For Quick Alerts
  ALLOW NOTIFICATIONS  
  For Daily Alerts

  'ಧೂಮ್ 3' ತೆರೆಗೆ; ಎಲ್ಲಾ ದಾಖಲೆ ಧೂಳಿಪಟ?

  By ಉದಯರವಿ
  |

  ಬಾಲಿವುಡ್ ನ ಬಹುನಿರೀಕ್ಷಿಸ ಭಾರಿ ಬಜೆಟ್ ಚಿತ್ರ ಧೂಮ್ 3 ಶುಕ್ರವಾರ (ಡಿ.20) ದೇಶದಾದ್ಯಂತ ತೆರೆಕಂಡಿದೆ. ವಿಜಯ್ ಕೃಷ್ಣ ಆಚಾರ್ಯ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ನಿರೀಕ್ಷೆಯಲ್ಲಿ ಚಿತ್ರಪ್ರೇಮಿಗಳಿದ್ದಾರೆ.

  ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹಾಗೂ ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವನ್ನು ಸರಿಸುಮಾರು ರು.150 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಅಮೀರ್ ಖಾನ್ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿದ್ದು ಕತ್ರಿನಾ ತಮ್ಮ ಮೈಮಾಟದ ಮೂಲಕ ಪ್ರೇಕ್ಷಕರ ಹೃದಯವನ್ನು ತಣಿಸಿದ್ದಾರೆ.

  ಈಗಾಗಲೆ ಚಿತ್ರ ಟ್ರೇಲರ್ ಭಾರಿ ಸದ್ದು ಮಾಡಿರುವುದು ಗೊತ್ತೇ ಇದೆ. ಅಮೀರ್ ಖಾನ್ ಮಾಡಿರುವ ರೋಮಾಂಚಕ ಸ್ಟಂಟ್ ಗಳು ಚಿತ್ರದ ಪ್ರಮುಖ ಆಕರ್ಷಣೆ. ಸಹಿರ್ ಪಾತ್ರದಲ್ಲಿ ನಕಲಿ ಕಳ್ಳ ಪಾತ್ರವನ್ನು ಅಮೀರ್ ಚಿತ್ರದಲ್ಲಿ ಪೋಷಿಸಿದ್ದಾರೆ. ಈ ಚಿತ್ರದಲ್ಲಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕತ್ರಿನಾ ಮೈಮಾಟ ಇನ್ನೊಂದು ಆಕರ್ಷಣೆ. [ಧೂಮ್ 3 ವಿಮರ್ಶೆ: ನೋಡಲೇಬೇಕಾದ ಚಿತ್ರ]

  ಶಾರುಖ್ ಖಾನ್ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಹಾಗೂ ಹೃತಿಕ್ ರೋಷನ್ ಅವರ ಕ್ರಿಷ್ 3 ಚಿತ್ರಗಳ ದಾಖಲೆಯನ್ನು ಧೂಮ್ 3 ಚಿತ್ರ ಅಳಿಸಿಹಾಕಲಿದೆ ಎಂಬ ಲೆಕ್ಕಾಚಾರದಲ್ಲಿ ಬಾಲಿವುಡ್ ಚಿತ್ರಮಂದಿ ಇದ್ದಾರೆ. ಈಗಾಗಲೆ ಕ್ರಿಷ್ 3 ಚಿತ್ರ ರು.244 ಕೋಟಿ ಕಲೆಕ್ಷನ್ ಮಾಡಿದೆ. ಆ ದಾಖಲೆಯನ್ನು ಧೂಮ್ 3 ಧೂಳಿಪಟ ಮಾಡಲಿದೆಯೇ? ಇದಕ್ಕೆ ಕಾಲವೇ ಉತ್ತರ ಹೇಳಬೇಕು.

  ಎಸಿಪಿ ಜೈ ದೀಕ್ಷಿತ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್

  ಎಸಿಪಿ ಜೈ ದೀಕ್ಷಿತ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್

  ಅಭಿಷೇಕ್ ಬಚ್ಚನ್ ಅವರು ಎಸಿಪಿ ಜೈ ದೀಕ್ಷಿತ್ ಪಾತ್ರದಲ್ಲಿ ಕಾಣಿಸಿದ್ದಾರೆ. ಕಳ್ಳ ಎಲ್ಲೆಲ್ಲಿ ದರೋಡೆ ಮಾಡುತ್ತಾನೋ ಅಲ್ಲೆಲ್ಲಾ ತನ್ನ ಸಹಿಹಾಕಿಹೋಗಿರುತ್ತಾನೆ. ಅವನನ್ನು ಹಿಡಿಯುವ ಪೊಲೀಸ್ ಅಧಿಕಾರಿಯಾಗಿ ಅಭಿಷೇಕ್ ಕಾಣಿಸಲಿದ್ದಾರೆ. ಈ ಹಿಂದಿನ ಧೂಮ್ ಚಿತ್ರಗಳ ಸಾಲಿನಲ್ಲೂ ಅವರು ಪೊಲೀಸ್ ಪಾತ್ರ ಪೋಷಿಸಿದ್ದರು.

