For Quick Alerts
  ALLOW NOTIFICATIONS  
  For Daily Alerts

  ಗೋದಾವರಿ ಮಡಿಲಲ್ಲಿ ಅಮೀರ್ ಖಾನ್: ಭರದಿಂದ ಚಿತ್ರೀಕರಣ

  |

  ಕೆಲವು ದಿನಗಳ ಹಿಂದಷ್ಟೆ ಕಾರ್ಗಿಲ್‌ನಲ್ಲಿ ಹಿಮಚ್ಛಾಧಿತ ಬೆಟ್ಟಗಳ ನಡುವೆ ಕೊರೆವ ಚಳಿಯಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ನಟ ಅಮೀರ್ ಖಾನ್‌ ಈಗ ಗೋದಾವರಿ ಮಡಿಲಿಗೆ ಬಂದಿದ್ದಾರೆ.

  ನಟ ಅಮೀರ್ ಖಾನ್ ಆಂಧ್ರ ಪ್ರದೇಶದ ಈಸ್ಟ್ ಗೋದಾವರಿ ಪ್ರದೇಶಕ್ಕೆ ಬಂದಿದ್ದು ಅಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸ್ ಉನ್ನತಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

  ಈಸ್ಟ್ ಗೋದಾವರಿ ಪ್ರದೇಶದ ಕೋನಸೀಮ ಬಳಿಯ ಅಲ್ಲವರಮ್ ಮಂಡಲ್ ಬಳಿ ಅಮೀರ್ ಖಾನ್ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅಮೀರ್ ಖಾನ್ ಯಾವ ಸಿನಿಮಾದ ಚಿತ್ರೀಕರಣಕ್ಕಾಗಿ ಇಲ್ಲಿಗೆ ಆಗಮಿಸಿದ್ದಾರೆ ಎಂಬುದನ್ನು ಪೊಲೀಸ್ ಎಸ್‌ಪಿ ಬಹಿರಂಗಪಡಿಸಿಲ್ಲ. ಆದರೆ ಅಲ್ಲವರಮ್ ಮಂಡಲ್‌ಗೆ ಅಮೀರ್ ಖಾನ್ ಬಿಟ್ಟರೆ ಇನ್ನಾವುದೇ ಸ್ಟಾರ್ ನಟರು ಬಂದಿಲ್ಲ ಎನ್ನಲಾಗಿದೆ.

  ಅಲ್ಲವರಮ್‌ ಮಂಡಲ್ ಬಳಿಯ ಉಪ್ಪದ, ಕೊಟ್ಟಪಲ್ಲಿ ಗ್ರಾಮದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿ ಬೀಚ್ ಒಂದಿದ್ದು ಅಲ್ಲಿಯೂ ಚಿತ್ರೀಕರಣ ನಡೆಸಲಾಗುತ್ತಿದೆ. ಜೊತೆಗೆ ಕಾಕಿನಾಡ ಪಟ್ಟಣದಲ್ಲಿಯೂ ಸಿನಿಮಾದ ಚಿತ್ರೀಕರಣ ನಡೆಯಲಿದೆ ಎಂದು ಪೊಲೀಸರು ಹೇಳಿದ್ದು, ಅಮೀರ್ ಖಾನ್ ಹಾಗೂ ಒಟ್ಟು ಚಿತ್ರತಂಡಕ್ಕೆ ಬಿಗಿ ಭದ್ರತೆಯನ್ನು ಸ್ಥಳೀಯ ಪೊಲೀಸರು ಒದಗಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  ನಾಲ್ಕು ದಿನಗಳ ಕಾಲ ಚಿತ್ರೀಕರಣ

  ನಾಲ್ಕು ದಿನಗಳ ಕಾಲ ಚಿತ್ರೀಕರಣ

  ''ಅಮೀರ್ ಖಾನ್ ಬಂದಿರುವ ಕಾರಣ ದೊಡ್ಡ ಸಂಖ್ಯೆಯ ಜನರು ಆಗಮಿಸುವ ಸಾಧ್ಯತೆ ಇದ್ದು, ಕೋವಿಡ್ ಸಮಯವಾದ್ದರಿಂದ ಜನರನ್ನು ನಿಯಂತ್ರಿಸುವುದು ಸವಾಲಾಗಿದೆ. ಅಮೀರ್ ಖಾನ್ ಹಾಗೂ ಚಿತ್ರತಂಡ ಸುಮಾರು ನಾಲ್ಕು ದಿನಗಳ ಕಾಲ ಇಲ್ಲಿ ಚಿತ್ರೀಕರಣ ನಡೆಸಬಹುದೆಂಬ ಪ್ರಾಥಮಿಕ ಮಾಹಿತಿ ಇದ್ದು, ಇಷ್ಟೂ ದಿನ ಅಮೀರ್ ಖಾನ್‌ಗೆ ಬಿಗಿ ಭದ್ರತೆ ಒದಗಿಸಲಾಗುತ್ತದೆ'' ಎಂದಿದ್ದಾರೆ ಪೊಲೀಸ್ ಅಧಿಕಾರಿ.

