»   » ಮೂರೇ ದಿನದಲ್ಲಿ 49 ಕೊಟಿ ಬಾಚಿದ ತಲಾಷ್ ಚಿತ್ರ

ಮೂರೇ ದಿನದಲ್ಲಿ 49 ಕೊಟಿ ಬಾಚಿದ ತಲಾಷ್ ಚಿತ್ರ

Posted By:
Subscribe to Filmibeat Kannada

ಅಮೀರ್ ಖಾನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಕಿಂಗ್ ಎನ್ನಿಸಿಕೊಂಡಿದ್ದಾರೆ. ಅಮೀರ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ತಲಾಷ್ ಬಾಕ್ಸ್ ಆಫೀಸಲ್ಲಿ ಮೊದಲ ವೀಕೆಂಡ್ ನಲ್ಲೇ ರು.48.99 ಕೋಟಿ ಬಾಚಿದೆ.

ಚಿತ್ರ ಬಿಡುಗಡೆಯಾದ ದಿನ ರು. 14.52 ಕೋಟಿ (ಶುಕ್ರವಾರ), ಶನಿವಾರ (ರು.16.37 ಕೋಟಿ) ಹಾಗೂ ಭಾನುವಾರ (ರು. 18.1 ಕೋಟಿ) ಗಳಿಸಿದೆ. ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಆದರೂ ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುತ್ತಿರುವುದು ವಿಶೇಷ.

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗಿಂತಲೂ ಮಲ್ಟಿಫ್ಲೆಕ್ಸ್ ಥಿಯೇಟರ್ ಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫ್ಯಾಮಿಲಿ ಆಡಿಯನ್ಸನ್ನೂ ಚಿತ್ರ ಆಕರ್ಷಿಸುತ್ತಿದೆ. ಈ ಚಿತ್ರಕ್ಕೆ ಮುಗಿಬೀಳುತ್ತಿರುವ ಮತ್ತೊಂದು ಗ್ರೂಪ್ ಎಂದರೆ ಯುವ ಜನತೆ.

ಬಾಕ್ಸ್ ಆಫೀಸಲ್ಲಿ ತಲಾಷ್ ಚಿತ್ರ ಇದೇ ರೀತಿ ಸ್ಥಿರತೆಯನ್ನು ಕಾದಿರಿಸಿಕೊಳ್ಳುತ್ತದೋ ಇಲ್ಲವೋ ಮುಂದಿನ ದಿನಗಳೇ ನಿರ್ಧರಿಸಲಿವೆ. ಬಾಲಿವುಡ್ ನ ಮತ್ತೆರಡು ಬಹುನಿರೀಕ್ಷಿತ ಚಿತ್ರಗಳಾದ ಖಿಲಾಡಿ 786 ಹಾಗೂ ದಬಾಂಗ್ 2 ಶೀಘ್ರದಲ್ಲೇ ಬಿಡುಗಡೆಯಾಗುತ್ತಿವೆ. ಆಗ ತಲಾಷ್ ಓಟಕ್ಕೆ ತಡೆಬೀಳುವ ಸಾಧ್ಯತೆಗಳೂ ಇವೆ.

ಸರಿಸುಮಾರು ರು.40 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದೆ. ಚಿತ್ರದ ನಿರ್ಮಾಪಕರಲ್ಲಿ ಅಮೀರ್ ಖಾನ್ ಸಹ ಒಬ್ಬರು. ಚಿತ್ರ ತೆರೆಕಂಡ ಮೂರೇ ದಿನಗಳಲ್ಲಿ ಬಂಡವಾಳ ವಾಪಸ್ ಆಗಿದೆ. ಇನ್ನೇನಿದ್ದರೂ ಲಾಭದ ಲೆಕ್ಕಾಚಾರ. (ಏಜೆನ್ಸೀಸ್)

English summary
Aamir Khan's suspense-thriller Talaash earning Rs.48.99 crore in the opening weekend. According to trade sources, its first weekend break-up is - Rs 14.52 crore (Friday), Rs 16.37 crore (Saturday) and Rs 18.1 crore (Sunday).
Please Wait while comments are loading...