For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶರ್ಮಾ ಜೊತೆ ಅಮೀರ್ ಖಾನ್ ರೊಮಾನ್ಸ್

  |

  ತ್ರೀ ಈಡಿಯಟ್ಸ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆಹೊಡೆದದ್ದು ಜಗಜ್ಜಾಹೀರು. ಅಮೀರ್ ಖಾನ್ ಹಾಗೂ ರಾಜ್ ಕುಮಾರ್ ಹಿರಾನಿ ಸಂಗಮದ ತ್ರೀ ಈಡಿಯಟ್ಸ್ ಚಿತ್ರ, ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದು ಬಹುಯಶಸ್ವಿ ಎನಿಸಿತ್ತು. ಇದೀಗ ಈ ಜೋಡಿ ಮತ್ತೆ ಒಂದಾಗಿ 'ಪೀಕೆ' ಚಿತ್ರದ ಮೂಲಕ ಬರಲಿದೆ.

  ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯಾಗಿ ನಟಿ ಅನುಷ್ಕಾ ಶರ್ಮ ಆಯ್ಕೆಯಾಗಿದ್ದಾರೆ. ಶಾರುಖ್ ಖಾನ್ ಚಿತ್ರ 'ರಬ್ ನೆ ಬನಾ ದಿ ಜೋಡಿ' ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಅನುಷ್ಕಾ ಶರ್ಮ, ಈಗ ಅಮೀರ್ ಖಾನ್ ಜೋಡಿಯಾಗಿ ನಟಿಸುವ ಅವಕಾಶ ಪಡೆದು ಎಲ್ಲರ ಹುಬ್ಬೇರಿಸಿದ್ದಾಳೆ.

  ಇಷ್ಟೇ ಅಲ್ಲ, ರಣಬೀರ್ ಕಪೂರ್ ನಟನೆ ಹಾಗೂ ಅನುರಾಗ್ ಕಶ್ಯಪ್ ನಿರ್ದೇಶನದ 'ಬಾಂಬೆ ವೆಲ್ವೆಟ್' ಚಿತ್ರದಲ್ಲೂ ಅನುಷ್ಕಾ ಶರ್ಮಾ ನಾಯಕಿ. ಅನುಷ್ಕಾ ಶರ್ಮಾ ನಟನೆ ಕುರಿತು ಬಾಲಿವುಡ್ ನಲ್ಲಿ ತೀರಾ ಒಳ್ಳೆಯ ಅಭಿಪ್ರಾಯವಿದೆ. ಅಮೀರ್ ಖಾನ್ ಹಾಗೂ ರಾಜ್ ಕುಮಾರ್ ಹೀರಾನಿ ಅನುಷ್ಕಾರನ್ನು ಆಯ್ಕೆ ಮಾಡಿದ್ದಕ್ಕೆ ಕಾರಣ ಅವರ ಅಮೋಘ ಪ್ರತಿಭೆ ಎನ್ನಲಾಗಿದೆ.

  ಈ ಕುರಿತು ಸುದ್ದಿಮೂಲವೊಂದರ ಪ್ರತಿಕ್ರಿಯೆ ಹೀಗಿದೆ..."ಇದರಲ್ಲಿ ಯೋಚಿಸುವಂತದ್ದು ಏನೂ ಇಲ್ಲ. ಈ ವಯೋಮಾನದ ಬಾಲಿವುಡ್ ನಟಿಯರೆಲ್ಲಾ ಅನುಷ್ಕಾ ಶರ್ಮಾ ಅತ್ಯಂತ ಪ್ರತಿಭಾವಂತೆ. ಆಕೆಗಿಂತ ಒಳ್ಳೆಯ ನಟಿ ಇನ್ಯಾರೂ ಸಿಗುವುದಿಲ್ಲ. ಹೀಗಾಗಿ ಅಮೀರ್ ಖಾನ್ ಹಾಗೂ ರಾಜ್ ಕುಮಾರ್ ಹಿರಾನಿ ತಮ್ಮ ಪೀಕೆ ಚಿತ್ರಕ್ಕೆ ಅನುಷ್ಕಾರನ್ನು ಆಯ್ಕೆ ಮಾಡಿದ್ದು ಸಹಜವಾಗಿದೆ."

  ಇನ್ನೇನಿದೆ ಹೇಳಿ? ಅಮೀರ್ ಖಾನ್ ಜೊತೆ ನಟಿಸುತ್ತಿರುವ ಅನಿಷ್ಕಾ ಅದೃಷ್ಟ ಖುಲಾಯಿಸಲಿರುವುದು ಖಂಡಿತ. ಅದರಲ್ಲೂ ರಾಜ್ ಕುಮಾರ್ ಹಿರಾನಿ ನಿರ್ದೇಶನ ಬೇರೆ. ಅನುಷ್ಕಾ ಪ್ರತಿಭೆಯ ಅನಾವರಣಕ್ಕೆ ತಕ್ಕ ವೇದಿಕೆ ಸಿಕ್ಕಿದೆ. ಈ ಮೂಲಕ ಅನುಷ್ಕಾ ಬಾಲಿವಡ್ಡಿನಲ್ಲಿ ಮಹಾನ್ ಸಾಧನೆ ಮಾಡಲಿದ್ದಾರೆ ಎಂಬುದು ಬಾಲಿವುಡ್ ಪಂಡಿತರ ಹೇಳಿಕೆ. (ಏಜೆನ್ಸೀಸ್)

  English summary
  According to recent reports Aamir Khan and Rajkumar Hirani have chosen Anushka Sharma to play the lead role in their upcoming movie Peekay.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X