  ಈಸ್ಟ್ ಗೋದಾವರಿಗೆ ಬಂದಿದ್ದಾರೆ ಅಮೀರ್ ಖಾನ್

  ಈಸ್ಟ್ ಗೋದಾವರಿಗೆ ಬಂದಿದ್ದಾರೆ ಅಮೀರ್ ಖಾನ್

  ಈಸ್ಟ್ ಗೋದಾವರಿಗೆ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಚಿತ್ರೀಕರಣಕ್ಕೆ ಅಮೀರ್ ಖಾನ್ ಬಂದಿದ್ದಾರೆ. ಸಿನಿಮಾದ ಕತೆಯಂತೆ ಅಮೀರ್ ಖಾನ್ (ನಾಯಕ) ಹಾಗೂ ನಾಗಚೈತನ್ಯ (ನಾಯಕನ ಗೆಳೆಯ) ಸೈನ್ಯದಲ್ಲಿ ಸ್ನೇಹಿತರಾಗಿದ್ದು ಅಮೀರ್ ಸ್ನೇಹಿತ ಪಾತ್ರದಲ್ಲಿ ನಟಿಸಿದ್ದ ನಾಗಚೈತನ್ಯ ಯುದ್ಧದಲ್ಲಿ ಅಸುನೀಗಿದಾಗ ನಾಗಚೈತನ್ಯ ಕುಟುಂಬಕ್ಕೆ ಆಸರೆ ಆಗಲು ನಾಯಕ ತನ್ನ ಗೆಳೆಯನ ಹುಟ್ಟೂರಿಗೆ ಬರುತ್ತಾನೆ. ಅದೇ ದೃಶ್ಯಗಳ ಚಿತ್ರೀಕರಣಕ್ಕೆಂದು ಅಮೀರ್ ಖಾನ್ ಆಂಧ್ರ ಪ್ರದೇಶದ ಈಸ್ಟ್ ಗೋದಾವರಿಗೆ ಬಂದಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಅಮೀರ್ ಖಾನ್‌ ಕಾರ್ಗಿಲ್‌ನಲ್ಲಿ ಸೈನಿಕನ ಸಮವಸ್ತ್ರದಲ್ಲಿ ಚಿತ್ರೀಕರಣ ನಡೆಸಿದ್ದರು, ನಾಗಚೈತನ್ಯ ಸಹ ಅಲ್ಲಿದ್ದರು.

  'ಫಾರೆಸ್ಟ್ ಗಂಪ್' ಕಾದಂಬರಿ ಆಧರಿತ ಸಿನಿಮಾ

  'ಫಾರೆಸ್ಟ್ ಗಂಪ್' ಕಾದಂಬರಿ ಆಧರಿತ ಸಿನಿಮಾ

  'ಲಾಲ್ ಸಿಂಗ್ ಛಡ್ಡಾ' ಸಿನಿಮಾವು ಇಂಗ್ಲಿಷ್‌ನ 'ಫಾರೆಸ್ಟ್ ಗಂಪ್' ಹೆಸರಿನ ಕಾದಂಬರಿ ಆಧರಿತ ಸಿನಿಮಾ. 'ಫಾರೆಸ್ಟ್ ಗಂಪ್' ಹೆಸರಿನ ಸಿನಿಮಾ ಈಗಾಗಲೇ ಇಂಗ್ಲೀಷ್‌ನಲ್ಲಿ ನಿರ್ಮಿಸಲಾಗಿದೆ. ಈ ಸಿನಿಮಾದಲ್ಲಿ ಟಾಮ್ ಹ್ಯಾಂಕ್ಸ್ ನಾಯಕನ ಪಾತ್ರದಲ್ಲಿ ನಟಿಸಿದ್ದು ಸಿನಿಮಾವು ಶ್ರೇಷ್ಟ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಹಾಗೂ ಈ ಸಿನಿಮಾಕ್ಕೆ ಆರು ಆಸ್ಕರ್ ಪ್ರಶಸ್ತಿಗಳು ದೊರೆತಿವೆ. ಇಂಗ್ಲಿಷ್‌ನಲ್ಲಿ 'ಫಾರೆಸ್ಟ್ ಗಂಪ್' ಸಿನಿಮಾವನ್ನು ರಾಬರ್ಟ್ ಜೆಮಿಕ್ಸ್ ನಿರ್ದೇಶನ ಮಾಡಿದ್ದಾರೆ.

