For Quick Alerts
  ALLOW NOTIFICATIONS  
  For Daily Alerts

  ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅಭಿಮಾನಿಗಳಿಗೆ ಭಾರಿ ನಿರಾಸೆ

  |

  ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅಭಿಮಾನಿಗಳಿಗೆ ಭಾರಿ ನಿರಾಸೆಯ ಸುದ್ದಿ ಹೊರಬಿದ್ದಿದೆ. ಹೌದು, ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಆಗಿ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೆ ವರ್ಷದ ಕೊನೆಯಲ್ಲಿ ಅಭಿಮಾನಿಗಳ ಮುಂದೆ ಹಾಜರಾಗಲು ರೆಡಿಯಾಗಿದ್ದರು.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು 17 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ | DBoss | Darshan Anniversary

  ಆದರೀಗ ಕೊರೊನಾ ಹಾವಳಿಯ ಪರಿಣಾಮ ಚಿತ್ರತಂಡದ ಲೆಕ್ಕಾಚಾರ ತಲೆಕೆಳಗಾಗಿದೆ. ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್ಮಸ್ ಗೆ ರಿಲೀಸ್ ಆಗಲು ತಯಾರಾಗಿದ್ದ ಸಿನಿಮಾವೀಗ ವರ್ಷದ ಕೊನೆಯಲ್ಲಿ ತೆರೆಗೆ ಬರುವುದು ಅನುಮಾನವಾಗಿದೆ.

  ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಲುಕ್ ಗೆ ಬಾಲಿವುಡ್ ಮಂದಿ ಫಿದಾಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಲುಕ್ ಗೆ ಬಾಲಿವುಡ್ ಮಂದಿ ಫಿದಾ

  ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಕೂಡ ಒಂದು. ಎರಡೂ ವರ್ಷಗಳ ಬಳಿಕ ತೆರೆಮೇಲೆ ಬರುತ್ತಿರುವ ಆಮೀರ್ ಖಾನ್ ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ನಂತರ ಆಮೀರ್ ಸಿನಿಮಾ ರಿಲೀಸ್ ಆಗಿರಲಿಲ್ಲ.

  ಈ ವರ್ಷವಾದರೂ ಆಮೀರ್ ನೋಡಿ ಕಣ್ತುಂಬಿ ಕೊಳ್ಳುವ ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. 60ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪ್ರಮುಖ ಭಾಗದ ಚಿತ್ರೀಕರಣ ಬಾಕಿ ಇಟ್ಟುಕೊಂಡಿದೆಯಂತೆ. ಹಾಗಾಗಿ ಸಿನಿಮಾ ಮುಂದಿನ ವರ್ಷ ಏಪ್ರಿಲ್ ಗೆ ರಿಲೀಸ್ ಆಗುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.

  ಒಂದು ವೇಳೆ ಚಿತ್ರೀಕರಣ ಬೇಗ ಮುಕ್ತಾಯವಾದರೆ ಸಿನಿಮಾ ಅಂದುಕೊಂಡ ದಿನಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ. ಅಂದ್ಹಾಗೆ ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ಸಿನಿಮಾದ ರಿಮೇಕ್. 1994ರಲ್ಲಿ ರೀಲೀಸ್ ಆಗಿದ್ದ ಆಸ್ಕರ್ ಮುಡಿಗೇರಿಸಿಕೊಂಡಿರುವ 'ಫಾರೆಸ್ಟ್ ಗಂಪ್' ಚಿತ್ರದ ರಿಮೇಕ್ ಇದಾಗಿದೆ. ಚಿತ್ರದಲ್ಲಿ ಆಮೀರ್ ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ.

  English summary
  Bollywood Actor Aamir Khan starrer Laal Singh Chaddha movie release postponed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X