Don't Miss!
- Sports
ಗ್ಲೆನ್ ಮ್ಯಾಕ್ಸ್ವೆಲ್ ಕೈಯಿಂದ ಆರೆಂಜ್ ಕ್ಯಾಪ್ ಕಸಿದುಕೊಂಡ ಧವನ್
- News
ಉತ್ತರ ಪ್ರದೇಶ ಕೊರೊನಾ ದಾಖಲೆ; ಭಾನುವಾರ ಲಾಕ್ಡೌನ್!
- Finance
ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!
- Automobiles
ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹುಟ್ಟುಹಬ್ಬದಂದೇ ಸಾಮಾಜಿಕ ಜಾಲತಾಣದಿಂದ ಶಾಶ್ವತವಾಗಿ ಹಿಂದೆ ಸರಿದ ಅಮೀರ್ ಖಾನ್
ಇಂದು (ಮಾರ್ಚ್ 15) ಬಾಲಿವುಡ್ ಸೂಪರ್ ಸ್ಟಾರ್ ನಟ ಅಮೀರ್ ಖಾನ್ ಹುಟ್ಟುಹಬ್ಬ. ಇಂದಿಗೆ ಅಮೀರ್ ಖಾನ್‌ಗೆ 56 ವರ್ಷ ವಯಸ್ಸಾಯಿತು.
ಹುಟ್ಟುಹಬ್ಬದ ದಿನವೇ ತಮ್ಮ ಅಭಿಮಾನಿಗಳಿಗೆ ಸಖತ್ ಶಾಕ್ ಕೊಟ್ಟಿದ್ದಾರೆ ಅಮೀರ್. 'ನಾನು ಸಾಮಾಜಿಕ ಜಾಲತಾಣ ಬಳಕೆಯಿಂದ ಹಿಂದೆ ಸರಿಯುತ್ತಿದ್ದೇನೆ' ಎಂದು ಅಮೀರ್ ಖಾನ್ ಪ್ರಕಟಿಸಿದ್ದಾರೆ.
'ಶಾರುಖ್ ಖಾನ್ ನನ್ನ ಕಾಲು ನೆಕ್ಕುತ್ತಿದ್ದಾನೆ' ಎಂದು ಹೇಳಿ ಬೇಷರತ್ ಕ್ಷಮೆ ಕೇಳಿದ್ದ ಆಮೀರ್ ಖಾನ್
ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಅಮೀರ್ ಖಾನ್, 'ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ನಿಮಗೆಲ್ಲರಿಗೂ ಬಹಳ ಧನ್ಯವಾದಗಳು. ನಿಮ್ಮ ಶುಭ ಹಾರೈಕೆಯಿಂದ ನನ್ನ ಹೃದಯ ತುಂಬಿದೆ' ಎಂದಿದ್ದಾರೆ.
ಮುಂದುವರೆದು, 'ಇನ್ನೊಂದು ಮುಖ್ಯ ಸುದ್ದಿಯೆಂದರೆ, ನಾನು ಸಾಮಾಜಿಕ ಜಾಲತಾಣ ಬಳಕೆಯನ್ನು ನಿಲ್ಲಿಸುತ್ತಿದ್ದೇನೆ. ಇದೇ ನನ್ನ ಕೊನೆಯ ಪೋಸ್ಟ್ ಆಗಿರಲಿದೆ. ನಾನು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯನಾಗಿದ್ದೆ (ವ್ಯಂಗ್ಯಾರ್ಥದಲ್ಲಿ) ಆದರೆ ಇನ್ನು ಮುಂದೆ ಈ ತೋರಿಕೆಯನ್ನು ನಾನು ನಿಲ್ಲಿಸಲಿದ್ದೇನೆ' ಎಂದಿದ್ದಾರೆ ಅಮೀರ್.
'ಮೊದಲಿನಂತೆ ನಾವುಗಳು ಪರಸ್ಪರ ಸಂವಹನ ನಡೆಸಲಿದ್ದೇವೆ. 'ಅಮೀರ್ ಖಾನ್ ಪ್ರೊಡಕ್ಷನ್' ಸಂಸ್ಥೆಯು ಹೊಸ ಯೂಟ್ಯೂಬ್ ಚಾನೆಲ್ ತೆರೆದಿದ್ದು. ನನ್ನ ಹೊಸ ಸಿನಿಮಾದ ಎಲ್ಲ ಮಾಹಿತಿಗಳು ಆ ಚಾನೆಲ್‌ನಲ್ಲಿ ದೊರಕಲಿದೆ' ಎಂದಿದ್ದಾರೆ ಅಮೀರ್.
ಆಮೀರ್ ಖಾನ್ ಹುಟ್ಟುಹಬ್ಬ: 'ಮಿಸ್ಟರ್ ಪರ್ಫೆಕ್ಷನಿಸ್ಟ್' ನಟನೆಯ 7 ಗಮನಾರ್ಹ ಪಾತ್ರಗಳಿವು
ನಟ ಅಮೀರ್ ಖಾನ್ ಅವರು ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿದ್ದರು. ಆದರೆ ಅವರು ಹೆಚ್ಚು ಸಕ್ರಿಯರಾಗಿರಲಿಲ್ಲ. ಬಹಳ ವಿರಳವಾಗಿ ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದರು ಅಮೀರ್.
ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು 'ಫಾರೆಸ್ಟ್ ಗಂಪ್' ಪುಸ್ತಕದಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿದೆ. ಇದೇ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಆ ಸಿನಿಮಾ ಭಾರಿ ಹಿಟ್ ಆಗಿತ್ತು.