  ಅಮೀರ್ ಗೆಳೆಯನ ಪಾತ್ರದಲ್ಲಿ ನಾಗಚೈತನ್ಯ

  ಅಮೀರ್ ಗೆಳೆಯನ ಪಾತ್ರದಲ್ಲಿ ನಾಗಚೈತನ್ಯ

  ಹಿಂದಿಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ನಾಗಚೈತನ್ಯ ನಾಯಕನ ಸ್ನೇಹಿತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ. ಕನ್ನಡದ 'ಆ ದಿನಗಳು', 'ಎದೆಗಾರಿಕೆ', 'ಮೈತ್ರಿ', ಸಿನಿಮಾಗಳಲ್ಲಿ ನಟಿಸಿರುವ ಅತುಲ್ ಕುಲಕರ್ಣಿ, ಇಂಗ್ಲೀಷ್‌ನ 'ಫಾರೆಸ್ಟ್ ಗಂಫ್' ಕಾದಂಬರಿಯನ್ನು ಹಿಂದಿಯಲ್ಲಿ ಚಿತ್ರಕತೆಯಾಗಿ ಬದಲಾಯಿಸಿದ್ದಾರೆ. 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ನಿರ್ದೇಶನ ಮಾಡುತ್ತಿರುವುದು ಅದ್ವೈತ್ ಚಂದನ್, ಸಿನಿಮಾಕ್ಕೆ ಬಂಡವಾಳವನ್ನು ಸ್ವತಃ ಅಮೀರ್ ಖಾನ್ ಹೂಡಿದ್ದಾರೆ. ಸಹ ನಿರ್ಮಾಣ ರಾಧಿಕಾ ಚೌಧರಿಯದ್ದು.

  ಸಿನಿಮಾ ಬಿಡುಗಡೆ ಯಾವಾಗ?

  ಸಿನಿಮಾ ಬಿಡುಗಡೆ ಯಾವಾಗ?

  'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಹಲವು ವಿಶೇಷತೆಗಳಿದೆ. 1980-90ರಲ್ಲಿ ನಡೆಯುವ ಕತೆ ಇದಾಗಿದ್ದು ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ವಿಶೇಷ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. 'ಡಿಡಿಎಲ್‌ಜೆ'ಯ ರಾಜ್ ಆಗಿ ಶಾರುಖ್, 'ಮೈನೆ ಪ್ಯಾರ್ ಕಿಯಾ' ಸಿನಿಮಾದ ಪ್ರೇಮ್ ಆಗಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿರಬೇಕಿತ್ತು ಆದರೆ ಕೊರೊನಾ ಹಾಗೂ ಕರೀನಾ ಕಾರಣದಿಂದ ಸಿನಿಮಾ ತಡವಾಗಿದೆ. ಕೊರೊನಾ ಕಾರಣಕ್ಕೆ ಚಿತ್ರೀಕರಣ ತಡವಾಗುವ ಜೊತೆಗೆ, ಕರೀನಾ ಎರಡನೇ ಬಾರಿ ತಾಯಿಯಾದ ಕಾರಣ ಹಲವು ತಿಂಗಳು ಅವರು ಚಿತ್ರೀಕರಣಕ್ಕೆ ಬಂದಿರಲಿಲ್ಲ ಹಾಗಾಗಿ ಚಿತ್ರೀಕರಣ ಇನ್ನಷ್ಟು ತಡವಾಯಿತು. 'ಲಾಲ್ ಸಿಂಗ್ ಛಡ್ಡಾ' ಸಿನಿಮಾವು ಡಿಸೆಂಬರ್ 25ಕ್ಕೆ ತೆರೆಗೆ ಬರಲಿದೆ.

  English summary
  Bollywood actor Aamir Khan shooting his movie near east Godavari in Andhra Pradesh. Aamir Khan shooting for 'Lal Singh Chaddha' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X