For Quick Alerts
  ALLOW NOTIFICATIONS  
  For Daily Alerts

  ಮಾಜಿ ಪತ್ನಿ ಜೊತೆ ಟೇಬಲ್ ಟೆನ್ನಿಸ್ ಆಡಿ ಸಂಭ್ರಮಿಸಿದ ಆಮೀರ್ ಖಾನ್

  |

  ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ 2ನೇ ಪತ್ನಿ ಕಿರಣ್ ರಾವ್‌ಗೆ ವಿಚ್ಛೇದನ ನೀಡಿದ ಬಳಿಕ ಹೆಚ್ಚಾಗಿ ಪತ್ನಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಆಮೀರ್ ಖಾನ್ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಅನ್ಯೋನ್ಯವಾಗಿದ್ದ ದಂಪತಿ ಬಾಳಲ್ಲಿ ಎದ್ದ ಬಿರುಗಾಳಿ ಸುದ್ದಿ ನಂಬಲು ಸಾಧ್ಯವಾಗಿರಲಿಲ್ಲ.

  ವಿಚ್ಛೇದನ ನೀಡುತ್ತಿದ್ದೇವೆ ಆದರೆ ಪುತ್ರ ಅಜಾದ್‌ಗೆ ಪೋಷಕರಾಗಿ ಮುಂದುವರೆಯುತ್ತೇವೆ ಎಂದು ಆಮೀರ್ ಖಾನ್ ಮತ್ತು ಕಿರಣ್ ರಾವ್ ಘೋಷಣೆ ಮಾಡಿದ್ದರು. ಶಾಕಿಂಗ್ ಸುದ್ದಿ ಬಳಿಕ ಇಬ್ಬರು ಲಾಲ್ ಸಿಂಗ್ ಚಡ್ಡ ಸಿನಿಮಾ ಚಿತ್ರೀಕರಣದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಅಚ್ಚರಿ ಮೂಡಿಸಿದ್ದರು.

  ಅಂದಹಾಗೆ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣಮುಗಿಸಿರುವ ಲಾಲ್ ಸಿಂಗ್ ಚಡ್ಡ ಸದ್ಯ ಲಡಾಖ್ ನಲ್ಲಿ ಚಿತ್ರೀಕರಣ ಮಾಡುತ್ತಿದೆ. ಚಿತ್ರೀಕರಣ ಸೆಟ್ ನಲ್ಲಿ ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಪುತ್ರ ಅಜಾದ್ ಕೂಡ ಜೊತೆಯಲ್ಲಿದ್ದಾರೆ.

  ಇದೀಗ ಮಾಜಿ ಪತ್ನಿ ಮತ್ತು ಪುತ್ರನ ಜೊತೆ ಆಮೀರ್ ಖಾನ್ ಟೇಬಲ್ ಟೆನ್ನಿಸ್ ಆಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರೀಕರಣ ಬಿಡುವಿನ ವೇಳೆಯಲ್ಲಿ ಎಲ್ಲರೂ ಟೇಬಲ್ ಟೆನ್ನಿಸ್ ಆಗಿ ಸಂಭ್ರಮಿಸಿದ್ದಾರೆ. ವಿಶೇಷ ಅಂದರೆ ತೆಲುಗು ಸ್ಟಾರ್ ನಾಗಚೈತನ್ಯ ಕೂಡ ಟಆಟ ಆಡಿದ್ದಾರೆ.

  ಆಮೀರ್ ಖಾನ್ ತಂಡದವರಿಗಾಗಿ ಟೇಬಲ್ ಟೆನ್ನಿಸ್ ಪಂದ್ಯವನ್ನು ಏರ್ಪಡಿಸಿದ್ದರು. ಇದರಲ್ಲಿ ಎಲ್ಲರೂ ಆಟವಾಗಿ ಸಂತಸ ಪಟ್ಟಿದ್ದಾರೆ. ಆಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ಬಳಿಕ ಮತ್ತೊಮ್ಮೆ ಒಟ್ಟಿಗೆ ಸಂಭ್ರಮದಲ್ಲಿರುವ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆಮೀರ್ ಖಾನ್ ಮತ್ತು ಕಿರಣ್ ರಾವ್ ಅವರಿಗೆ ಆಟಗಳೆಂದರೆ ತುಂಬಾ ಇಷ್ಟ. ಹಾಗಾಗಿ ಚಿತ್ರೀಕರಣ ಬಿಡುವಿನ ವೇಳೆಯಲ್ಲೂ ಟೇಬಲ್ ಟೆನ್ನಿಸ್ ಆಡಿದ್ದಾರೆ.

  Aamir Khan plays table tennis match with his ex-wife Kiran Rao in Laal Singh Chaddha
  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ

  ಲಾಲ್ ಸಿಂಗ್ ಚಡ್ಡಾ ಇಂಗ್ಲಿಷ್‌ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಕಳೆದ ಎರಡು ವರ್ಷದಿಂದ ಚಿತ್ರೀಕರಣ ನಡೆಯುತ್ತಿದೆ. ಕೊರೊನಾ ಕಾರಣದಿಂದ ತಡವಾಗುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕರೀನಾ ತನ್ನ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಚಿತ್ರದ ಮತ್ತೊಂದು ವಿಶೇಷ ಎಂದರೆ ತೆಲುಗು ಸ್ಟಾರ್ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಟ್ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಲಾಲ್ ಸಿಂಗ್ ಚಡ್ಡ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

  English summary
  Aamir Khan plays table tennis match with his ex-wife Kiran Rao in Laal Singh Chaddha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X