For Quick Alerts
  ALLOW NOTIFICATIONS  
  For Daily Alerts

  ಆಮಿರ್ ಖಾನ್ ಪುತ್ರಿಯ ನಿಶ್ಚಿತಾರ್ಥ: ಹಲವು ಸೆಲೆಬ್ರಿಟಿಗಳು ಭಾಗಿ

  |

  ಬಾಲಿವುಡ್‌ ಖ್ಯಾತ ನಟ ಆಮಿರ್ ಖಾನ್‌ರ ಪುತ್ರಿ ಇರಾ ಖಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖಾರೆ ಜೊತೆ ಉಂಗುರ ಬದಲಾಯಿಸಿಕೊಂಡಿದ್ದಾರೆ.

  ಇರಾ ಖಾನ್ ಹಾಗೂ ನೂಪುರ್ ಶಿಖಾರೆ ಹಲ ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇವರ ಪ್ರೀತಿಗೆ ಆಮಿರ್ ಖಾನ್ ಸಹ ಸಮ್ಮತಿ ಸೂಚಿಸಿದ್ದಾರೆ. ಹಲವು ವರ್ಷ ಪ್ರೀತಿಯಲ್ಲಿದ್ದ ಬಳಿಕ ಇತ್ತೀಚೆಗೆ ನೂಪುರ್ ಶಿಖಾರೆ, ಇರಾ ಖಾನ್‌ಗೆ ಪ್ರೊಪೋಸ್ ಮಾಡಿದ್ದರು. ಇರಾ ಖಾನ್ ಸಹ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದರು.

  ಈಗ ಈ ಜೋಡಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲಿವೇ ವಿವಾಹ ಸಹ ಆಗಲಿದ್ದಾರೆ. ನವೆಂಬರ್ 18 ರಂದು ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಜೋಡಿಪರಸ್ಪರ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ಈ ಯುವ ಜೋಡಿಯ ಸಂಭ್ರಮವನ್ನು ಹೆಚ್ಚಿಸಲು ಸ್ವತಃ ಆಮಿರ್ ಖಾನ್, ನಟ ಇಮ್ರಾನ್ ಖಾನ್, ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ಇನ್ನೂ ಹಲವರು ಆಗಮಿಸಿದ್ದರು. ನಟ ಇಮ್ರಾನ್ ಖಾನ್ ಬಹುದಿನಗಳ ಬಳಿಕ ಪಾಪರಾಟ್ಜಿಗಳ ಕಣ್ಣಿಗೆ ಬಿದ್ದಿದ್ದು ವಿಶೇಷ.

  ನೂಪುರ್ ಶಿಖಾರೆ ಫಿಸಿಕಲ್ ಟ್ರೈನರ್ ಆಗಿದ್ದರು. ಆಮಿರ್ ಖಾನ್ ಹಾಗೂ ಇರಾ ಖಾನ್‌ಗೆ ಫಿಸಿಕಲ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಫಿಸಿಕಲ್ ಟ್ರೈನರ್ ಅನ್ನೇ ಇರಾ ಖಾನ್ ಪ್ರೀತಿಸಿದರು. ಇಬ್ಬರು ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದಾರೆ.

  ಎನ್‌ಜಿಓ ನಡೆಸುತ್ತಿರುವ ಇರಾ ಖಾನ್, ಸಿನಿಮಾ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ನಾಟಕ 'ಮೇದಿಯಾ'ವನ್ನು ಇರಾ ಖಾನ್ ತೆರೆಗೆ ತರಲಿದ್ದು, ಆ ಸಿನಿಮಾದಲ್ಲಿ ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

  ಇರಾ ಖಾನ್ ಹೊರತಾಗಿ ಆಮಿರ್ ಖಾನ್‌ಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ. ಆಮಿರ್‌ ಖಾನ್‌ರ ಮೊದಲ ಪತ್ನಿ ರೀನಾ ದತ್ತ ಅವರಿಂದ ಇಬ್ಬರು ಮಕ್ಕಳನ್ನು ಆಮಿರ್ ಖಾನ್ ಪಡೆದಿದ್ದಾರೆ. ಅವರೇ ಇರಾ ಖಾನ್ ಹಾಗೂ ಜುನೈದ್ ಖಾನ್. ಆ ಬಳಿಕ ಕಿರಣ್ ರಾವ್ ಅನ್ನು ಮದುವೆಯಾದ ಆಮಿರ್ ಖಾನ್ ಸೆರೊಗೆಟರಿ ಮಾದರಿಯಲ್ಲಿ ಮಗುವೊಂದನ್ನು ಪಡೆದಿದ್ದಾರೆ. ಇತ್ತೀಚೆಗೆ ಕಿರಣ್ ರಾವ್‌ಗೂ ಸಹ ಆಮಿರ್ ಖಾನ್ ವಿಚ್ಛೇದನ ನೀಡಿದ್ದಾರೆ.

  English summary
  Aamir Khan's daughter Ira Khan engaged to her long time boy friend Nupur Shikhare. Aamir Khan and many other celebrities attended the function.
  Saturday, November 19, 2022, 10:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X