»   » 'ಮಹಾಭಾರತ' ಸಿನಿಮಾ ಮಾಡೋದು ಈ ನಟನ ಕನಸಂತೆ.!

'ಮಹಾಭಾರತ' ಸಿನಿಮಾ ಮಾಡೋದು ಈ ನಟನ ಕನಸಂತೆ.!

Posted By:
Subscribe to Filmibeat Kannada

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ.....ಹೀಗೆ ಎಲ್ಲಾ ಭಾಷೆಯಲ್ಲೂ ಮಹಾಭಾರತ ಕುರಿತು ಸಿನಿಮಾ ಮಾಡುವ ಸುದ್ದಿಗಳು ಕೇಳಿ ಬರುತ್ತಿದೆ.

ಈಗಾಗಲೇ ಕನ್ನಡದಲ್ಲಿ ಕುರುಕ್ಷೇತ್ರ ಸಿನಿಮಾ ಆರಂಭವಾಗಿದೆ. ನಿರ್ದೇಶಕ ಯೋಗರಾಜ್ ಭಟ್ಟರು ಮಹಾಭಾರತ ಸ್ಕ್ರಿಪ್ಟ್ ಸಿದ್ದ ಮಾಡುತ್ತಿದ್ದಾರಂತೆ. ಇನ್ನು 'ಬಾಹುಬಲಿ' ಖ್ಯಾತಿಯ ನಿರ್ದೇಶಕ ರಾಜಮೌಳಿ ಮಹಾಭಾರತ ಸಿನಿಮಾ ಮಾಡಲಿದ್ದು, ಪ್ಲಾನಿಂಗ್ ಮಾಡ್ತಿದ್ದಾರಂತೆ.

ಮತ್ತೊಂದೆಡೆ ದುಬೈ ಉದ್ಯಮಿಯೊಬ್ಬರು ಮೋಹನ ಲಾಲ್, ರಜನಿಕಾಂತ್ ಸೇರಿದಂತೆ ಹಲವು ಖ್ಯಾತ ನಟರ ಜೊತೆ ಮಹಾಭಾರತ ಮಾಡಲು ಚಿಂತಿಸಿದ್ದಾರಂತೆ. ಇಷ್ಟೆಲ್ಲಾ ಬೆಳವಣಿಗೆಗಳು ಆಗುತ್ತಿರುವಾಗಲೇ ಈಗ ಮತ್ತೊರ್ವ ನಟ ಮಹಾಭಾರತ ಸಿನಿಮಾ ಮಾಡುವುದು ನನ್ನ ಕನಸು ಎಂದಿದ್ದಾರೆ. ಯಾರದು? ಮುಂದೆ ಓದಿ......

'ಮಹಾಭಾರತ' ಅಮೀರ್ ಖಾನ್ ಕನಸಂತೆ

ಮಹಾಭಾರತ ಕುರಿತು ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ ಮತ್ತು ಅದು ನನ್ನ ಕನಸು ಎಂದು ನಟ ಅಮೀರ್ ಖಾನ್ ಇತ್ತೀಚೆಗೆ ಸುದ್ಧಿಗೋಷ್ಟಿಯೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಮೀರ್ ಗೆ ಯಾವ ಪಾತ್ರ ಇಷ್ಟ.!

ಮಹಾಭಾರತದಲ್ಲಿ ಕರ್ಣನ ಪಾತ್ರ ಅಮೀರ್ ಖಾನ್ ಗೆ ತುಂಬ ಇಷ್ಟವಂತೆ. ಆದ್ರೆ, ಕರ್ಣನ ಪಾತ್ರಕ್ಕೆ ತಮ್ಮ ದೇಹ ಹೊಂದಿಕೊಳ್ಳುವುದು ಕಷ್ಟವಾಗಬಹುದು, ಹಾಗಾಗಿ, ಕೃಷ್ಣ ಅಥವಾ ಅರ್ಜುನನ ಪಾತ್ರವನ್ನ ನಿರ್ವಹಿಸಲು ಇಷ್ಟಪಡುತ್ತಾರಂತೆ.

ಸೌತ್ ಸೂಪರ್ ಸ್ಟಾರ್ ಜೊತೆ ಮಾಡುವ ಆಸೆ

ದಕ್ಷಿಣ ಭಾರತದ ಖ್ಯಾತ ನಟರಾದ ರಜನಿಕಾಂತ್, ಚಿರಂಜೀವಿ, ಪವನ್ ಕಲ್ಯಾಣ್ ಅವರ ಜೊತೆಯಲ್ಲಿ ಈ ಮಹಾಭಾರತ ಸಿನಿಮಾ ಮಾಡಲು ಇಷ್ಟವಂತೆ.

ರಾಜಮೌಳಿ ಚಿತ್ರದಲ್ಲಿ ನಟಿಸಲು ಇಷ್ಟವಿದೆ

ಇನ್ನು ರಾಜಮೌಳಿ ಅವರ ಕೆಲಸವನ್ನ ಮೆಚ್ಚಿಕೊಂಡಿರುವ ಅಮೀರ್ ಖಾನ್, ಒಂದು ವೇಳೆ ರಾಜಮೌಳಿ ಅವರು ಮಹಾಭಾರತದಲ್ಲಿ ನನಗೆ ಅರ್ಜುನ ಅಥವಾ ಕೃಷ್ಣನ ಪಾತ್ರ ನೀಡಿದರೇ ಖಂಡಿತಾ ಮಾಡುತ್ತೇನೆ ಎಂದಿದ್ದಾರೆ.

'ಸೀಕ್ರೆಟ್ ಸೂಪರ್ ಸ್ಟಾರ್' ಬಿಡುಗಡೆ

ಸದ್ಯ, ಅಮೀರ್ ಖಾನ್ ಅಭಿನಯಿಸಿರುವ 'ಸೀಕ್ರೆಟ್ ಸೂಪರ್ ಸ್ಟಾರ್' ಸಿನಿಮಾ ದೀಪಾವಳಿ ವಿಶೇಷವಾಗಿ ರಿಲೀಸ್ ಆಗಲಿದೆ. ಹೀಗಾಗಿ, ಈ ಚಿತ್ರದ ಪ್ರಚಾರದಲ್ಲಿ ಅಮೀರ್ ಖಾನ್ ತೊಗಡಿಕೊಂಡಿದ್ದಾರೆ.

English summary
Recently while promoting his upcoming release Secret Superstar in Vadodara, Aamir Khan opened up about his dream project, Mahabharata.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada