Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಿಂದೂ ಸಂಪ್ರದಾಯದಂತೆ ಹಣೆಗೆ ಕುಂಕುಮ, ಕಳಶ ಪೂಜೆ; ಆಮಿರ್ ಖಾನ್‌ಗೆ ಸೋತ ಮೇಲೆ ಬಂತಾ ಬುದ್ಧಿ?
2022ರಲ್ಲಿ ಅತಿ ಕೆಟ್ಟ ಸೋಲು ಕಂಡ ಚಿತ್ರಗಳ ಪಟ್ಟಿಯನ್ನು ತೆಗೆದು ನೋಡಿದರೆ ಅದರಲ್ಲಿ ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಎಂಬ ಚಿತ್ರ ಮುಂದಿನ ಸಾಲಿನಲ್ಲಿ ಇರುವುದು ಪಕ್ಕಾ. ಅಷ್ಟ ಮಟ್ಟಿಗೆ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು ಈ ಹಿಂದೆ ಸಾವಿರ ಕೋಟಿ ಕಲೆಕ್ಷನ್ ಕಿಂಗ್ ಎನಿಸಿಕೊಳ್ಳುತ್ತಿದ್ದ ಆಮಿರ್ ಖಾನ್ ನಟನೆಯ ಈ ಚಿತ್ರ. ಇನ್ನು ಲಾಲ್ ಸಿಂಗ್ ಛಡ್ಡಾ ಕೆಟ್ಟದಾಗಿ ಸೋತದ್ದಕ್ಕೆ ಕಾರಣ ಚಿತ್ರದ ಕತೆ ಅಷ್ಟಕ್ಕಷ್ಟೇ ಎನ್ನುವುದು ಮಾತ್ರವಲ್ಲದೇ ಆಮಿರ್ ಖಾನ್ ಹೇಳಿಕೆಗಳೂ ಸಹ ಕಾರಣ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಸಿನಿಮಾ ಪಂಡಿತರು ಹಾಗೂ ನೆಟ್ಟಿಗರು.
ಹೌದು, ಆಮಿರ್ ಖಾನ್ ಈ ಹಿಂದೆ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ್ದರು, ಇಂತಹ ನಟನ ಚಿತ್ರಗಳನ್ನು ಯಾರೂ ನೋಡಬೇಡಿ ಎಂದು ಲಾಲ್ ಸಿಂಗ್ ಛಡ್ಡಾ ಚಿತ್ರವನ್ನು ಬಾಯ್‌ಕಾಟ್ ಮಾಡಲಾಗಿತ್ತು. ಈ ಬಾಯ್‌ಕಾಟ್ ಟ್ರೆಂಡ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರತಿಕ್ರಿಯೆಯನ್ನೂ ಸಹ ಗಿಟ್ಟಿಸಿಕೊಂಡಿತ್ತು. ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ ವ್ಯಕ್ತವಾಗಿದ್ದ ವಿರೋಧ ಕಂಡು ಚಿತ್ರ ಹೀನಾಯವಾಗಿ ಸೋಲುವುದು ಪಕ್ಕಾ ಎಂದು ಎಣಿಸಲಾಗಿತ್ತು.
ಇನ್ನು ತನ್ನ ಹೇಳಿಕೆಗಳಿಂದಲೇ ವಿರೋಧ ಕಟ್ಟಿಕೊಂಡು ಸೋತ ಆಮಿರ್ ಖಾನ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಹೀಗೆ ಸೈಲೆಂಟ್ ಆಗಿದ್ದ ಆಮಿರ್ ಖಾನ್ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗೀಡಾಗಿದ್ದಾರೆ. ಆಮಿರ್ ಖಾನ್ ಹಣೆಗೆ ಕುಂಕುಮ ಇಟ್ಟುಕೊಂಡು ಕಳಶ ಪೂಜೆ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಕುರಿತಾಗಿ ಸಾಕಷ್ಟು ಚರ್ಚೆಗಳೂ ಸಹ ಶುರುವಾಗಿವೆ.

ಹಿಂದೂ ಸಂಪ್ರದಾಯದಂತೆ ಪ್ರೊಡಕ್ಷನ್ ಕಛೇರಿಯ ಪೂಜೆ!
ಆಮಿರ್ ಖಾನ್ ಹಣೆಗೆ ತಿಲಕ ಇಟ್ಟು, ಕಳಶ ಹಿಡಿದು ಪೂಜೆ ಸಲ್ಲಿಸುತ್ತಿರುವ ಚಿತ್ರಗಳನ್ನು ಲಾಲ್ ಸಿಂಗ್ ಛಡ್ಡಾ ಚಿತ್ರದ ನಿರ್ದೇಶಕ ಅದ್ವೈತ್ ಚೇತನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಆಮಿರ್ ಖಾನ್ ಕಳಶವನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡು ದೇವರನ್ನು ಪೂಜಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಹಿಂದೂ ಸಂಪ್ರದಾಯದಂತೆ ಉಡುಗೆಯನ್ನೂ ಸಹ ಆಮಿರ್ ಖಾನ್ ಧರಿಸುವುದು ನೆಟ್ಟಿಗರ ಗಮನವನ್ನು ಸೆಳೆದಿದೆ. ಇದು ಆಮಿರ್ ಖಾನ್ ಆರಂಭಿಸಿರುವ ತಮ್ಮ ಹೊಸ ಚಿತ್ರ ನಿರ್ಮಾಣ ಸಂಸ್ಥೆಯ ಕಛೇರಿಯಲ್ಲಿ ನಡೆದ ಪೂಜೆಯ ಚಿತ್ರಗಳಾಗಿವೆ.

ಆದರೂ ಟ್ರೋಲ್ ಆದ ಆಮಿರ್ ಖಾನ್
ಹೀಗೆ ಆಮಿರ್ ಖಾನ್ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರೂ ಸಹ ಟ್ರೋಲ್ ಆಗಿದ್ದಾರೆ. ಕೆಲ ನೆಟ್ಟಿಗರು ಸೋತ ಮೇಲೆ ಬುದ್ಧಿ ಬಂತಾ, ಈ ಬುದ್ಧಿ ಮೊದಲಿನಿಂದಲೂ ಇದ್ದಿದ್ದರೆ ಸೋತು ಸುಣ್ಣವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದರೆ, ಇನ್ನೂ ಕೆಲವರು ಇದು ಸಿನಿ ರಸಿಕರನ್ನು ಮೆಚ್ಚಿಸಲು ಮಾಡುತ್ತಿರುವ ಡ್ರಾಮಾ ಎಂದೂ ಸಹ ಕಾಮೆಂಟ್ ಮಾಡಿದ್ದಾರೆ.

ಮಾಜಿ ಪತ್ನಿಯೂ ಭಾಗಿ
ಇನ್ನು ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಕೂಡ ಭಾಗಿಯಾಗಿರುವುದು ಮತ್ತೊಂದು ಗಮನಾರ್ಹ ವಿಷಯವಾಗಿದೆ. ಸುಮಾರು ಹದಿನೈದು ವರ್ಷಗಳ ಕಾಲದ ಸುದೀರ್ಘ ದಾಂಪತ್ಯ ಜೀವನಕ್ಕೆ ವಿಚ್ಛೇದನ ಪಡೆದುಕೊಂಡು ಅಂತ್ಯ ಹಾಡಿದ್ದ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.