25 ವರ್ಷಗಳಿಂದ ಜೊತೆಯಲ್ಲಿದ್ದ ಆಮೀರ್ ಖಾನ್ ಆಪ್ತ ಸಹಾಯಕ ನಿಧನ

ಬಾಲಿವುಡ್ ನಟ ಆಮೀರ್ ಖಾನ್ ಆಪ್ತ ಸಹಾಯಕ ಅಮೋಸ್ ಹೃದಯಘಾತದಿಂದ ಸಾವನಪ್ಪಿದ್ದಾರೆ. ನಿನ್ನೆ (ಮೇ 12) ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಅಮೋಸ್ ಕೊನೆಯುಸಿರೆಳೆದಿದ್ದಾರೆ.

ನಟ ಆಮೀರ್ ಖಾನ್ ಜೊತೆ ಸುಮಾರು 25 ವರ್ಷಗಳಿಂದ ಆಪ್ತ ಸಹಾಯಕರಾಗಿ ಅಮೋಸ್ ಕೆಲಸ ಮಾಡುತ್ತಿದ್ದರು. ಅಮೋಸ್ ನಿಧನದ ಸುದ್ದಿಯನ್ನು ಆಮೀರ್ ಖಾನ್ ಅಭಿನಯದ ಲಗಾನ್ ಸಿನಿಮಾದ ಸಹ ನಟ ಕರೀಮ್ ಹಾಜಿ ತಿಳಿಸಿದ್ದಾರೆ.

ಆಂಗ್ಲ ಪತ್ರಿಕೆ ಜೊತೆ ಮಾತನಾಡಿರುವ ಕರೀಮ್, ಆಪ್ತ ಸಹಾಯಕನ ನಿಧನದ ಸುದ್ದಿ ಕೇಳಿ ಆಮೀರ್ ಖಾನ್ ಆಘಾತಕ್ಕೊಳಗಾಗಿದ್ದಾರೆ ಎಂದು ನಟ ಕರೀಮ್ ಹಾಜಿ ಹೇಳಿದ್ದಾರೆ. ಆಪ್ತ ಸಹಾಯಕನಾಗಿ, ಆಮೀರ್ ಸ್ನೇಹಿತನಾಗಿ 25 ವರ್ಷಗಳಿಂದ ಜೊತೆಯಲ್ಲಿದ್ದ ಅಮೋಸ್ ನಿಧನ ಆಮೀರ್ ಖಾನ್ ಕುಟುಂಬಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದಿದ್ದಾರೆ.

Aamir Khans Assistant Amos Dies Of Heartattack

"ಆಮೋಸ್ ನನ್ನು ಕುಟುಂಬದಂತೆ ನೋಡಿಕೊಳ್ಳುತ್ತಿದ್ದರು, ಆಮೀರ್ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದರು. ಆಮೀರ್ ಖಾನ್ ಒಬ್ಬ ಪರ್ಫೆಕ್ಷನಿಸ್ಟ್ ಅಂತ ಕರೆಸಿಕೊಳ್ಳುತ್ತಾರೆ ಎಂದರೆ, ಅದರ ಹಿಂದೆ ಆಮೋಸ್ ಅವರ ಕಠಿಣ ಶ್ರಮ ಕೂಡ ಇದೆ" ಎಂದು ಕರೀಮ್ ಹೇಳಿದ್ದಾರೆ.

ಆಮೀರ್ ಖಾನ್ ಜೊತೆ ಕೆಲಸ ಮಾಡುವ ಮೊದಲು ಆಮೋಸ್ ನಟಿ ರಾಣಿ ಮುಖರ್ಜಿ ಜೊತೆ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆಮೀರ್ ಖಾನ್ ನೆರಳು ಎಂದೆ ಹೇಳಲಾಗುತ್ತಿದ್ದ ಆಮೋಸ್ ನಿಧನಕ್ಕೆ ಬಾಲಿವುಡ್ ನ ಅನೇಕರು ಸಂತಾಪ ಸೂಚಿಸಿದ್ದಾರೆ.

More from Filmibeat

English summary
Bollywood Actor Aamir Khan assistant Amos passes away due to heartattack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X