For Quick Alerts
  ALLOW NOTIFICATIONS  
  For Daily Alerts

  ನಟ ಅಮೀರ್ ಖಾನ್ ಫ್ಯಾಮಿಲಿ ಚಿತ್ರಗಳು

  By ಉದಯರವಿ
  |

  ನಟ ಅಮೀರ್ ಖಾನ್ ಅವರು ತಮ್ಮ ಎರಡು ವರ್ಷದ ಮಗನನ್ನು ಬಿಟ್ಟು ಒಂದೇ ಒಂದು ಕ್ಷಣವೂ ಇರಲಿಕ್ಕೆ ಸಾಧ್ಯವಾಗುತ್ತಿಲ್ಲವಂತೆ. ಸರಿ ಶೂಟಿಂಗ್ ಗೆ ಹೋದರೆ ಏನು ಮಾಡುವುದು. ಇತ್ತೀಚೆಗೆ ಅವರು ಒಂದು ಉಪಾಯವನ್ನೂ ಹುಡುಕಿಕೊಂಡಿದ್ದಾರೆ.

  ಅದೇನೆಂದರೆ ಶೂಟಿಂಗ್ ಸ್ಪಾಟ್ ಗೆ ತಮ್ಮ ಮಗನನ್ನು ಕರೆದೊಯ್ಯುವುದು. ಸದ್ಯಕ್ಕೆ ಪೀಕ್ಯಾ ಎಂಬ ಚಿತ್ರದಲ್ಲಿ ಅಮೀರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ರಾಜಸ್ತಾನದಲ್ಲಿ ನಡೆಯುತ್ತಿದೆ. ಅಲ್ಲಿಗೆ ತಮ್ಮ ಪುತ್ರ ಆಜಾದ್ ರಾವ್ ಖಾನ್ ಹಾಗೂ ಮಡದಿ ಕಿರಣ್ ರಾವ್ ಅವನ್ನು ಕರೆದೊಯ್ದಿದ್ದರು.

  'ಪೀಕ್ಯಾ' ಚಿತ್ರದ ನಾಯಕಿ ಅನುಷ್ಕಾ ಶರ್ಮಾ. ಈಗಿನಿಂದಲೇ ತಮ್ಮ ಪುತ್ರನಿಗೆ ಅಮೀರ್ ತರಬೇತಿ ನೀಡುತ್ತಿದ್ದಾರೋ ಏನೋ? ಯಾವೋನಿಗ್ ಗೊತ್ತು. ಈ ಚಿತ್ರ ಬಹುಶಃ 2014ಕ್ಕೆ ಬಿಡುಗಡೆಯಾಗಬಹುದು.

  ತಮ್ಮ ಪುತ್ರನನ್ನು ಈ ಹಿಂದೆ ಚಿಕಾಗೋಗೆ ಅಮೀರ್ ಖಾನ್ ಕರೆದುಕೊಂಡು ಹೋಗಿದ್ದರು. ಆಗ ಧೂಮ್ 3 ಚಿತ್ರೀಕರಣ. ಈಗ ಪೀಕ್ಯಾ ಶೂಟಿಂಗ್. ಬನ್ನಿ ಚಿತ್ರೀಕರಣದ ಕೆಲವು ದೃಶ್ಯಗಳನ್ನು ಆಸ್ವಾದಿಸೋಣ.

  ಶೂಟಿಂಗ್ ಸ್ಪಾಟ್ ನಲ್ಲಿ ಆಜಾದ್

  ಶೂಟಿಂಗ್ ಸ್ಪಾಟ್ ನಲ್ಲಿ ಆಜಾದ್

  ಇಷ್ಟಕ್ಕೂ ಆಜಾದ್ ರಾವ್ ಖಾನ್ ಏನನ್ನು ತದೇಕಚಿತ್ತದಿಂದ ನೋಡುತ್ತಿದ್ದಾನೆ. ಶೂಟಿಂಗ್ ನಲ್ಲಿ ಅಪ್ಪ ಮುಳುಗಿರುವುದನ್ನೇ ಮಗ ಕುತೂಹಲಭರಿತವಾಗಿ ನೋಡುತ್ತಿದ್ದಾರೆ. ಮುಂದಿನ ಚಿತ್ರ ನೋಡಿ ಸಲ್ಮಾನ್ ಖಾನ್ ವೇಷ.

