For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ವೇಳೆ ಅಭಿಷೇಕ್‌ಗೆ ಪೆಟ್ಟು, ಆಸ್ಪತ್ರೆಗೆ ಧಾವಿಸಿದ ಅಮಿತಾಭ್

  |

  ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಚಿತ್ರೀಕರಣ ಮಾಡುವ ವೇಳೆ ಪೆಟ್ಟು ಬಿದ್ದಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಜೂನಿಯರ್ ಬಚ್ಚನ್ ಗಾಯವಾಗಿರುವ ವಿಷಯ ತಿಳಿದ ನಂತರ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಸಹೋದರಿ ಸಹೋದರಿ ಶ್ವೇತಾ ಬಚ್ಚನ್ ನಂದಾ ಭಾನುವಾರ (ಆಗಸ್ಟ್ 22) ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

  ಅಭಿಷೇಕ್ ನೋಡಲು ಧಾವಿಸಿದ ಬಿಗ್ ಬಿ ಮತ್ತು ಶ್ವೇತಾ ಬಚ್ಚನ್ ಆಸ್ಪತ್ರೆ ಮುಂಭಾಗದಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

   'ತಂದೆಗಿಂತ ನೀವು ಉತ್ತಮ ನಟ' ಎಂದವರಿಗೆ ಅಭಿಷೇಕ್ ಬಚ್ಚನ್ ಹೇಳಿದ್ದೇನು? 'ತಂದೆಗಿಂತ ನೀವು ಉತ್ತಮ ನಟ' ಎಂದವರಿಗೆ ಅಭಿಷೇಕ್ ಬಚ್ಚನ್ ಹೇಳಿದ್ದೇನು?

  ಕೆಲವು ದಿನಗಳ ಹಿಂದೆ ಶೂಟಿಂಗ್ ಮಾಡುವ ವೇಳೆ ಗಾಯಗೊಂಡ ಹಿನ್ನೆಲೆ ಅಭಿಷೇಕ್ ಬಚ್ಚನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಬಹಿರಂಗಪಡಿಸಿದೆ. ಜೂನಿಯರ್ ಬಚ್ಚನ್ ಕೈಗೆ ಪೆಟ್ಟು ಬಿದ್ದಿದ್ದು, ಬೆರಳುಗಳಿಗೆ ಬ್ಯಾಂಡೇಜ್ ಮತ್ತು ಬಲಗೈಗೆ ಕಟ್ಟು ಹಾಕಿರುವುದು ಫೋಟೋಗಳಲ್ಲಿ ತಿಳಿದಿದೆ.

  ಅಂದ್ಹಾಗೆ, ಅಭಿಷೇಕ್ ಬಚ್ಚನ್ ಪತ್ನಿ, ನಟಿ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ಜೊತೆಗೆ ಮಣಿರತ್ನಂ ನಿರ್ದೇಶನದ ನಿರೀಕ್ಷಿತ ಚಿತ್ರ 'ಪೊನ್ನಿಯನ್ ಸೆಲ್ವನ್' ಚಿತ್ರೀಕರಣಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದರು. ಆಗಸ್ಟ್ 23 ರಂದು ಐಶ್ವರ್ಯ ಮತ್ತು ಆರಾಧ್ಯ ಮುಂಬೈಗೆ ಮರಳಿದ್ದಾರೆ. ಅಭಿಷೇಕ್ ಬಚ್ಚನ್ ಕೊನೆಯದಾಗಿ 'ದಿ ಬಿಗ್ ಬುಲ್' ಸಿನಿಮಾದಲ್ಲಿ ಕಾಣಿಸಿಕೊಂಡರು. ಇನ್ನು ಚಿತ್ರಾಂಗದಾ ಸಿಂಗ್ ಜೊತೆಯಲ್ಲಿ 'ಬಾಬ್ ಬಿಸ್ವಾಸ್' ಚಿತ್ರದಲ್ಲೂ ಅಭಿನಯಿಸಿದ್ದು, ಬಿಡುಗಡೆಯಾಗಬೇಕಿದೆ.

  ಐಶಾರಾಮಿ ಮನೆ ಮಾರಿದ ಅಭಿಷೇಕ್ ಬಚ್ಚನ್: ಕಾರಣ?ಐಶಾರಾಮಿ ಮನೆ ಮಾರಿದ ಅಭಿಷೇಕ್ ಬಚ್ಚನ್: ಕಾರಣ?

  ಅಮಿತಾಬ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್‌ಪತಿ ಸೀಸನ್ 13' ಕಾರ್ಯಕ್ರಮ ಆಗಸ್ಟ್ 23 ರಂದು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಸಾರವಾಗಲಿದೆ. ಅಮಿತಾಭ್, ಇಮ್ರಾನ್ ಹಶ್ಮಿ, ರಿಯಾ ಚಕ್ರವರ್ತಿ ನಟನೆಯ ಚೆಹ್ರೆ ಸಿನಿಮಾ ಆಗಸ್ಟ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದೆ. ಇನ್ನುಳಿದಂತೆ ಬ್ರಹ್ಮಾಸ್ತ್ರ, ವಿದಾಯ್, ಜುಂಡ್, ಮೇಡೇ, ಗುಡ್‌ಬೈ ಅಂತಹ ಚಿತ್ರಗಳಲ್ಲಿ ಬಚ್ಚನ್ ಅಭಿನಯಿಸುತ್ತಿದ್ದಾರೆ.

  ಅಮಿತಾಭ್ ಬಚ್ಚನ್ ಕಾರ್ ಸೀಜ್

  ಬೆಂಗಳೂರಿನಲ್ಲಿ ಭಾನುವಾರ ಆರ್‌ಟಿಓ ಅಧಿಕಾರಿಗಳು ಕೆಲವು ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದು, ಅದರಲ್ಲಿ ನಟ ಅಮಿತಾಭ್ ಬಚ್ಚನ್‌ಗೆ ಸೇರಿದ ಕಾರ್ ಇದೆ ಎನ್ನುವ ವಿಚಾರ ಬಯಲಾಗಿದೆ. ಅಮಿತಾಭ್ ಹೆಸರಿನಲ್ಲಿರುವ ರೋಲ್ಸ್ ರಾಯ್ಸ್ ಕಾರನ್ನು ಸಲ್ಮಾನ್ ಖಾನ್ ಎಂಬ ವ್ಯಕ್ತಿ ಖರೀಸಿದ್ದು, ದಾಖಲೆಗಳಿಲ್ಲದೆ ನಗರದಲ್ಲಿ ಚಲಾಯಿಸುತ್ತಿದ್ದರು ಎಂದು ವರದಿಯಾಗಿದೆ. ಹಾಗಾಗಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  English summary
  Bollywood Actor Abhishek Bachchan hospitalized after getting injured during the shooting. Amitabh Bachchan visits to hospital.
  Monday, August 23, 2021, 21:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X