಗೆ ಸನ್ನಿ ಮಾತನಾಡಿದರೆ ಆಶ್ಚರ್ಯವೇನೂ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ.
ಅದಿರಲಿ, ಅಮೀರ್ ಬಗ್ಗೆ ಮಾತನಾಡುತ್ತಾ ಸನ್ನಿ ಲಿಯೋನ್, "ಅಮೀರ್ ಖಾನ್ ನಾನು ಅಳುವಂತೆ ಮಾಡಿದ್ದಾರೆ. ಅವರು ತೆರೆಯ ಮೇಲೆ ಅಳುತ್ತಿರುವ ದೃಶ್ಯ ಬಂದರೆ ಸಾಕು ನನಗೆ ಬೇಡವೆಂದರೂ ಅಳು ಬಂದು ಬಿಡುತ್ತೆ. ಅವರು ಅಷ್ಟು ಚೆನ್ನಾಗಿ ಅಳುವನ್ನು ನಟಿಸುತ್ತಾರೆ. ಅಮೀರ್ ಸೂಪರ್ಬ್..! ಅವರ ನಟನೆ ನನಗೆ ಮಾದರಿಯಿದ್ದಂತೆ. ಯಾವುದೇ ಪಾತ್ರವಿರಲಿ, ಅದಕ್ಕೆ ಜೀವ ತುಂಬಿ ನಟಿಸುವುದು ಅಮೀರ್ ಖಾನ್ ಅವರಿಗೆ ಲೀಲಾಜಾಲ. ನನಗೆ ಅವರೊಂದಿಗೆ ನಟಿಸಲು ಇಷ್ಟ. ಆ ಅವಕಾಶ ನನಗೆ ಬಂದರೆ ನಾನು ತಕ್ಷಣ ಒಪ್ಪಿಕೊಂಡು ಬಿಡುವೆ" ಎಂದಿದ್ದಾರೆ.
ಕೇವಲ ಒಂದೇ ಒಂದು ಬಾಲಿವುಡ್ ಚಿತ್ರದಲ್ಲಿ ನಟಿಸಿ, ಅದು ಪ್ರದರ್ಶನ ಕಾಣುತ್ತಿರುವ ಈ ವೇಳೆಯಲ್ಲೇ ಇಷ್ಟೊಂದು ಮಾತನಾಡುವ ಸನ್ನಿ ಜಾಣ್ಮೆಯನ್ನು ಮೆಚ್ಚಲೇಬೇಕು. ಅತ್ತ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಇಷ್ಟ, ನನ್ನ ಫೇವರೆಟ್ ಸ್ಟಾರ್ ಅನ್ನುತ್ತಾ ಇತ್ತ ಅಮೀರ್ ಖಾನ್ ನಟನೆ ಸೂಪರ್, ಅವರೊಂದಿಗೆ ನಟಿಸಲು ಇಷ್ಟ ಎನ್ನುತ್ತಿರುವ ಸನ್ನಿ ಬಾಲಿವುಡ್ ನಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಯೋಚಿಸಿರುವುದಂತೂ ಸ್ಪಷ್ಟ. (ಏಜೆನ್ಸೀಸ್)