»   » 'ಸತ್ಯ ಮೇವ ಜಯತೆ' ಖಾನ್ ಬಳಿ ಕೋಟಿ ಬೆಲೆ ಕಾರು

'ಸತ್ಯ ಮೇವ ಜಯತೆ' ಖಾನ್ ಬಳಿ ಕೋಟಿ ಬೆಲೆ ಕಾರು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸತ್ಯ ಮೇವ ಜಯತೆ ಎಂಬ ಕಾರ್ಯಕ್ರಮದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿರುವ ಬಾಲಿವುಡ್ ನ 'ಮಿ.ಫರ್ಫೆಕ್ಟ್' ಅಮೀರ್ ಈಗ ಕೇವಲ ನಟನಾಗಿ ಮಾತ್ರ ಉಳಿದಿಲ್ಲ. ಅನೇಕ ಸಾಮಾಜಿಕ ಕಳಕಳಿ ಹೋರಾಟಕ್ಕೂ ಕೈಜೋಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಜತೆಗೆ ಅಮೀರ್ ಗೆ ಭದ್ರತೆಯ ಅವಶ್ಯಕತೆಯೂ ಹೆಚ್ಚಾಗಿದೆ. ಹೀಗಾಗಿ ಜನ ಸಾಮಾನ್ಯರ ಕಣ್ಮಣಿ ಅಮೀರ್ ಅವರು 'ಅಮೀರ'ರ ಕಾರೊಂದನ್ನು ಪಡೆದುಕೊಂಡು ವಿಶಿಷ್ಟವಾಗಿ ಮಾರ್ಪಾಟು ಮಾಡಿಕೊಂಡಿದ್ದಾರಂತೆ.

ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರೆನಿಸಿರುವ ಮುಖೇಶ್ ಅಂಬಾನಿ, ಪ್ರಧಾನಿ ಮನಮೋಹನ್ ಸಿಂಗ್ ಅವರ ಸಾಲಿಗೆ ಅಮೀರ್ ಖಾನ್ ಕೂಡಾ ಸೇರಿದ್ದಾರೆ. ಬಾಲಿವುಡ್ ನಲ್ಲಿ ಯಾರೂ ಹೊಂದಿರದಂಥ ಕಾರೊಂದನ್ನು ಅಮೀರ್ ಬಳಸುತ್ತಿದ್ದಾರೆ. ಧೂಮ್ 3 ಯಶಸ್ಸಿನ ನಂತರ ಮತ್ತೊಮ್ಮೆ ಕಿರುತೆರೆಯತ್ತ ಮುಖ ಮಾಡಿರುವ ಅಮೀರ್ ಅವರು ಭಾನುವಾರ(ಮಾ.2) ದಿಂದ ಮತ್ತೊಮ್ಮೆ 'ಸತ್ಯ ಮೇವ ಜಯತೆ' ಕಾರ್ಯಕ್ರಮ ಆರಂಭಿಸಿದ್ದಾರೆ.

ಈಗಾಗಲೆ ಅವರು 'ಸತ್ಯಮೇವ ಜಯತೆ' ರಿಯಾಲಿಟಿ ಶೋ ಮಾಡಿ ಅಮೀರ್ ಅವರು ಯಶಸ್ಸು ಕಂಡಿದ್ದರು. ವರದಕ್ಷಿಣೆ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಭ್ರಷ್ಟಾಚಾರ, ಅನೈತಿಕತೆ, ದೌರ್ಜನ್ಯ, ಮರ್ಯಾದಾ ಹತ್ಯೆ, ಮದ್ಯಪಾನ, ಅಸ್ಪೃಶ್ಯತೆ... ಪ್ರಚಲಿತ ಸಮಸ್ಯೆಗಳ ಮೇಲೆ ಈ ಟಾಕ್ ಶೋ ಅಟ್ಯಾಕ್ ಮಾಡಿತ್ತು. ಸಾಕಷ್ಟು ಚರ್ಚೆ, ವಾದ ವಿವಾದಕ್ಕೆ ವೇದಿಕೆ ಒದಗಿಸಿತ್ತು.'ಸತ್ಯಮೇವ ಜಯತೆ' ಎರಡನೇ ಕಂತನ್ನು ಆರಂಭಿಸಿದ ಅಮೀರ್ ಅವರು ಬಂದಿದ್ದು ಮರ್ಸೀಡೀಸ್ ಬೆಂಜ್ ಎಸ್ 600 ಕಾರಿನ ಮೂಲಕ ಶೋ ನಡೆಸಿಕೊಡಲು ಬಂದರು.

