For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸಲ್ಲಿ ಕೋಟಿ ಕೋಟಿ ಬಾಚಿದ 'ಧೂಮ್ 3'

  By Rajendra
  |

  ಅಮೀರ್ ಖಾನ್ ಅಭಿನಯದ ಭಾರಿ ಬಜೆಟ್ 'ಧೂಮ್ 3' ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಪ್ರವಾಹ ಹರಿದುಬರುತ್ತಿದೆ. ಬಾಕ್ಸ್ ಆಫೀಸಲ್ಲೂ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗಿದೆ. ಚಿತ್ರ ತೆರೆಕಂಡ ಎರಡೇ ದಿನಕ್ಕೆ ರು.69.58 ಕೋಟಿ ಬಾಚಿದೆ.

  ವಿಜಯ್ ಕೃಷ್ಣ ಆಚಾರ್ಯ ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ಯಶ್ ರಾಜ್ ಫಿಲಂಸ್ ನಿರ್ಮಿಸಿದ್ದು 'ಧೂಮ್' ಸರಣಿಯಲ್ಲಿ ಬಂದಂತಹ ಮೂರನೇ ಚಿತ್ರವಿದು. ವಾರಾಂತ್ಯವಾದ ಕಾರಣ ಬಾಕ್ಸ್ ಆಫೀಸಲ್ಲಿ ಒಳ್ಳೆಯ ಕಲೆಕ್ಷನ್ ಆಗಿದೆ. ಶೀಘ್ರದಲ್ಲೇ ಈ ಚಿತ್ರ ನೂರು ಕೋಟಿ ಕಲೆಕ್ಷನ್ ಮೀರಿ ಸದ್ದು ಮಾಡುವ ಎಲ್ಲಾ ಸೂಚನೆಗಳನ್ನೂ ಕೊಟ್ಟಿದೆ. [ಧೂಮ್ 3 ಚಿತ್ರವಿಮರ್ಶೆ]

  ತೆರೆಕಂಡ ಮೊದಲ ದಿನವೇ ರು.36.22 ಕೋಟಿ ಕಲೆಕ್ಷನ್ ಮಾಡಿದ್ದು, ಮಾರನೇ ದಿನ ರು.33.36 ಕೋಟಿ ಎಣಿಸಿದೆ. ಚಿತ್ರದಲ್ಲಿನ ಅಭಿಷೇಕ್ ಬಚ್ಚನ್ ಹಾಗೂ ಉದಯ್ ಛೋಪ್ರಾ ಅವರ ಪಾತ್ರಗಳಿಗೂ ಮೆಚ್ಚುಗೆ ವ್ಯಕ್ತವಾಗಿದೆ.

  ಇನ್ನು ಕತ್ರಿನಾ ಕೈಫ್ ಅವರ ಮೈಮಾಟ ಚಿತ್ರದಲ್ಲಿ ಮತ್ತೊಂದು ಆಕರ್ಷಣೆ. ಚಿತ್ರದಲ್ಲಿನ ಆಕ್ಷನ್ ಸನ್ನಿವೇಶಗಳು, ಬೈಕ್ ಸ್ಟಂಟ್ಸ್ ಮೈನವಿರೇಳಿಸುವಂತಿವೆ. ಈ ಹಿಂದಿನ 'ಧೂಮ್' ಸರಣಿಗೆ ಹೋಲಿಸಿದರೆ ಈ ಬಾರಿ ಚಿತ್ರಕಥೆ ಆಸಕ್ತಿಕರವಾಗಿ ಹೆಣೆದಿರುವುದು ವಿಶೇಷ. (ಐಎಎನ್ಎಸ್)

  English summary
  Aamir Khan, Katrina Kaif starrer action thriller movie 'Dhoom 3' has collected Rs 69.58 crore which includes earnings from Tamil and Telugu versions -- in two days of its release, an official statement here said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X