  ಕತ್ರಿನಾ ಸೊಂಟದ ಮೇಲೆ ಎಲ್ಲರ ಕಣ್ಣು

  ಕತ್ರಿನಾ ಸೊಂಟದ ಮೇಲೆ ಎಲ್ಲರ ಕಣ್ಣು

  ಪ್ರೀತಂ ಸಂಗೀತದ ಚಿತ್ರದ ಹಾಡುಗಳು ಸಾಕಷ್ಟು ಸದ್ದು ಮಾಡಿವೆ. ಚಿತ್ರದ ಸಂಗೀತವೂ ಗಮನಸೆಳೆದಿದೆ. ಅಮೀರ್ ಹಾಗೂ ಕತ್ರಿನಾ ಅವರ ರೊಮ್ಯಾಂಟಿಕ್ ಸನ್ನಿವೇಶಗಳು, ಹಾಡುಗಳಿಗೆ ಕತ್ರಿನಾ ತಮ್ಮ ಸೊಂಟ ಬಳುಕಿಸಿರುವುದು ಎಲ್ಲರ ಕಣ್ಣುಕುಕ್ಕುತ್ತಿದೆ.

  ಅಮೀರ್ ಖಾನ್ ಗೆಟಪ್ ಇನ್ನೊಂದು ಆಕರ್ಷಣೆ

  ಅಮೀರ್ ಖಾನ್ ಗೆಟಪ್ ಇನ್ನೊಂದು ಆಕರ್ಷಣೆ

  ಈಗಾಗಲೆ ಧೂಮ್ 3 ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿದೆ. ಚಿತ್ರದಲ್ಲಿ ಅಮೀರ್ ಖಾನ್ ಗೆಟಪ್ ಇನ್ನೊಂದು ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ.

  ಧೂಮ್ 3 ಚಿತ್ರದ ಬಜೆಟ್ ರು.150 ಕೋಟಿ

  ಧೂಮ್ 3 ಚಿತ್ರದ ಬಜೆಟ್ ರು.150 ಕೋಟಿ

  ಧೂಮ್ 3 ಚಿತ್ರದ ಬಜೆಟ್ ರು.150 ಕೋಟಿ. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಆದಿತ್ಯ ಚೋಪ್ರಾ ನಿರ್ಮಾಪಕರು.

  ಪಾತ್ರವರ್ಗದಲ್ಲಿ ಯಾರ್ಯಾರಿದ್ದಾರೆ?

  ಪಾತ್ರವರ್ಗದಲ್ಲಿ ಯಾರ್ಯಾರಿದ್ದಾರೆ?

  ಅಮೀರ್ ಖಾನ್, ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ, ಕತ್ರಿನಾ ಕೈಫ್ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಅತ್ಯಂತ ದುಬಾರಿ ಬಜೆಟ್ ಸಿನಿಮಾ

  ಅತ್ಯಂತ ದುಬಾರಿ ಬಜೆಟ್ ಸಿನಿಮಾ

  ಧೂಮ್ ಸೀರೀಸ್ ನಲ್ಲಿ ಬರುತ್ತಿರುವ ಮೂರನೇ ಚಿತ್ರವಿದು. ಭಾರತೀಯ ಚಿತ್ರರಂಗಲ್ಲೇ ಅತ್ಯಂತ ದುಬಾರಿ ಬಜೆಟ್ ನ ಚಿತ್ರ ಎಂಬ ಗರಿಮೆಗೆ 'ಧೂಮ್ 3' ಚಿತ್ರ ಪಾತ್ರವಾಗಿದೆ.

  ಐಮ್ಯಾಕ್ಸ್ ಫಾರ್ಮ್ಯಾಟ್ ನಲ್ಲಿ ತೆರೆಗೆ

  ಐಮ್ಯಾಕ್ಸ್ ಫಾರ್ಮ್ಯಾಟ್ ನಲ್ಲಿ ತೆರೆಗೆ

  ಈ ಚಿತ್ರವನ್ನು 2D ಹಾಗೂ ಐಮ್ಯಾಕ್ಸ್ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಐಮ್ಯಾಕ್ಸ್ ಫಾರ್ಮ್ಯಾಟ್ ನಲ್ಲಿ ತೆರೆಕಾಣುತ್ತಿರುವ ಮೊದಲ ಬಾಲಿವುಡ್ ಚಿತ್ರವಿದು.

  English summary
  Yash Raj Films' much-awaited action flick, 'Dhoom 3' finally releases today. Directed by Vijay Krishna Acharya, 'Dhoom 3' stars Aamir Khan and Katrina Kaif in lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X