Aamir Khan Now Owns The Most Expensive Bomb Proof Car

ಬೆಂಜ್ ಕಾರು ಹೊಂದುವುದು ಏನು ವಿಶೇಷವೇನಲ್ಲ. ಆದರೆ, ಈ ಕಾರನ್ನು ಅಮೀರ್ ವಿಶಿಷ್ಟವಾಗಿ ವಿನ್ಯಾಸಗೊಳಿಸಿದ್ದಾರಂತೆ. ಈ ಕಾರು 'ಬಾಂಬ್ ಪ್ರೂಫ್' ಕಾರು. ಮುಖೇಶ್ ಅಂಬಾನಿ, ಮನಮೋಹನ್ ಸಿಂಗ್ ಮುಂತಾದ ವಿವಿಐಪಿಗಳು ಮಾತ್ರ ಇಂಥ ಕಾರನ್ನು ಬಳಸುತ್ತಿದ್ದಾರೆ. ಈ ಸುಧಾರಿತ ಕಾರಿನ ಬೆಲೆ ಬರೋಬ್ಬರಿ 10 ಕೋಟಿ ರು ಎಂದು ತಿಳಿದು ಬಂದಿದೆ.

ಅಮೀರ್ ಗೆ ಬೆದರಿಕೆ: ಅಮೀರ್ ಖಾನ್ ಅವರ ಸಾಮಾಜಿಕ ಕಳಕಳಿಗೆ ಅನೇಕ ಸರ್ಕಾರೇತರ ಸಂಸ್ಥೆಗಳು ಅವರೊಂದಿಗೆ ಕೈಜೋಡಿಸಲು ಮುಂದಾಗಿದ್ದರು. ಸತ್ಯಮೇವ ಜಯತೆ ಕಾರ್ಯಕ್ರಮದಿಂದ ರು.8 ಕೋಟಿ ನಿಧಿ ಸಂಗ್ರಹವಾಗಿತ್ತು. ಈ ಮೂಲಕ ಸಾಮಾಜಿಕ ಕಾಳಜಿ ಮೆರೆದ ಅಮೀರ್ ಗೆ ಸಂಕಷ್ಟಗಳು ಎದುರಾಯಿತು. ವಿವಿಧ ಮೂಲಗಳಿಂದ ಬೆದರಿಕೆ ಕರೆಗಳು ಬರತೊಡಗಿದವು. ಜತೆಗೆ ಅಮೀರ್ ಅವರು ತಮಗೆ ಬಂದಿದ್ದ ರು. 150 ಕೋಟಿ ಜಾಹೀರಾತು ಒಪ್ಪಂದವನ್ನು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ 'ಸತ್ಯಮೇವ ಜಯತೆ' ಎರಡನೇ ಕಂತನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.

ಸಮಾಜದಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸುವ ಅಮೀರ್ ವಿರುದ್ಧ ವ್ಯವಸ್ಥಿತವಾದ ಸಂಚು ರೂಪಿಸಿ ಬಾಂಬ್ ಹಾಕಿ ಉಡಾಯಿಸುವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಂಬ್ ನಿರೋಧಕ ಕಾರನ್ನು ಅಮೀರ್ ಬಳಸಬೇಕಾಗಿದೆಯಂತೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಅಮೀರ್ ಅವರು ಪೊಲೀಸ್ ನಿರ್ದೇಶನದಂತೆ ಕಾಲಕಾಲಕ್ಕೆ ಅಪ್ಡೇಟ್ ನೀಡುತ್ತಿದ್ದಾರೆ. ಸತ್ಯಮೇವ ಜಯತೆ ಎನ್ನುತ್ತಾ ಮತ್ತೊಮ್ಮೆ ಕಿರುತೆರೆ ಅಂಗಳಕ್ಕೆ ಜಿಗಿದಿದ್ದಾರೆ.

English summary
Aamir Khan, who claims to touch the lives of the common people through his hugely popular TV show Satyameva Jayate, is not a common man anymore. He enjoys being the proud owner of the most expensive car a Bollywood star ever had. The Dhoom Khan recently purchased a brand new Mercedes Benz S600 but that is not the news.
Please Wait while comments are loading...