  ಗಂಡು ಹೆಣ್ಣಿನ ಗೆಟಪ್ ನಲ್ಲಿ ಅಮೀರ್

  ಗಂಡು ಹೆಣ್ಣಿನ ಗೆಟಪ್ ನಲ್ಲಿ ಅಮೀರ್

  ಇಲ್ಲಿ ಅಮೀರ್ ಖಾನ್ ಅವರ ವೇಷಭೂಷಣ ನೋಡಿದರೆ ಹೆಣ್ಣೋ ಗಂಡೋ ಎಂಬ ಅನುಮಾನ ಬರುತ್ತದೆ. ಇದೇನಾದರೂ ಹೊಸ ಸ್ಟೈಲೇ...

  ಚಿತ್ರೀಕರಣದಲ್ಲಿ ಅಮೀರ್ ರಿಲ್ಯಾಕ್ಸ್

  ಚಿತ್ರೀಕರಣದಲ್ಲಿ ಅಮೀರ್ ರಿಲ್ಯಾಕ್ಸ್

  ಪೀಕ್ಯಾ ಚಿತ್ರೀಕರಣದಲ್ಲಿ ಅಮೀರ್ ಕೊಂಚ ರಿಲ್ಯಾಕ್ಸ್ ಆದ ಸಮಯ.

  ಆಜಾದ್ ಖಾನ್ ರಾವ್ ಜೊತೆ ಸುತ್ತಾಟ

  ಆಜಾದ್ ಖಾನ್ ರಾವ್ ಜೊತೆ ಸುತ್ತಾಟ

  ಅಮೀರ್ ಖಾನ್ ತಮ್ಮ ಪುಟ್ಟ ಕಂದನನ್ನು ಕಂಕುಳಲ್ಲಿ ಎತ್ತಿಕೊಂಡು ಸುತ್ತಾಡಿದ ಬಗೆ. ಚಿತ್ರೀಕರಣದಲ್ಲೂ ಅಪ್ಪ ಮಗನ ಆತ್ಮೀಯ ಅನುಬಂಧ.

  ಪೀಕ್ಯಾ ಚಿತ್ರದ ಮತ್ತೊಂದು ಸನ್ನಿವೇಶ

  ಪೀಕ್ಯಾ ಚಿತ್ರದ ಮತ್ತೊಂದು ಸನ್ನಿವೇಶ

  ಈ ವಿಚಿತ್ರ ಗೆಟಪ್ ಮೂಲಕ ಅಮೀರ್ ಕುತೂಹಲ ಕೆರಳಿಸಿದ್ದಾರೆ. ಅವರ ಅಭಿಮಾನಿಗಳು ಏನಿರಬಹುದು ಇದು ಎಂದು ಈಗಾಗಲೆ ತಲೆಕೆಡಿಸಿಕೊಂಡಿದ್ದಾರೆ.

  ಓಕೆ ಟಾಟಾ ಬಾಯ್ ಬಾಯ್

  ಓಕೆ ಟಾಟಾ ಬಾಯ್ ಬಾಯ್

  ಚಿತ್ರೀಕರಣ ಮುಗಿಸಿಕೊಂಡು ಹೊರಟ ಆಜಾದ್. ಬೆಳಗ್ಗೆಯಿಂದ ಸಂಜೆತನಕ ಅಪ್ಪನ ಜೊತೆ ಶೂಟಿಂಗ್ ನಲ್ಲಿ ಕಳೆದು ಸುಸ್ತಾತ ಆಜಾದ್ ಅಮ್ಮನ ಜೊತೆ ಟಾಟಾ ಬಾಯ್ ಬಾಯ್ ಹೇಳುತ್ತಾ ಮನೆ ಕಡೆ ಹೊರಟರು.

  ಹಾಯಾಗಿ ಕುಳಿತಿರು ನೀನು...

  ಹಾಯಾಗಿ ಕುಳಿತಿರು ನೀನು...

  ಅಪ್ಪನ ಕಾರಿನಲ್ಲಿ ಹಾಯಾಗಿ ಕುಳಿತು ಮನೆಗೆ ಕಡೆಗೆ ಹೊರಟ ಸವಾರಿ.

  English summary
  It looks like superstar Aamir Khan doesn't want to be away from his little one even for a day. Yes, we are talking about the Mr Perfectionist's son Azad Rao Khan, who was spotted on the sets of Khan's upcoming movie Peekay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X