For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ ಮಗಳ ಮೇಲೆ ಎಳವೆಯಲ್ಲಿಯೇ ಲೈಂಗಿಕ ದೌರ್ಜನ್ಯ!

  |

  ಸ್ಟಾರ್ ನಟರ ಮಕ್ಕಳು ಬಹಳ ಸುರಕ್ಷಿತವಾಗಿರುತ್ತಾರೆ, ಎಲ್ಲಾ ರೀತಿಯಲ್ಲಿಯೂ ಸುರಕ್ಷಿತವಾಗಿರುತ್ತಾರೆ ಎಂಬುದು ಸಾಮಾನ್ಯ ಜನರ ನಂಬಿಕೆ. ಆದರೆ ಅವರೂ ಸಹ ದೌರ್ಜನ್ಯಗಳಿಂದ ಹೊರತಲ್ಲ.

  ಹೌದು, ಸ್ಟಾರ್ ನಟ ಅಮೀರ್ ಖಾನ್ ಮಗಳೂ ಸಹ ಎಳೆಯ ವಯಸ್ಸಿನಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅಮೀರ್ ಖಾನ್ ಪುತ್ರಿ ಇರಾ ಖಾನ್, ತಮ್ಮ ಮೇಲೆ ಎಳವೆಯಲ್ಲಿಯೇ ಲೈಂಗಿಕ ದೌರ್ಜನ್ಯವಾಗಿತ್ತು ಎಂದಿದ್ದಾರೆ. ಇದು ಮಾತ್ರವಲ್ಲದೆ, ಅಮೀರ್ ಖಾನ್ ಹಾಗೂ ತಾಯಿ ರೀನಾ ಖಾನ್ ನಡುವಿನ ವಿಚ್ಛೇಧನ ಹಾಗೂ ತಾವು ಅನುಭವಿಸಿದ ಖಿನ್ನತೆ ಬಗ್ಗೆಯೂ ಮಾತನಾಡಿದ್ದಾರೆ.

  14 ವರ್ಷದಲ್ಲಿಯೇ ಲೈಂಗಿಕ ದೌರ್ಜನ್ಯ

  14 ವರ್ಷದಲ್ಲಿಯೇ ಲೈಂಗಿಕ ದೌರ್ಜನ್ಯ

  ಇರಾ ಖಾನ್ 14 ವರ್ಷದವರಾಗಿದ್ದಾಗ ಅವರ ಮೇಲೆ ಲೈಂಗಿಕ ದೌರ್ಜನ್ಯವಾಗಿತ್ತಂತೆ. 'ಆ ಸಮಯದಲ್ಲಿ ಆ ವ್ಯಕ್ತಿ ನನ್ನೊಂದಿಗೆ ಏನು ಮಾಡುತ್ತಿದ್ದಾನೆ ಎಂಬುದು ಸಹ ನನಗೆ ಗೊತ್ತಿರಲಿಲ್ಲ' ಎಂದಿದ್ದಾರೆ ಇರಾ ಖಾನ್. ಆ ವ್ಯಕ್ತಿ ಯಾರು ಎಂಬುದನ್ನು ಇರಾ ಹೇಳಿಲ್ಲ.

  ಇಮೇಲ್ ಮೂಲಕ ತಿಳಿಸಿದ್ದರು ರೀನಾ ಖಾನ್

  ಇಮೇಲ್ ಮೂಲಕ ತಿಳಿಸಿದ್ದರು ರೀನಾ ಖಾನ್

  ಆ ಕೆಟ್ಟ ಸಂದರ್ಭದ ಬಗ್ಗೆ ಇರಾ ತಮ್ಮ ಪೋಷಕರಿಗೆ ಇಮೇಲ್ ಮೂಲಕ ತಿಳಿಸಿದರಂತೆ, ಅಮೀರ್ ಖಾನ್ ಹಾಗೂ ರೀನಾ ಖಾನ್ ಮಗಳಿಗೆ ಆ ಕೆಟ್ಟ ಘಟನೆ ಮಾಡಿದ್ದ ಆಘಾತದಿಂದ ಹೊರಗೆ ಬರಲು ಸಹಕರಿಸಿದರು ಎಂದು ಇರಾ ಖಾನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  ಪೋಷಕರ ವಿಚ್ಛೇಧನ ಪರಿಣಾಮ ಬೀರಲಿಲ್ಲ: ರಿನಾ

  ಪೋಷಕರ ವಿಚ್ಛೇಧನ ಪರಿಣಾಮ ಬೀರಲಿಲ್ಲ: ರಿನಾ

  ಅಮೀರ್ ಖಾನ್ ಹಾಗೂ ರೀನಾ ಖಾನ್ ಅವರ ವಿಚ್ಛೇಧನದ ಬಗ್ಗೆಯೂ ಮಾತನಾಡಿರುವ ರೀನಾ, ಅವರಿಬ್ಬರ ವಿಚ್ಚೇಧನ ನನಗೆ ದೊಡ್ಡ ಆಘಾತದಂತೆ ಎನಿಸಲಿಲ್ಲ, ಏಕೆಂದರೆ ಇಬ್ಬರೂ ನನ್ನ ಪೋಷಣೆಯನ್ನು ಚೆನ್ನಾಗಿಯೇ ಮಾಡಿದರು. ಈಗಲೂ ಇಬ್ಬರೂ ನನ್ನ ಅತ್ಯುತ್ತಮ ಗೆಳೆಯರು ಎಂದಿದ್ದಾರೆ ರೀನಾ.

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth
  ನಿರ್ದೇಶಕಿ ಆಗಲಿದ್ದಾರೆ ಇರಾ ಖಾನ್

  ನಿರ್ದೇಶಕಿ ಆಗಲಿದ್ದಾರೆ ಇರಾ ಖಾನ್

  ಹಲವು ಆಸಕ್ತಿಗಳನ್ನು ಹೊಂದಿರುವ ರೀನಾ ಖಾನ್, ನಿರ್ದೇಶಕಿ ಆಗಿದ್ದಾರೆ. ಯುರುಪಿಡೀಸ್‌ ನ ನಾಟಕವನ್ನು ಸಿನಿಮಾ ಮಾಡುತ್ತಿದ್ದಾರೆ ಇರಾ, ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ಸಿನಿಮಾದ ನಾಯಕಿ. ಇತ್ತೀಚೆಗೆ ಹಚ್ಚೆ (ಟ್ಯಾಟೂ) ಹಾಕುವುದನ್ನು ಹವ್ಯಾಸವಾಗಿ ಆರಿಸಿಕೊಂಡಿದ್ದಾರೆ ಇರಾ.

  English summary
  Aamir Khan's daughter Ira Khan opened up about sexual Harassment on her. She said she face sexual harassment in the age of 14.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X