»   » ಬಾಕ್ಸಾಫೀಸ್ ನಲ್ಲಿ ಸೋತು ಸುಣ್ಣವಾದ ಪಿಕೆ!

ಬಾಕ್ಸಾಫೀಸ್ ನಲ್ಲಿ ಸೋತು ಸುಣ್ಣವಾದ ಪಿಕೆ!

Posted By:
Subscribe to Filmibeat Kannada

'ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ತೆರೆಮೇಲೆ ಬಂದರೆ ಬಾಕ್ಸಾಫೀಸ್ ಧೂಳೀಪಟ ಗ್ಯಾರೆಂಟಿ' ಅನ್ನುವ ಮಾತಿತ್ತು. ಆದ್ರೆ, ಅದನ್ನ 'ಪಿಕೆ' ಸಿನಿಮಾ ಸಾಬೀತು ಪಡಿಸುವಲ್ಲಿ ಸೋತಿದೆ.

ಬಾಲಿವುಡ್ ಅಂಗಳಲ್ಲಿ 100 ಕೋಟಿ ಕ್ಲಬ್ ಹುಟ್ಟುಹಾಕಿ, ದಾಖಲೆಗಳಿಗೆ ನಾಂದಿ ಹಾಡಿದ ಆಮೀರ್ ಖಾನ್, ಈ ಬಾರಿ 'ಪಿಕೆ' ಸಿನಿಮಾ ದಿಂದ ಕಲೆಕ್ಷನ್ ರೇಸ್ ನಲ್ಲಿ ಹಿಂದೆ ಬಿದ್ದಿದ್ದಾರೆ.

ಆಮೀರ್ ನಟನೆಯ 'ಪಿಕೆ', ಬಾಲಿವುಡ್ ನ ಹಿಂದಿನ ಎಲ್ಲಾ ರೆಕಾರ್ಡ್ ಗಳನ್ನ ಉಡೀಸ್ ಮಾಡಲಿದೆ. ಶಾರೂಖ್ ಅಭಿನಯದ 'ಹ್ಯಾಪಿ ನ್ಯೂ ಇಯರ್' ಚಿತ್ರ ಮಾಡಿದ್ದ ದಾಖಲೆಗಳನ್ನ ಸರಿಗಟ್ಟಲಿದೆ ಅಂತ ಎಲ್ಲರೂ ಊಹಿಸಿದ್ದರು. ಆದ್ರೆ, ಅದ್ಯಾವುದನ್ನೂ 'ಪಿಕೆ' ಮಾಡಿಲ್ಲ ಅನ್ನುವುದು ಆಮೀರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. [ಚಿತ್ರ ವಿಮರ್ಶೆ: 'ಪಿ.ಕೆ' ಅಮೀರ್ ಖಾನ್ ಡಬಲ್ ಓಕೆ]

PK1

ಕಳೆದ ಶುಕ್ರವಾರ (ಡಿಸೆಂಬರ್ 19) ತೆರೆಗೆ ಬಂದ 'ಪಿಕೆ' ಚಿತ್ರ ಮೊದಲ ದಿನ ಕಲೆಕ್ಟ್ ಮಾಡಿರುವುದು ಕೇವಲ 26.63 ಕೋಟಿ ರೂಪಾಯಿ. ಆಮೀರ್ ಗಿರುವ ಸ್ಟಾರ್ ಸ್ಟೇಟಸ್ ಗೆ ಇದು ತೀರಾ ಕಡಿಮೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಶಾರೂಖ್ ಖಾನ್ ಅಭಿನಯದ ಇದೇ ವರ್ಷ ತೆರೆಗೆ ಬಂದ 'ಹ್ಯಾಪಿ ನ್ಯೂ ಇಯರ್' ಚಿತ್ರ ಬರೋಬ್ಬರಿ 44.97 ಕೋಟಿ ಪೈಸಾ ವಸೂಲ್ ಮಾಡಿ ಬಾಲಿವುಡ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು.

ಶಾರೂಖ್ ಮಾಡಿದ ದಾಖಲೆಯನ್ನ ಮುರಿಯದ್ದೇ ಇದ್ದರೂ, ಆಮೀರ್ ಮಾಡಿದ ಹಿಂದಿನ ರೆಕಾರ್ಡ್ ಅನ್ನೂ 'ಪಿಕೆ' ಬ್ರೇಕ್ ಮಾಡಿಲ್ಲ. ಕಳೆದ ವರ್ಷ ಡಿಸೆಂಬರ್ ಹೊತ್ತಲ್ಲೇ ತೆರೆಗೆ ಬಂದ ಆಮೀರ್ ನಟನೆಯ 'ಧೂಮ್ 3' ಚಿತ್ರ 36.22 ಕೋಟಿ ಕಲೆಕ್ಷನ್ ಮಾಡಿತ್ತು. [ವಿಮರ್ಶಕ ಕೆಂಗಣ್ಣು ಕೂಡಾ ತಂಪಾಗಿಸಿದ 'ಪಿಕೆ' ಅಮೀರ]

PK

ಭಾರತದಲ್ಲೇ 5000 ಸ್ಕ್ರೀನ್ ಗಳಲ್ಲಿ ತೆರೆಗೆ ಬಂದಿರುವ 'ಪಿಕೆ', 'ಧೂಮ್ 3' ಚಿತ್ರಕ್ಕಿಂತ ಬಿಗ್ ಓಪನ್ನಿಂಗ್ ಪಡೆದುಕೊಳ್ತು. ಆದರೆ, 'ಸಿಂಗಂ ರಿಟರ್ನ್ಸ್' ಮತ್ತು 'ಬ್ಯಾಂಗ್ ಬ್ಯಾಂಗ್' ಚಿತ್ರಗಳಿಗಿಂತಲೂ ಕಮ್ಮಿ ಕಲೆಕ್ಷನ್ ಮಾಡಿ, ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ ತಲೆಕೆಳಗು ಮಾಡಿದೆ 'ಪಿಕೆ' ಚಿತ್ರ.

ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದರೂ, 'ಪಿಕೆ' ಚಿತ್ರ ಪೈಸಾ ಮಾತ್ರ ಕಮಾಯಿ ಮಾಡುತ್ತಿಲ್ಲ. ನಿಧಾನವಾಗಿ ಥಿಯೇಟರ್ ನತ್ತ ಪ್ರೇಕ್ಷಕರನ್ನ ಸೆಳೆಯುತ್ತಿರುವ 'ಪಿಕೆ' ಇನ್ಮುಂದಾದರೂ ಪಿಕಪ್ ಆಗುತ್ತಾ ನೋಡೋಣ. (ಏಜೆನ್ಸೀಸ್)

English summary
Mr.Perfectionist Aamir Khan starrer PK had an excellent start at the domestic box office, but is lagging behind in terms of box-office collection. PK has failed to break the opening day record of Dhoom 3 and SRK starrer Happy New Year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada